ಕೋಲಾರದಲ್ಲಿ ೫.೫೫ ಕೋಟಿ ವೆಚ್ಚದ ಸುಸಜ್ಜಿತ ಈಜುಕೊಳ ನಿರ್ಮಾಣಕ್ಕೆ ಅಡಿಗಲ್ಲು

ಚಿತ್ರ ೧೨ ಕೆ.ಎಲ್.ಆರ್. ೦೧ : ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಈಜುಕೊಳ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಅಡಿಗಲ್ಲು ಸಮರ್ಪಿಸಿದರು. ವಿಧಾನಪರಿಷತ್ತು ಸದಸ್ಯರಾದ ಇಂಚರ ಗೋವಿಂದರಾಜು, ಅನಿಲ್‌ಕುಮಾರ್ ಮುಂತಾದವರು ಇದ್ದರು.
ಚಿತ್ರ ೧೨ ಕೆ.ಎಲ್.ಆರ್. ೦೧ : ನಗರದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಈಜುಕೊಳ ನಿರ್ಮಾಣಕ್ಕೆ ಶಾಸಕ ಕೊತ್ತೂರು ಮಂಜುನಾಥ್ ಅಡಿಗಲ್ಲು ಸಮರ್ಪಿಸಿದರು. ವಿಧಾನಪರಿಷತ್ತು ಸದಸ್ಯರಾದ ಇಂಚರ ಗೋವಿಂದರಾಜು, ಅನಿಲ್‌ಕುಮಾರ್ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ನಗರ ನಿವಾಸಿಗಳ ಬಹುದಿನಗಳ ಕನಸ್ಸಾಗಿ ಉಳಿದಿದ್ದ ಒಳಾಂಗಣ ಕ್ರೀಡಾಂಗಣದ ಹಿಂಭಾಗದಲ್ಲಿ ೫.೫೫ ಕೋಟಿ ರೂ.ಗಳ ವೆಚ್ಚದಲ್ಲಿ ಈಜುಕೊಳ ನಿರ್ಮಾಣಕ್ಕೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಸೋಮವಾರ ಅಡಿಗಲ್ಲು ಸಮರ್ಪಿಸಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕೈಗೆತ್ತಿಕೊಳ್ಳಲಾಗಿರುವ ಈ ಮಹತ್ವ ಯೋಜನೆಯಾಗಿದ್ದು, ಈ ಕಾಮಗಾರಿಗಾಗಿ ಒಟ್ಟು ರೂ. ೫ ಕೋಟಿ ೫೫ ಲಕ್ಷದ ೫೧ ಸಾವಿರದ ೫೧೮ ಗಳ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಈ ಯೋಜನೆಯಲ್ಲಿ ಈಜುಕೊಳದೊಂದಿಗೆ ಸುಸಜ್ಜಿತ ಚೇಂಜ್ ರೂಮ್‌ಗಳು, ಆಧುನಿಕ ಎಲೆಕ್ಟ್ರೋ-ಮೆಕ್ಯಾನಿಕಲ್ ಫಿಲ್ಟರೇಶನ್ ವ್ಯವಸ್ಥೆ ಹಾಗೂ ಅಗತ್ಯ ವಿದ್ಯುದೀಕರಣ ಕಾಮಗಾರಿಗಳು ಒಳಗೊಂಡಿವೆ.
ಅಡಿಗಲ್ಲು ನೆರವೇರಿಸಿ ಮಾತನಾಡಿದ ಶಾಸಕರು, ಕೋಲಾರದ ಕ್ರೀಡಾಪಟುಗಳ ದಶಕಗಳ ಬೇಡಿಕೆ ಇಂದು ಈಡೇರುತ್ತಿದೆ. ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡು ಮುಂದಿನ ೧೧ ತಿಂಗಳ ಅವಧಿಯೊಳಗೆ ಈಜುಕೊಳವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸುವಂತೆ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಂ.ಎಲ್. ಅನಿಲ್‌ಕುಮಾರ್ ಮಾತನಾಡಿ, ಕ್ರೀಡಾ ಇಲಾಖೆಯ ಈ ಯೋಜನೆಯು ಜಿಲ್ಲೆಯ ಯುವಜನತೆಗೆ ಮತ್ತು ಈಜು ಕಲಿಯುವ ಆಸಕ್ತರಿಗೆ ವರದಾನವಾಗಲಿದೆ. ಕಾಲಮಿತಿಯೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಬೆಂಗಳೂರಿನ ಮೆ|| ಸನ್ ಶೈನ್ ಪೂಲ್ಸ್ ಸಂಸ್ಥೆಗೆ ಈ ಕಾಮಗಾರಿಯ ಹೊಣೆ ನೀಡಲಾಗಿದ್ದು, ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಉಸ್ತುವಾರಿಯಲ್ಲಿ ಕೆಲಸ ನಡೆಯಲಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದ ರಾಜು, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಕುಮಾರ್, ಕೂಡ ಅಧ್ಯಕ್ಷ ಹನೀಪ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿ, ಜಿಲ್ಲಾ ಎಸ್.ಸಿ. ಘಟಕದ ಅಧ್ಯಕ್ಷ ಜಯದೇವ್, ಕೋಮುಲ್ ನಿರ್ದೇಶಕ ಚಂಜಿಮಲೆ ರಮೇಶ್, ಗ್ರಾಮೀಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಾದ ಕೆ.ಎನ್.ಮಂಜುನಾಥ್, ಸತೀಶ್, ಇಲಾಖೆಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net