ಜ್ಞಾನದೊಂದಿಗೆ ಹೃದಯ ವೈಶಾಲ್ಯ ಬೆಳೆಯಲಿ

ಹಾರೂಗೇರಿಯ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ.ನಾಗರಾಜ ಮರೆಣ್ಣವರ, ಭೀಮಗೌಡ ಕರ್ಣವಾಡಿ, ಜ್ಞಾನೇಶ್ವರ ಧರ್ಮಟ್ಟಿ ಇತರರಿದ್ದರು.
ಹಾರೂಗೇರಿಯ ಜನತಾ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ.ನಾಗರಾಜ ಮರೆಣ್ಣವರ, ಭೀಮಗೌಡ ಕರ್ಣವಾಡಿ, ಜ್ಞಾನೇಶ್ವರ ಧರ್ಮಟ್ಟಿ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಹಾರೂಗೇರಿ
ಜನತಾ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು. ಜ್ಞಾನದೊಂದಿಗೆ ಹೃದಯ ವೈಶಾಲ್ಯತೆ ಬೆಳೆಸಿಕೊಂಡಾಗ ಯಶಸ್ಸು ಸಾಧ್ಯ ಎಂದು ವಡಗಾಂವಿ-ಬೆಳಗಾವಿಯ ಸರ್ಕಾರಿ ಪದವಿಪೂರ್ವ ಕಾಲೇಜ್ ಉಪನ್ಯಾಸಕ ಡಾ.ನಾಗರಾಜ ಮರೆಣ್ಣವರ ಹೇಳಿದರು.
ಜನತಾ ಶಿಕ್ಷಣ ಸಂಸ್ಥೆಯ ಅನುದಾನಿತ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆ, ಪ್ರಗತಿ ಪ್ರೌಢಶಾಲೆ, ಭಗವಾನ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮತ್ತು ಶಾಂತಲಾ ಸಂಗೀತ ವಿದ್ಯಾಲಯಗಳ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಹಂದಿಗುಂದ ಆಡಿ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಂಸ್ಕಾರ, ಶಿಸ್ತು ಹಾಗೂ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಭೀಮಗೌಡ ಕರ್ಣವಾಡಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿ ಸಾಧನೆ ಸಂಕಲ್ಪ ಹೊಂದಬೇಕು ಎಂದರು.
ಹಾರೂಗೇರಿ ಪುರಸಭೆ ಅಧ್ಯಕ್ಷ ಜ್ಞಾನೇಶ್ವರ ಧರ್ಮಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಿ.ಆರ್.ಗುಡಸಿ, ಡಿ.ಎಸ್.ಡಿಗ್ರಜ್, ಬಿ.ಪಿ.ಹುಲ್ಲೋಳಿ, ಐ.ಆರ್.ಬಡಿಗೇರ, ಮುಖ್ಯಶಿಕ್ಷಕ ಟಿ.ಬಿ.ಸಾಜನೆ, ಪ್ರಾಚಾರ್ಯ ಸ್ವಪ್ನಿಲ್ ಸಾಜನೆ, ಸುನೀಲ ಜೋಶಿ ಇತರರಿದ್ದರು. ಕೆ.ಎಸ್.ಚೌಗಲಾ ಸ್ವಾಗತಿಸಿದರು. ಪ್ರೀತಿ ಬನಾಜ ಹಾಗೂ ಐಶ್ವರ್ಯಾ ಹುಬ್ಬಳ್ಳಿ ನಿರೂಪಿಸಿದರು. ಸುಭಾಸ ಭರಮರಾವತ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net