ಕೋಲಾರ ಪೋಲಿಸರ ಸಾಹಸ

ಚಿತ್ರ ೨೯ ಕೆ.ಎಲ್.ಆರ್. ೦೭ : ಕೋಲಾರ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸ್ವತ್ತುಗಳನ್ನು ವಾರಸ್ಸುದಾರರಿಗೆ ಎಸ್.ಪಿ ಬಿ.ನಿಖಿಲ್ ವಾಪಸ್ಸು ನೀಡುತ್ತಿರುವುದು. ಹೆಚ್ಚುವರಿ ಎಸ್.ಪಿ.ಜಗದೀಶ್, ಡಿ.ವೈ.ಎಸ್.ಪಿ. ಎನ್.ಹೆಚ್.ನಾಗ್ತೇ, ಸಿ.ಇ.ಎನ್. ಡಿ.ವೈ.ಎಸ್.ಪಿ. ರಾಜೇಶ್ ಮುಂತಾದವರು ಇದ್ದರು.
ಚಿತ್ರ ೨೯ ಕೆ.ಎಲ್.ಆರ್. ೦೭ : ಕೋಲಾರ ಜಿಲ್ಲೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾಗಿದ್ದ ಸ್ವತ್ತುಗಳನ್ನು ವಾರಸ್ಸುದಾರರಿಗೆ ಎಸ್.ಪಿ ಬಿ.ನಿಖಿಲ್ ವಾಪಸ್ಸು ನೀಡುತ್ತಿರುವುದು. ಹೆಚ್ಚುವರಿ ಎಸ್.ಪಿ.ಜಗದೀಶ್, ಡಿ.ವೈ.ಎಸ್.ಪಿ. ಎನ್.ಹೆಚ್.ನಾಗ್ತೇ, ಸಿ.ಇ.ಎನ್. ಡಿ.ವೈ.ಎಸ್.ಪಿ. ರಾಜೇಶ್ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳೆದ ಒಂದು ವರ್ಷದಿಂದ ದಾಖಲಾಗಿದ್ದ ೫೩೩ ಪ್ರಕರಣಗಳಲ್ಲಿ ೨.೫೭ ಕೋಟಿ ಮೌಲ್ಯದ ಸ್ವತ್ತುಗಳನ್ನು ವಾರಸ್ಸುದಾರರಿಗೆ ಸೋಮವಾರ ಎಸ್.ಪಿ. ಬಿ.ನಿಖಿಲ್ ನೇತೃತ್ವದಲ್ಲಿ ಹಿಂದಿರುಗಿಸಲಾಯಿತು.
ನಗರದ ಪೋಲಿಸ್ ಫೆರೇಡ್ ಮೈದಾನದಲ್ಲಿ ಏರ್ಪಡಿಸಲಾಗದ್ದ ಕಾರ್ಯಕ್ರಮದಲ್ಲಿ ವಾರಸ್ಸುದಾರರಿಗೆ ಸ್ವತ್ತುಗಳನ್ನು ವಿತರಿಸಿ ಮಾತನಾಡಿದ ಎಸ್.ಪಿ. ಬಿ.ನಿಖಿಲ್ ೨೦೨೫ ಜನವರಿಯಿಂದ ಡಿಸೆಂಬರ್ ತನಕ ಒಟ್ಟು ೫೩೩ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಚಿನ್ನ ೧೮೧೩.೦೪ ಗ್ರಾಂ, ಬೆಳ್ಳಿ ೩೧೪೩.೩೬ ಗ್ರಾಂ, ನಗದು ೭೬೨೮೨೦ ಲಕ್ಷ, ಶ್ರೀಗಂಧ ೧೪೬೦, ವಾಹನಗಳು ೨೫ ಹಾಗೂ ಮೊಬೈಲ್‌ಗಳು ೪೬೧ ಆಗಿದ್ದು, ಇವುಗಳಿಗೆ ವಾರಸ್ಸುದಾರರನ್ನು ಪತ್ತೆಹಚ್ಚಿ ಅವರಿಗೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ಕೋಲಾರ ಜಿಲ್ಲಾ ಪೋಲಿಸ್ ಇಲಾಖೆ ಅಪರಾಧ ಪತ್ತೆಹಚ್ಚುವಲ್ಲಿ ತನ್ನ ಸಮರ್ಥ ತನಿಖಾ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ಸಾರ್ವಜನಿಕರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವಲ್ಲಿ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ಜಿಲ್ಲಾ ಪೋಲಿಸ್ ಸಾರ್ವಜನಿಕರ ಸಹಕಾರದೊಂದಿಗೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಇಲಾಖೆಯ ಪಾರದರ್ಶಕತೆ, ಹೊಣೆಗಾರಿಕೆ, ಜನಸ್ನೇಹಿ ಕಾರ್ಯಪದ್ಧತಿ ಹಾಗೂ ಸಾರ್ವಜನಿಕ ವಿಶ್ವಾಸದ ಸ್ಪಷ್ಪ ಪ್ರತೀಕವಾಗಿದೆ ಎಂದರು.
