ಸೆ.11ರಂದು ಬೆಂಗಳೂರಿನ ಇ.ಡಿ ವಲಯ ಕಚೇರಿಗೆ ಪ್ರಭಾವಿ ವ್ಯಕ್ತಿಯೋರ್ವನಿಂದ ದೂರು ಸಲ್ಲಿಕೆಯಾಗಿದ್ದು, ಪ್ರಕರಣದಲ್ಲಿ ಎನ್‌ಫೋರ್ಸ್‌ಮೆಂಟ್ ಕೇಸ್ ಇನ್ಫರ್ಮೇಷನ್ ರಿಪೋರ್ಟ್ (ಇಸಿಐಆರ್) ದಾಖಲಿಸಿ ತನಿಖೆ ಆರಂಭಿಸುವಂತೆ ಮನವಿ ಮಾಡಲಾಗಿದೆ. ಅಭ್ಯರ್ಥಿಗಳಿಂದ ಲಕ್ಷ್, ಲಕ್ಷ್ ಲಂಚ, ಪರೀಕ್ಷಾ ಅಕ್ರಮ, ಅಧಿಕಾರ ದುರುಪಯೋಗ, ಪ್ರಶ್ನೆ ಪತ್ರಿಕೆ ಸೋರಿಕೆ, ಒಎಂಆರ್ ಶೀಟ್ ತಿದ್ದುಪಡಿ, ಉತ್ತರ ಪತ್ರಿಕೆಗಳಲ್ಲಿ ಅಂಕಗಳ ಮಾರ್ಪಾಡು ಹಾಗೂ ಸರ್ಕಾರಿ ಹುದ್ದೆಗಳ ಮಾರಾಟದ ಮೂಲಕ ಅಕ್ರಮವಾಗಿ ಸಂಪಾದಿಸಲಾಗಿದೆ ಎನ್ನಲಾದ ಹಣದ ಮೂಲ ಪತ್ತೆ ಹಚ್ಚಿ, ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡುವಂತೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.