ಕೃಷಿ ವಿಜ್ಞಾನ ಕೇಂದ್ರದಿಂದ ರಂಗೋಲಿ ಸ್ಪರ್ಧೆ

ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜನೆ
ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ ಆಯೋಜನೆ
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ವಿಜ್ಞಾನ ಕೇಂದ್ರದಿಂದ ರಂಗೋಲಿ ಸ್ಪರ್ಧೆ
  • ನೇಸರಗಿ ಗ್ರಾಮದಲ್ಲಿ ನಡೆದ ಸ್ಪರ್ಧೆ
  • ಮಹಿಳೆಯರಿಗಾಗಿ ಆಯೋಜಿಸಿದ್ದ ಸ್ಪರ್ಧೆ
ಪಾಶ್ಚಿಮಾತ್ಯಖಾದ್ಯಗಳಿಗೆ ಮೊರೆ ಹೋಗುವುದನ್ನು ನಿಲ್ಲಿಸಿ
| ಕೆವಿಕೆ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಸಲಹೆ | ಆಹಾರ ಸ್ಪರ್ಧೆ ಕಾರ್ಯಕ್ರಮ
ವಿಜಯವಾಣಿ ಸುದ್ದಿಜಾಲ ಬೆಳಗಾವಿ:

ಗ್ರಾಮೀಣ ಮಹಿಳೆಯರಲ್ಲಿ ಅಡಗಿರುವ, ಸಾಂಪ್ರದಾಯಿಕ ಕಲೆ, ಪೌಷ್ಟಿಕ ಆಹಾರ ತಯಾರಿಕೆಯ ಕೌಶಲ ಮತ್ತು ಸ್ಥಳೀಯ ಸಂಪನ್ಮೂಲಗಳ ಸಮರ್ಪಕ ಬಳಕೆಯನ್ನು ಪ್ರೋತ್ಸಾಹಿಸಲು ರಂಗೋಲಿ ಮತ್ತು ಆಹಾರ ಸ್ಪರ್ಧೆಯನ್ನು ಪ್ರಾರಂಭಿಸಲಾಗಿದೆ ಮತ್ತಿಕೊಪ್ಪದ ಕೆಎಲ್‌ಇ ಸಂಸ್ಥೆಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಮಂಜುನಾಥ ಚೌರಡ್ಡಿ ಅಭಿಪ್ರಾಯಪಟ್ಟರು.
ನೇಸರಗಿ ದೇವರಕೊಂಡ ಅಜ್ಜನಮಠದಲ್ಲಿ ಈಚೆಗೆ ಧಾರವಾಡ ಕೃಷಿ ಮೇಳ ೨೦೨೬ರ ಅಂಗವಾಗಿ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ ಸಂಸ್ಥೆ ಕೃಷಿ ಮಹಿಳೆಯರಿಗಾಗಿ ಆಯೋಜಿಸಿದ್ದ ರಂಗೋಲಿ ಮತ್ತು ಆಹಾರ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು ಇದ್ದರು.
ಪಾಶ್ಚಿಮಾತ್ಯಶೈಲಿಯ ಖಾದ್ಯಗಳಿಗೆ ಮೊರೆ ಹೋಗುವುದನ್ನು ನಿಲ್ಲಿಸಿ ನಮ್ಮ ಸಾಂಪ್ರದಾಯಿಕ ಶೈಲಿಯ ಪೌಷ್ಟಿಕಾಂಶಯುಕ್ತ ಆಹಾರ ನಮ್ಮ ದಿನನಿತ್ಯದ ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವುದಷ್ಟೆ ಅಲ್ಲದೆ, ಇದರಿಂದ ಸ್ವ-ಉದ್ಯೋಗದಲ್ಲಿ ಆದಾಯ ಗಳಿಸುವುದರಲ್ಲಿ ಮಹಿಳೆಯರು ತಾವು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಂಗೋಲಿ ಸ್ಪರ್ಧೆಯಲ್ಲಿ ಮಹಿಳೆಯರು ಕೃಷಿ, ಪರಿಸರ ಸಂರಕ್ಷಣೆ, ಗ್ರಾಮೀಣ ಜೀವನ ಹಾಗೂ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಆಕರ್ಷಕ ರಂಗೋಲಿಗಳು ರಚಿಸಿ ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಆಹಾರ ಸ್ಪರ್ಧೆಯಲ್ಲಿ ಸಿರಿಧಾನ್ಯಗಳು, ಸ್ಥಳೀಯವಾಗಿ ಬಳಸುವ ಕೃಷಿ ಉತ್ಪನ್ನಗಳು ಮತ್ತು ಪೌಷ್ಟಿಕ ಆಹಾರ ಪದಾರ್ಥಗಳು ವಿವಿಧ ಸಾಂಪ್ರದಾಯಿಕ ಮತ್ತು ನವೀನ ಆಹಾರಗಳನ್ನು ತಯಾರಿಸಿ ಪ್ರದರ್ಶಿಸಲಾಯಿತು.
ಕೇಂದ್ರದ ಮಣ್ಣು ಎಸ್. ಎಂ. ವಾರದ ಕಾರ್ಯಕ್ರಮ.ವಿಜ್ಞಾನಿ ಡಾ.ಭಾವಿ ಪಾಟೀಲ, ಸಂಜೀವಿನಿ _ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಬೈಲಹೊಂಗಲ ತಾಲೂಕಿನ ವಲಯ ಮೇಲ್ವಿಚಾರಕ ಸಚೀನ ಗುರುವನ್ನವರ ಹಾಗೂ ಸೋಮನಾಥ ಹುನಗುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net