ಗಾಂಜಾವಶ :
ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಗಾಂಜಾ ಮತ್ತು ಡ್ರಗ್ಸ್ ಸೇರಿದಂತೆ ಮಾದಕ ವಸ್ತುಗಳ ಬಗ್ಗೆ ೩೦ ಪ್ರಕರಣಗಳನ್ನು ಮತ್ತು ಮಾದಕ ದ್ರವ್ಯ ಸೇವನೆ ಮಾಡಿರುವವರ ಬಗ್ಗೆ ೩೦ ಪ್ರಕರಣಗಳನ್ನು ದಾಖಲಿಸಿ ಆ ಪೈಕಿ ೮೮೮ ಗ್ರಾಂ ಡ್ರಗ್ಸ್ ಮತ್ತು ೧೦೭.೧೯೮ ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ ೧೪೨೧೦೦೦೦ ರೂ.ಗಳಾಗಿದ್ದು, ಒಟ್ಟು ೮೮ ಜನರನ್ನು ದಸ್ತಗಿರಿ ಮಾಡಲಾಗಿದೆ ಎಂದರು.
ಸೈಬರ್ ಪ್ರಕರಣಗಳು :
ಸೈಬರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ೨೦೨೫ನೇ ಸಾಲಿನಲ್ಲಿ ಒಟ್ಟು ನಗದು ೩೪,೬೦,೪೫೬ ನಗದು ಹಣವನ್ನು ಆನ್‌ಲೈನ್ ಮೂಲಕ ವಂಚಿಸಿದ್ದ ಹಣವನ್ನು ಪತ್ತೆ ಹಚ್ಚಿ ವಾರಸ್ಸುದಾರರಿಗೆ ವಾಪಸ್ಸು ಕೊಡಲಾಗಿರುತ್ತದೆ. ೪,೨೮,೪೦೦ ರೂ.ಗಳ ಬೆಲೆ ಬಾಳುವ ೫೫.೧೨ ಗ್ರಾಂ ಬಂಗಾರದ ವಡವೆಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ನೀಡಲಾಗಿದೆ ಎಂದರು.
ಒಟ್ಟಾರೆ ಕೋಲಾರ ಜಿಲ್ಲೆಯಲ್ಲಿ ವಿವಿಧ ಪೋಲಿಸ್ ಠಾಣೆಗಳಲ್ಲಿ ಸ್ವತ್ತು ಕಳವು, ಸೈಬರ್ ಅಪರಾಧ ಪ್ರಕರಣಗಳಲ್ಲಿ ಮಾದಕ ದ್ರವ್ಯ, ಗಾಂಜಾ ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದ ಮೌಲ್ಯ ೯,೦೯,೭೫,೮೯೧.೦೦ ರೂ.ಗಳಾಗಿರುತ್ತದೆ ಎಂದು ಎಸ್.ಪಿ ಬಿ.ನಿಖಿಲ್ ಮಾಹಿತಿ ನೀಡಿದ್ದು, ಇವುಗಳನ್ನು ಪತ್ತೆಹಚ್ಚಲು ಸಹಕರಿಸಿದ ಪೋಲಿಸ್ ಇಲಾಖೆಯ ಅಧಿಕಾರಿಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net