ಖಾನಾಪುರ ಪೊಲೀಸರ ನಡೆಗೆ ಖಂಡನೆ

 ಖಾನಾಪುರದಲ್ಲಿ ಬ್ಲಾಕ್​ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟಿಸಿದರು. ಈಶ್ವರ ಘಾಡಿ, ಮಹಾಂತೇಶ ರಾವುತ, ಲಕ್ಷ$್ಮಣ ಮಾದಾರ ಇತರರಿದ್ದರು.
ಖಾನಾಪುರದಲ್ಲಿ ಬ್ಲಾಕ್​ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟಿಸಿದರು. ಈಶ್ವರ ಘಾಡಿ, ಮಹಾಂತೇಶ ರಾವುತ, ಲಕ್ಷ$್ಮಣ ಮಾದಾರ ಇತರರಿದ್ದರು.
Published on
ಬೆಳಗಾವಿ: ಅಪರಾಧ ಚಟುವಟಿಕೆಗಳ ಹಿನ್ನೆಲೆ ಹೊಂದಿದವರನ್ನು ಖಾನಾಪುರ ಪೊಲೀಸ್​ ಠಾಣೆಯಲ್ಲಿ ಈಚೆಗೆ ಜರುಗಿದ ಡಾ.ಬಿ.ಆರ್​.ಅಂಬೇಡ್ಕರ್​ ಜಯಂತಿ ಶಾಂತಿ ಸಭೆಯಲ್ಲಿ ತೊಡಗಿಸಿಕೊಂಡಿರುವುದನ್ನು ಖಂಡಿಸಿ ಖಾನಾಪುರ ಪಟ್ಟಣದಲ್ಲಿ ಗುರುವಾರ ತಾಲೂಕು ಬ್ಲಾಕ್​ ಕಾಂಗ್ರೆಸ್​ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರಿಗೆ ಮನವಿ ಸಲ್ಲಿಸಿದರು.
ಸಮಾಜಕ್ಕೆ ಸಂಬಂಧಿಸಿದಂತೆ ಯಾವುದೇ ಒಂದು ಸಭೆಗಳಿದ್ದಾಗ, ಆಯಾ ಊರಿನ ಅಥವಾ ಸಮುದಾಯದ ಹಿರಿಯರನ್ನು ಆಹ್ವಾನಿಸುವ ಬಗ್ಗೆ ಪೊಲೀಸರು ಆಲೋಚಿಸಬೇಕಿತ್ತು. ಆದರೆ, ತಾಲ್ಲೂಕಿನಲ್ಲಿ ರೌಡಿ ಶೀಟರ್​ಗಳು ಮತ್ತು ಪೊಲೀಸರ ನಡುವೆ ಅಸಭ್ಯ ಮೈತ್ರಿ ಕಂಡು ಬರುತ್ತಿದ್ದು, ಪೊಲೀಸ್​ ಆಡಳಿತಕ್ಕೆ ತಾವು ಯಾರನ್ನು ಗೌರವಿಸುತ್ತಿದ್ದೇವೆ ಎಂಬುದು ತಿಳಿಯಬೇಕಿತ್ತು. ಪೊಲೀಸರ ನಡೆ ತಪ್ಪಾಗಿದ್ದು, ಈ ಬಗ್ಗೆ ಕಠಿಣ ಕ್ರಮವಾಗಬೇಕು ಎಂದು ಆಗ್ರಹಿಸಿದರು.
ಬ್ಲಾಕ್​ ಕಾಂಗ್ರೆಸ್​ ಅಧ್ಯ ಈಶ್ವರ ಘಾಡಿ, ಮಹಾಂತೇಶ ರಾವುತ, ಲಕ್ಷ$್ಮಣ ಮದಾರ ಇತರರಿದ್ದರು.
ಪಂಡಿತಗೆ ಹಿಂದೂ ಸಂಟನೆಗಳ ಬೆಂಬಲ: ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಹಿಂದೂಪರ ಸಂಟನೆಗಳ ಮುಖಂಡರು ವಿವಾದಕ್ಕೆ ಕಾರಣವಾಗಿರುವ ಪಂಡಿತ್​ ಓಗಲೆಗೆ ಬೆಂಬಲ ವ್ಯಕ್ತಪಡಿಸಿ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದ್ದಾರೆ. ಓಗಲೆ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಹಾಗೂ ಆಧಾರರಹಿತವಾಗಿದ್ದು, ಅವರು ಜನಕ ಗಣೇಶೋತ್ಸವ ಮಹಾಮಂಡಲ ಮುಖ್ಯಸ್ಥರಾಗಿ, ವಾಜಿ ಜಯಂತಿ ಆಚರಣಾ ಸಮಿತಿಯ ಅಧ್ಯರಾಗಿ ಶಾಂತಿಯುತ ಆಚರಣೆಗಳಿಗೆ ಸಹಕರಿಸಿದ್ದಾರೆ. ಇದನ್ನು ಸಹಿಸದ ಕಾಂಗ್ರೆಸ್ಸಿಗರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಮಹಿಳಾ ಕಾರ್ಯದರ್ಶಿ ಧನಶ್ರೀ ಸರದೇಸಾಯಿ, ಕಿಶೋರ್​ ಹೆಬ್ಬಾಳ್ಕರ್​, ದೀಪಕ್​ ವಾಲ್ವೆ, ಸಂಜಯ್​ ಕುಬಲ್​ ಮತ್ತು ಪ್ರಕಾಶ ದೇಶಪಾಂಡೆ, ನಾರಾಯಣ ಓಗಲೆ, ಗುಂಡು ಟೋಪಿನಕಟ್ಟಿ, ವಸಂತ ದೇಸಾಯಿ ಮತ್ತು ಅಪ್ಪಯ್ಯ ಕೊಡೋಲಿ ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net