ಕೋಲಾರ ನಗರದಲ್ಲಿ ೨ನೇ ಹಂತದ ಸ್ವಚ್ಛತಾ ಅಭಿಯಾನ

ಚಿತ್ರ ೨೭ ಕೆ.ಎಲ್..ಆರ್. ೦೧ಎ : ಜಿಲ್ಲಾಧಿಕಾರಿ ಎಂ.ಆರ್.ರವಿ, ನಗರಸಭೆ ಆಯುಕ್ತ ನವೀನ್‌ಚಂದ್ರ, ಪಿಡಿ ಅಂಬಿಕಾ, ಹಳೇ ಸಂತೆ ಜಾಗವನ್ನು ವೀಕ್ಷಣೆ ಮಾಡುತ್ತಿರುವುದು.
ಚಿತ್ರ ೨೭ ಕೆ.ಎಲ್..ಆರ್. ೦೧ಎ : ಜಿಲ್ಲಾಧಿಕಾರಿ ಎಂ.ಆರ್.ರವಿ, ನಗರಸಭೆ ಆಯುಕ್ತ ನವೀನ್‌ಚಂದ್ರ, ಪಿಡಿ ಅಂಬಿಕಾ, ಹಳೇ ಸಂತೆ ಜಾಗವನ್ನು ವೀಕ್ಷಣೆ ಮಾಡುತ್ತಿರುವುದು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ನಗರದಲ್ಲಿ ೨ನೇ ಹಂತದ ಬೃಹತ್ ಸ್ವಚ್ಛತಾ ಆಂದೋಲನವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಸುಮಾರು ೨೫೦೦ ರಷ್ಟು ಕಸದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ನಗರವನ್ನು ಸುಂದರ ನಗರವನ್ನಾಗಿ ಮಾಡಲು ಜಿಲ್ಲಾಡಳಿತ ಮತ್ತು ನಗರಸಭೆ ಮುಂದಾಗಿದೆ.
ಮೊದಲನೇ ಹಂತವಾಗಿ ಡಿ.೧೪ ರಂದು ನಗರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವ ಮೂಲಕ ನಗರದಲ್ಲಿ ತುಂಬಿದ್ದ ಅರ್ಧದಷ್ಟು ಪಾರಂಪರಿಕ ಕಸವನ್ನು ಅಂದು ವಿಲೇವಾರಿ ಮಾಡಲಾಗಿತ್ತು. ೫೦ ಕ್ಕೂ ಹೆಚ್ಚು ಜೆಸಿಬಿಗಳು ಮತ್ತು ೧೦೦ಕ್ಕೂ ಹೆಚ್ಚು ಟಿಪ್ಪರ್‌ಗಳ ಮೂಲಕ ಕಸದ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿತ್ತು.
ಶನಿವಾರ ೨ನೇ ಹಂತದ ಸ್ವಚ್ಛತಾ ಕಾರ್ಯಕ್ಕೆ ಬೆಳ್ಳಿಗ್ಗ ೭ ಗಂಟೆಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಮತ್ತು ನಗರಸಭೆ ಆಯುಕ್ತ ನವೀನ್‌ಚಂದ್ರ ಚಾಲನೆ ನೀಡಿದರು. ೧೦ ಜೆಸಿಬಿಗಳು ಮತ್ತು ೧೪ ಟಿಪ್ಪರ್‌ಗಳು ಬೆಳ್ಳಂಬೆಳ್ಳಗ್ಗೆ ರಸ್ತೆಗಳಿದವು. ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ಸರ್ವೀಸ್ ರಸ್ತೆಗಳಲ್ಲಿರುವ ತ್ಯಾಜ್ಯ, ಮಣಿಘಟ್ಟ ರಸ್ತೆ, ಸಾನಿಟೋರಿಯಂ ಮತ್ತು ಸ್ಟೇಡಿಯಂ ಸುತ್ತಮುತ್ತಲು ಇದ್ದ ರಾಶಿ ರಾಶಿ ಕಸವನ್ನು ಮಂಜುಗಡ್ಡೆಯAತೆ ಕರಗಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡಿದರು. ಸುಮಾರು ೨೫೦೦ ಟನ್‌ಗಳಷ್ಟು ಕಸದ ತ್ಯಾಜ್ಯವನ್ನು ಬೆಳ್ಳಿಗ್ಗಿನಿಂದ ಸಂಜೆಯ ತನಕ ವಿಲೇವಾರಿ ಮಾಡಿದರು.
