ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ವಿ. ಕರ್ನ್‌ಸಿಂಗ್ ಹೇಳಿಕೆ
ವಿಕಲಚೇತನರು, ಹಿರಿಯ ನಾಗರಿಕರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ
ಶ್ರೀನಿವಾಸಪುರ: ವಿಕಲಾಂಗರು ಹಾಗೂ ಹಿರಿಯ ನಾಗರಿಕರಿಗಾಗಿ ಸಂವಿಧಾನ ನೀಡಿರುವ ಹಕ್ಕುಗಳ ಬಗ್ಗೆ ಅರಿತು, ಕಾನೂನಿನ ಸದ್ಬಳಕೆ ವಾಡಿಕೊಂಡಲ್ಲಿ ಆತ್ಮಗೌರವದಿಂದ ಬದುಕಬಹುದು ಎಂದು ಶ್ರೀನಿವಾಸಪುರ ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ವಿ. ಕರ್ನ್‌ಸಿಂಗ್ ಹೇಳಿದರು. constitutional.
ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ತಾಲೂಕು ಕಾನೂನು ಸೇವಾ ಸಮಿತಿಯಿಂದ ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ವಾತನಾಡಿದರು.
ವಕೀಲರ ಸಂದ ತಾಲೂಕು ಅಧ್ಯಕ್ಷ ಜಯರಾಮೇಗೌಡ ವಾತನಾಡಿ, ಹಿರಿಯ ನಾಗರಿಕರ ಹಕ್ಕುಗಳನ್ನು ಕಾಪಾಡಿಕೊಳ್ಳುವಲ್ಲಿ ಕಾನೂನು ಅರಿವು ಬಹುಮುಖ್ಯ. ಪೋಷಣೆಯ ಕಾನೂನು, ಆಸ್ತಿ ಹಕ್ಕು, ಪಿಂಚಣಿ ಹಾಗೂ ವಸತಿ ಸಂಬಂಧಿ ಕಾಯ್ದೆಗಳ ಬಗ್ಗೆ ಅರಿತುಕೊಳ್ಳಿ ಎಂದರು.
ವಕೀಲರ ಸಂದ ತಾಲೂಕು ಕಾರ್ಯದರ್ಶಿ ಜೆ.ಎನ್. ಶಂಕರಪ್ಪ ವಾತನಾಡಿ, ಇಂದು ಅನಾಥಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದಕರ. ವಯಸ್ಸಾದ ತಂದೆ-ತಾಯಿಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳದ್ದು, ಹಿರಿಯ ನಾಗರಿಕರನ್ನು ಕಡೆಗಣಿಸುವುದು ಕಾನೂನಾತ್ಮಕ ಅಪರಾದ. ಅದನ್ನು ತಡೆಯುವ ನಿಟ್ಟಿನಲ್ಲಿ ಕಾನೂನು ನೆರವು ಪಡೆಯುವ ಕುರಿತು ಪಾಲಕರು ಜಾಗೃತರಾಗಬೇಕು. ಮಕ್ಕಳಿಗೆ ಪ್ರಾರಂಭದ ಹಂತದಲ್ಲಿ ಶಿಕ್ಷಣದ ತೆಗೆ ಸಂಸ್ಕಾರದ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಶ್ರೀನಿವಾಸಪುರ ನ್ಯಾಯಾಲಯದ ಸೌಮ್ಯ, ಅಬಕಾರಿ ನಿರೀಕ್ಷಕಿ ಪುಷ್ಪಾ, ಇಸಿಒ ಆರ್. ಸುಬ್ರಮಣಿ, ತಾಲೂಕು ವಿಕಲಚೇತನರ ಎಫ್‌ಡಿಎ ನೇತ್ರಾವತಿ, ತಾಪಂ ವ್ಯವಸ್ಥಾಪಕ ಮಂಜುನಾಥ್, ಸಾವಾಜಿಕ ವಲಯಾಧಿಕಾರಿ ವೈ.ಬಿ. ವಾಲಾ, ಪಿಡಬ್ಯುಡಿ ಇಲಾಖೆ ಎಫ್‌ಡಿಎ ಮುನಿರಾಜು ಇದ್ದರು.