ಕೋಮುಲ್​ಗಿದೆ ವಿಶ್ವಮಟ್ಟದ ಪ್ರಾಶಸ Komul

ಕೋಮುಲ್​ಗಿದೆ ವಿಶ್ವಮಟ್ಟದ ಪ್ರಾಶಸ Komul
ಕೋಮುಲ್​ಗಿದೆ ವಿಶ್ವಮಟ್ಟದ ಪ್ರಾಶಸ Komul
Published on
ಮುಳಬಾಗಿಲು: ಭಾರತೀಯ ಸಂಸತಿ, ಪರಂಪರೆಗಳಲ್ಲಿ ಗೋವಿಗೆ ಪೂಜ್ಯನಿಯ ಸ್ಥಾನ ನೀಡಲಾಗಿದೆ. ಕೆಎಂಎಫ್​ ಮತ್ತು ಕೋಮುಲ್​ ಹಾಲಿನ ಶ್ರೇಷ್ಠತೆ ಕಾಪಾಡಿಕೊಳ್ಳುವ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಮಾಡಿದೆ ಎಂದು ಮುಳಬಾಗಿಲು ಪೂರ್ವ ಕ್ಷೇತ್ರದ ಕೋಮುಲ್​ ನಿರ್ದೇಶಕ ಕಾಡೇನಹಳ್ಳಿ ಕೆ.ಎನ್​.ನಾಗರಾಜ್​ ಹೇಳಿದರು.Komul
ತಾಲೂಕಿನ ಕಾಶಿಪುರ ಗೇಟ್​ನಲ್ಲಿ ಶುಕ್ರವಾರ ನಂದಿನಿ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ಅವರು,
ತಿರುಪತಿ ತಿಮ್ಮಪ್ಪನ ಲಡ್ಡು ತಯಾರಿಕೆಗೆ ಕೋಲಾರ ಒಕ್ಕೂಟದಿಂದ ತುಪ್ಪ ಕಳಿಸಿಕೊಡಲಾಗುತ್ತದೆ. ಅದೇ ರೀತಿ ದೇಶ, ವಿದೇಶಗಳಿಗೂ ನಂದಿನಿ ಉತ್ಪನ್ನ ಸರಬರಾಜು ಆಗುತ್ತಿದ್ದು, ನಂದಿನಿ ಉತ್ಪನ್ನ ವಿಶ್ವ ಮುನ್ನಡೆ ಗಳಿಸಿದೆ ಎಂದರು.
ಮುಳಬಾಗಿಲು ಪಶ್ಚಿಮ ಕ್ಷೇತ್ರದ ಕೋಮುಲ್​ ನಿರ್ದೇಶಕ ಬಿ.ವಿ. ಸಾಮೇಗೌಡ ಮಾತನಾಡಿ, ನಂದಿನಿ ಉತ್ಪನ್ನಗಳು ವಿಶೇಷವಾಗಿ ಹಾಲು, ತುಪ್ಪ, ಬೆಣ್ಣೆ, ಮಜ್ಜಿಗೆ, ಮೊಸರು ಸೇರಿ ಎಲ್ಲ ವಿದಧ ಪದಾರ್ಥಗಳು ಗುಣಮಟ್ಟದಿಂದ ಕೂಡಿದೆ. ಕಲಬೆರಿಕೆ ಆಗಲು ಸಾಧ್ಯವಿಲ್ಲ. ಗ್ರಾಹಕರಿಗೆ ಉತ್ಪನ್ನಗಳು ಹತ್ತಿರದಲ್ಲೇ ಸಿಗಬೇಕೆಂಬ ನಿಟ್ಟಿನಲ್ಲಿ ಪ್ರಮುಖ ಸ್ಥಳಗಳಲ್ಲಿ ನಂದಿನಿ ಉತ್ಪನ್ನ ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು. ತಾಲೂಕು ಜೆಡಿಎಸ್​ ವಕ್ತಾರ ವಕೀಲ ಎಂ.ಎಸ್​.ಶ್ರೀನಿವಾಸ ರೆಡ್ಡಿ ಮಾತನಾಡಿ, ಜೆಡಿಎಸ್​ ಮೊದಲಿಂದಲೂ ರೈತರ ಪರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಅಧಿಕಾರ, ಅಂತಸ್ತುಗಳಿಗಿಂತ ಜನರೊಂದಿಗೆ ಸಹಕಾರ ಸಂಪರ್ಕವೇ ಮೇಲ್ಪಂಕ್ತಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net