ಮದುವೆಗೆ ನಿರಾಕರಿಸಿದ ಹಿನ್ನೆಲೆ ಪ್ರಿಯಕರ ತನ್ನ ಪ್ರಿಯತಮೆಗೆ ಚಾಕು ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದ ಬಂಗಾರಪೇಟೆ ಜಿಗ್ ಜಾಗ್ ರಸ್ತೆಯಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಬಂಗಾರಪೇಟೆ ತಾಲ್ಲೂಕು ಕತ್ತಹಳ್ಳಿ ಗ್ರಾಮದ ೨೭ ವರ್ಷದ ಸುಜಾತ ಕೊಲೆಯಾಗಿದ್ದಾಳೆ.
ಹೊಸಕೋಟೆ ಇಂಡಸ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಬಂಗಾರಪೇಟೆ ತಾಲ್ಲೂಕಿನ ಯಳಬುರ್ಗಿ ಗ್ರಾಮದ ಚಿರಂಜೀವಿ (೨೭) ಎಂಬಾತನಿAದಲೇ ಕೊಲೆಯಾದ ಗೃಹಿಣಿಯಾಗಿದ್ದಾಳೆ. ಚಾಕುವಿನಿಂದ ಇರಿದು ಕೊಲೆ ಮಾಡಿರುವ ಪಾಗಲ್ ಪ್ರೇಮಿ ಕೃತ್ಯ ಕಂಡ ಸ್ಥಳೀಯರು ಚಿರಂಜೀವಿಯನ್ನ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕತ್ತಿಹಳ್ಳಿಯಿಂದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೆಲಸಕ್ಕೆ ಹೊರಟಿದ್ದ ಯುವತಿಯನ್ನು ಕೋಲಾರದ ಬಳಿ ಅಡ್ಡಗಟ್ಟಿ ಚಾಕುವಿನಿಂದ ಹಿರಿದು ಕೊಲೆ ಮಾಡಿದ್ದಾನೆ.
ಇಬ್ಬರಿಗೂ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಕಳೆದ ಕೆಲವು ದಿನಗಳಿಂದ ಚಿರಂಜೀವಿ ಸುಜಾತಾಳನ್ನು ಮದುವೆಯಾಗುವಂತೆ ಬಲವಂತ ಮಾಡುತ್ತಿದ್ದ. ಆದರೆ ಸುಜಾತ ಒಪ್ಪಿರಲಿಲ್ಲ. ಹಾಗಾಗಿ ಇಬ್ಬರ ಮಧ್ಯೆ ಆಗಾಗ ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ರಾತ್ರಿ ಸಹ ಸುಜಾತ ಗ್ರಾಮಕ್ಕೆ ತೆರಳಿ ಮನೆ ಬಳಿ ಹೋಗಿದ್ದಾನೆ. ಸುಜಾತ ಈತನನ್ನ ನಿರ್ಲಕ್ಷö್ಯ ಮಾಡಿದ್ದಾಳೆ.
ಗುರುವಾರ ಮುಂಜಾನೆ ಉದ್ದೇಶ ಪೂರ್ವಕವಾಗಿಯೇ ಪೂರ್ವ ತಯಾರಿಯಾಗಿ ಚಾಕುವಿನೊಂದಿಗೆ ಬಂದಿದ್ದ ಚಿರಂಜೀವಿ ನರಸಾಪುರಕ್ಕೆ ಹೋಗಲು ಸುಜಾತ ಜಿಗ್‌ಜಾಗ್ ಮೇಲೆ ಹೈವೇ ರಸ್ತೆಗೆ ಹೋಗುತ್ತಿದ್ದಾಗ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿದನ್ನು ಕಂಡ ಸ್ಥಳೀಯರು ಆರೋಪಿಯನ್ನು ಹಿಡಿದು ಥಳಿಸಿ ಬಟ್ಟೆ ಬಿಚ್ವಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ನರಾಪುರದ ಬಡವೇ ಖಾಸಗಿ ಕಂಪನಿಯಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸುಜಾತ, ಕಳೆದ ಮೂರು ತಿಂಗಳ ಹಿಂದೆಯಷ್ಟೆ ಕೆಲಸಕ್ಕೆ ಸೇರಿದ್ದಳು. ಈ ಹಿಂದೆಯೂ ಹಣಕಾಸು ವಿಚಾರಕ್ಕೆ ಸುಜಾತ ಮೇಲೆ ಹಲ್ಲೆ ಮಾಡಿದ್ದ ಆರೋಪಿಯ ಕುರಿತು ಬಂಗಾರಪೇಟೆ ಪೊಲೀಸರಿಗೆ ದೂರು ನೀಡಲಾಗಿತ್ತು.
ಈ ಕುರಿತು ಬಂಗಾರಪೇಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲು ಮಾಡಿ, ನ್ಯಾಯ ಪಂಚಾಯಿತಿ ಸಹ ಮಾಡಲಾಗಿತ್ತು. ಆರೋಪಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುವಾಗ ಪರಿಚಯವಾಗಿ ಸ್ತ್ರೀಸಂಘಗಳ ಮುಖಾಂತರ ಸಾಲ ನೀಡಿ ಹಣ ವಸೂಲಿ ಮಾಡುತಿದ್ದ ಎನ್ನಲಾಗುತ್ತಿದೆ.
ಬಾಕ್ಸ್
ಆರೋಪಿ ಚಿರಂಜೀವಿ ವಿರುದ್ದ ಬಂಗಾರಪೇಟೆ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವು, ಆದರೂ ಕ್ರಮ ಕೈಗೊಂಡಿರಲಿಲ್ಲ. ಈಗ ನನ್ನ ಮಗಳ ಕೊಲೆ ಮಾಡಿ ಬಿಟ್ಟ. ಆಗಲೇ ಸರಿಯಾದ ಕ್ರಮ ಕೈಗೊಂಡಿದ್ದಿದ್ದರೆ ಇವತ್ತು ನನ್ನ ಮಗಳು ಬದುಕಿರುತಿದ್ದಳು ಎಂದು ಕೊಲೆಯಾದ ಸುಜಾತ ತಂದೆ ಕೃಷ್ಣಮೂರ್ತಿ ರೋಧಿಸಿದ್ದಾರೆ.
ಕೋಲಾರ ನಗರ ಪೊಲೀಸರು ಅರೋಪಿಯನ್ನ ಬಂಧಿಸಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಎಸ್.ಪಿ. ಕನ್ನಿಕಾ ಸುಕ್ರಿವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.