ಕೋಲಾರ ನಗರವನ್ನು ಸುಂದರ ನಗರವನ್ನಾಗಿ ಮಾಡಸಲು ಪಣತೊಟ್ಟಿರುವ ಜಿಲ್ಲಾಧಿಕಾರಿ ಎಂ.ಆರ್.ರವಿ ರವರಿಗೆ ನಗರಸಭೆ ಸೇರಿದಂತೆ ಗುತ್ತಿಗೆದಾರರು ಸಾಥ್ ನೀಡುತ್ತಿದ್ದಾರೆ. ಉಚಿತವಾಗಿ ಜೆಡಿಬಿ ಮತ್ತು ಟಿಪ್ಪರ್‌ಗಳನ್ನು ಗುತ್ತಿಗೆದಾರರು ಕಸ ವಿಲೇವಾರಿ ಮಾಡಲು ನೀಡುತ್ತಿರುವುದರಿಂದ ರಾಶಿರಾಶಿಯಾಗಿ ಬಿದ್ದಿದ್ದ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗಿದೆ.
ಜಿಲ್ಲಾಧಿಕಾರಿ ಎಂ.ಆರ್.ರವಿ, ನಗರಸಭೆ ಆಯುಕ್ತ ನವೀನ್‌ಚಂದ್ರ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಅಂಬಿಕಾ, ಎಇಇ ಮಂಜುನಾಥ್, ಇಇ ಶ್ರೀನಿವಾಸ್ ನಗರದಲ್ಲಿ ಬೆಳ್ಳಂಬೆಳ್ಳಗ್ಗೆ ರೌಂಡ್ಸ್ ನಡೆಸಿ ಕಸದ ರಾಶಿಗಳನ್ನು ಪತ್ತೆಹಚ್ಚಿ ತೆರವುಗೊಳಿಸಲು ಸೂಚನೆ ನೀಡಿದರು.
ಹಳೇ ಸಂತೆ ಜಾಗಕ್ಕೆ ಭೇಟಿ :
ಹೊಸ ಬಸ್‌ನಿಲ್ದಾಣದ ಸಮೀಪವಿರುವ ಹಳೇ ಸಂತೆ ಜಾಗಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಸಂತೆ ಜಾಗವನ್ನು ಸ್ವಚ್ಛಗೊಳಿಸಲು ಸೂಚನೆ ನೀಡಿದರು. ಹೊಸ ಬಸ್ ನಿಲ್ದಾಣದ ಸುತ್ತಮುತ್ತಲೂ, ಫುಟ್‌ಬಾತ್ ಮೇಲೆ ವ್ಯಾಪಾರ ನಡೆಸುವ ವ್ಯಾಪಾರಸ್ಥರಿಗೆ ಹಳೇ ಸಂತೆ ಜಾಗದಲ್ಲಿ ಅವಕಾಶ ಕಲ್ಪಿಸಿಕೊಡಲು ಜಿಲ್ಲಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಸೂಚನೆ ನೀಡಿ ಇನ್ನು ಮುಂದೆ ಬಸ್ ನಿಲ್ದಾಣ ಸುತ್ತಮುತ್ತಲೂ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ನಡೆಸಬಾರದು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸಾರ್ವಜನಿಕರಿಂದ ಶ್ಲಾಘನೆ :
ಜಿಲ್ಲಾಧಿಕಾರಿಗಳು ಕೋಲಾರ ನಗರದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳುವ ಮೂಲಕ ಸುಮಾರು ವರ್ಷಗಳಿಂದ ಬಿದ್ದಿದ್ದ ಕಸದ ರಾಶಿಗಳನ್ನು ಖಾಲಿ ಮಾಡಲು ಮುಂದಾಗಿರುವುದು ಮತ್ತು ಪಾರ್ಕ್ಗಳ ಸೌಂದರ್ಯ, ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಮುಂದಾಗಿರುವುದಕ್ಕೆ ಸಾರ್ವಜನಿಕರಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆಯನ್ನು ಶ್ಲಾಘಿಸಿದ್ದಾರೆ.
