ಚಿಂತಾಮಣಿ ನಗರದ ಕಿಶೋರ ವಿದ್ಯಾಭವನ ಶಾಲೆಯ ಎನ್ಸಿಸಿ ತಂಡ ಎನ್ಸಿಸಿ ಡ್ರಿಲ್ನಲ್ಲಿ ಚಾಂಪಿಯನ್ ಶಾಲೆ ಡ್ರಿಲ್ ಪ್ರಶಸ್ತಿ ಪಡೆದುಕೊಂಡಿದೆ.
Published on:
Copied
Follow Us
ಚಿಂತಾಮಣಿ: ಬೆಂಗಳೂರಿನ ಬ್ರಿಂದಾವನ್ ಕಾಲೇಜಿನಲ್ಲಿ ಆ.27ರಂದು ಹಮ್ಮಿಕೊಂಡಿದ್ದ ಎನ್ಸಿಸಿ ಎಟಿಸಿ ಕ್ಯಾಂಪ್ 3ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಿಶೋರ ವಿದ್ಯಾ ಭವನದ ಎನ್ಸಿಸಿ ತಂಡವು ಚಾಂಪಿಯನ್ ಶಾಲೆ ಡ್ರಿಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಕ್ಯಾಂಪ್ನಲ್ಲಿ ವಿವಿಧ ಶಾಲೆಗಳ ಎನ್ಸಿಸಿ ತಂಡಗಳು ಭಾಗವಹಿಸಿದ್ದವು. ಕಿಶೋರ ವಿದ್ಯಾ ಭವನದ ಕ್ಯಾಡೆಟ್ಗಳು ಶಿಸ್ತುಬದ್ಧ ಹೆಜ್ಜೆ, ಏಕಾಗ್ರತೆ, ನಿಖರವಾದ ಡ್ರಿಲ್ ಹಾಗೂ ತಂಡದ ಸಮನ್ವಯದ ಮೂಲಕ ಗಮನ ಸೆಳೆದರು. ಪ್ರತಿಯೊಂದು ಚಲನೆಯಲ್ಲೂ ಕಂಡುಬಂದ ಪರಿಪೂರ್ಣ ಹೊಂದಾಣಿಕೆ ಮತ್ತು ಆತ್ಮವಿಶ್ವಾಸ ತಂಡದ ಸಾಮರ್ಥ್ಯವನ್ನು ಪ್ರತಿಬಿಂಬಿಸಿತು.
ಕ್ಯಾಂಡೆಟ್ಗಳ ಸತತ ಪರಿಶ್ರಮ, ಕಠಿಣ ತರಬೇತಿ ಹಾಗೂ ಎನ್ಸಿಸಿಯ ಶಿಸ್ತು ಮತ್ತು ದೇಶಭಕ್ತಿ ಮೌಲ್ಯಗಳ ಪ್ರತಿಫಲವಾಗಿ ಈ ಸಾಧನೆ ಮೂಡಿಬಂದಿದೆ. ಚಾಂಪಿಯನ್ ಶಾಲೆ ಡ್ರಿಲ್ ಪ್ರಶಸ್ತಿ ಪಡೆದಿರುವುದು ಶಾಲೆ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ತಂಡದ ಸಾಧನೆಗೆ ಶಾಲೆ ಆಡಳಿತ ಮಂಡಳಿ, ಪ್ರಾಂಶುಪಾಲರು ಹರ್ಷ ವ್ಯಕ್ತಪಡಿಸಿ, ಎನ್ಸಿಸಿ ಕ್ಯಾಡೆಟ್ಗಳನ್ನು ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಇದೇ ಶಿಸ್ತು, ಉತ್ಸಾಹ ಮತ್ತು ಸಮರ್ಪಣಾ ಮನೋಭಾವದಿಂದ ಮತ್ತಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.