ಮತ್ತೆ ಸುಲಿಗೆಗೆ ಇಳಿದರು: 2026ರ ಮೇ 15ರಂದು ಚಿಂತಾಮಣಿ ಹಳೇ ಸಿವಿಲ್ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಗುರುಭವನದ ಮುಂಭಾಗದ ರಸ್ತೆಯಲ್ಲಿ ನಿಂತುಕೊಂಡಿದ್ದ ಆರೋಪಿಗಳು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ನಿವಾಸಿ ಹೇಮಂತ್ ಕುಮಾರ್ (27) ಅವರನ್ನು ತಡೆದು, ನನ್ನ ತಮ್ಮನಿಗೆ ಚಾಕುವಿನಿಂದ ತಿವಿದು 24 ಸಾವಿರ ರೂ. ಕಿತ್ತುಕೊಂಡಿದ್ದಿಯಾ. ತಮ್ಮನ ಬಳಿ ನಿನ್ನ ೋಟೋ ಇದೆಯೆಂದು ಬೆದರಿಸಿ, ಬೈಕ್ನಲ್ಲಿ ನಗರದ ಚೇಳೂರು ರಸ್ತೆಯ ರೈಲ್ವೆ ಗೇಟ್ನಿಂದ ಸಮೀಪದ ರ್ನಿಜನ ಪ್ರದೇಶದಲ್ಲಿರುವ ಇಟ್ಟಿಗೆ ್ಯಾಕ್ಟರಿ ಬಳಿಗೆ ಕರೆದೊಯ್ದು ಅಲ್ಲಿದ್ದ ಇತರ ನಾಲ್ವರು ಸೇರಿ ಮಾರಕಾಸ್ತ್ರ ತೋರಿಸಿ 5 ಸಾವಿರ ರೂ. ೋನ್ಪೇ ಮಾಡಿಸಿಕೊಂಡಿದ್ದರು. ಹೇಮಂತ್ ಕುಮಾರ್ ಪ್ರಕರಣ ದಾಖಲಿಸಿದ್ದು, ನಗರಠಾಣೆ ಪೊಲೀಸರು ೋನ್ ಪೇ ಮಾಡಿದ್ದ ಬ್ಯಾಂಕ್ ಖಾತೆದಾರನನ್ನು ಪತ್ತೆ ಹಚ್ಚಿ, ಅವರ ಮೂಲಕ ಇಬ್ಬರನ್ನು ಬಂಧಿಸಿದ್ದಾರೆ. ಇವರೊಟ್ಟಿಗೆ ಇದ್ದ ಇನ್ನು ನಾಲ್ವರ ಸೆರೆಗೆ ಬಲೆ ಬೀಸಿದ್ದಾರೆ.