ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ 1ರಂದು

Krishna
Krishna
Published on

ಬೆಳಗಾವಿ: ಪ್ರತಿವರ್ಷದಂತೆ ಈ ಬಾರಿಯೂ ರಾಜ್ಯದ ನಂ.1 ದಿನಪತ್ರಿಕೆ ವಿಜಯವಾಣಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ.1ರಂದು ‘ಕೃಷ್ಣವೇಷ ಫ್ಯಾನ್ಸಿ ಡ್ರೆಸ್ ಸ್ಪರ್ಧೆ’ ಹಮ್ಮಿಕೊಂಡಿದೆ.

ಸುಭಾಸ ಫೋಟೋಸ್, ಜಯಭಾರತ ಫೌಂಡೇಷನ್ ಸಹಯೋಗದಲ್ಲಿ ಕಿತ್ತೂರು ಚನ್ನಮ್ಮ ವೃತ್ತದ ಬಳಿಯ ಕಾಲೇಜ್ ರಸ್ತೆಯಲ್ಲಿನ ಆನಂದಿ ಶಂಕರ ಹೆರಿಟೇಜ್ (ಟಿಜೆಎಸ್‌ಬಿ ಬ್ಯಾಂಕ್ ಮೇಲಿನ ಮಹಡಿ-ಹೋಟೆಲ್ ಖೈಬರ್)ನಲ್ಲಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.30 ಗಂಟೆಗೆ ಕಾರ್ಯಕ್ರಮ ಜರುಗಲಿದೆ.

0 ರಿಂದ 5 ಮತ್ತು 6 ರಿಂದ 12 ವರ್ಷ ವಯಸ್ಸಿನ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎರಡೂ ವಿಭಾಗಗಳ ಮೊದಲ ಮೂವರು ವಿಜೇತರಿಗೆ ನಗದು ಹಾಗೂ ಸಮಾಧಾನಕರ ಬಹುಮಾನಗಳಿವೆ. ಸ್ಫರ್ಧಾಳುಗಳ ಪಾಲ್ಗೊಳ್ಳುವಿಕೆ ಗರಿಷ್ಠ ಸಂಖ್ಯೆ 100 ಆಗಿದ್ದು, ಎಲ್ಲ ಸ್ಪರ್ಧಾಳುಗಳಿಗೆ ಫೋಟೋ ಫ್ರೇಮ್ ಒಳಗೊಂಡ ಪ್ರಮಾಣಪತ್ರ ನೀಡಲಾಗುವುದು.

ಉಚಿತ ಪ್ರವೇಶವಿರುವ ಸ್ಪರ್ಧೆಯಲ್ಲಿ ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ. ಸ್ಪರ್ಧೆ ನೋಂದಣಿಗೆ ಮೊ: 8884432338, 8884431960, 8884432467 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net