ಕೋಲಾರ ನಗರ ಬೆಂಗಳೂರಿಗೆ ಹತ್ತಿರವಿದ್ದರೂ ಅಭಿವೃದ್ದಿಯಲ್ಲಿ ಹಿಂದೆ ಇರುವ ಕಾರಣ ಸುಂದರ ನಗರವನ್ನಾಗಿ ಮಾಡಲು ಜಿಲ್ಲಾಧಿಕಾರಿಗಳು ಮುಂದೆ ಬಂದಿದ್ದು, ಅದಕ್ಕೆ ನಗರಸಭೆಯೂ ಕೈಜೋಡಿಸುತ್ತಿರುವುದರಿಂದ ಕೋಲಾರ ನಗರ ಸುಂದರ ನಗರ ಕನಸನ್ನು ಕಾಣುವ ದಿನಗಳು ದೂರವಿಲ್ಲದಂತೆ ಕಾಣುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅವಶ್ಯಕತೆ ಇದೆ. ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕಾದರೆ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿದ್ದರೆ ಮಾತ್ರ ಆ ನಗರ ಬೆಳೆಯಲು ಸಾಧ್ಯವಾಗುತ್ತದೆ. ಕೋಲಾರ ನಗರ ಇದುವರೆವಿಗೂ ಅಭಿವೃದ್ಧಿಯೇ ಕಂಡಿಲ್ಲ. ಇನ್ನು ಮುಂದೆಯಾದರೂ ಅಭಿವೃದ್ಧಿ ಕಾಣುತ್ತದೆಯೇ ಎಂಬ ಲೆಕ್ಕಾಚಾರದಲ್ಲಿ ಸಾರ್ವಜನಿಕರು ಇದ್ದಾರೆ.
ಕೋಟ್
ಇದು ೨ನೇ ಹಂತದ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದೆ. ಇನ್ನು ೨ ಬಾರಿ ಇದೇ ರೀತಿ ಸ್ವಚ್ಛತಾ ಅಭಿಯಾನ ಹಮ್ಮಿಕೊಂಡರೆ ಕೋಲಾರ ನಗರದಲ್ಲಿ ಇರುವ ಪಾರಂಪರಿಕ ಕಸವನ್ನು ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ. ಇದುವರೆವಿಗೂ ಸಾರ್ವಜನಿಕರು ಸಹಕಾರ ನೀಡಿದ್ದಾರೆ ಮುಂದೆಯೂ ಇದೇ ರೀತಿ ಸಹಕಾರ ನೀಡಬೇಕಾಗಿದೆ. ಮನೆಗಳ ನೆಲಸಮದಿಂದ ಬರುವ ತ್ಯಾಜ್ಯ ನಗರಸಭೆ ಗುರ್ತಿಸಿರುವ ಜಾಗದಲ್ಲಿ ಹಾಕಬೇಕು. ದೈನಂದಿನ ತ್ಯಾಜ್ಯ ನಗರಸಭೆ ಗುರ್ತು ಮಾಡಿರುವ ಜಾಗ ಮತ್ತು ವಾಹನಕ್ಕೆ ಹಾಕಬೇಕು. ಆಗ ಮಾತ್ರ ಸುಂದರ ನಗರ ಮಾಡಲು ಸಾಧ್ಯವಾಗುತ್ತದೆ.
-ನವೀನ್‌ಚಂದ್ರ, ನಗರಸಭೆ ಆಯುಕ್ತರು, ಕೋಲಾರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net