ಕುಖ್ಯಾತ ರೌಡಿ ಬಂಧನ

ಚಿತ್ರ ೧೪ ಕೆ.ಎಲ್.ಆರ್. ೦೧ : ಕುಖ್ಯಾತ ರೌಡಿ ಟಿಪಿಕ್ ಭಾವಚಿತ್ರ
ಚಿತ್ರ ೧೪ ಕೆ.ಎಲ್.ಆರ್. ೦೧ : ಕುಖ್ಯಾತ ರೌಡಿ ಟಿಪಿಕ್ ಭಾವಚಿತ್ರ
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಕೆ.ಜಿ.ಎಫ್. ಪೋಲಿಸ್ ಜಿಲ್ಲೆ ವ್ಯಾಪ್ತಿಯ ಕೆ.ಜಿ.ಎಫ್. ನಗರದ ರಾಬರ್ಟ್ಸನ್‌ಪೇಟೆಯ ಕುಖ್ಯಾತ ಟಿಪಿಕ್ (೨೪) ಎಂಬ ರೌಡಿಯನ್ನು ಗೂಂಡಾ ಕಾಯಿದೆ ಅಡಿಯಲ್ಲಿ ಕೆ.ಜಿ.ಎಫ್. ಪೋಲಿಸರು ಬಂಧಿಸಿ ಬುಧವಾರ ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ.
ಕೆ.ಜಿ.ಎಫ್. ನಗರದ ಪೂಸ್ವಾಮಿ ಕಾಲೋನಿಯ ಇಟಿ ಬ್ಲಾಕ್‌ನ ನ್ಯೂ ಮಾಡೆಲ್ ಹೌಸ್ ವಾಸವಿರುವ ಟಿಪಿಕ್ ಹದಿಹರಿಯದ ವಯಸ್ಸಿನಿಂದಲೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿ, ೧ ಫೋಕ್ಸೋ ಪ್ರಕರಣ, ೧ ಕೊಲೆ, ೫ ಕೊಲೆ ಪ್ರಯತ್ನ, ೧ ಹಲ್ಲೆ ಸೇರಿದಂತೆ ಒಟ್ಟು ೧೦ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನ್ಯಾಯಾಲಯದಿಂದ ಜಾಮೀನು ಪಡೆದು ಪುನಃ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಹಿನ್ನಲೆಯಲ್ಲಿ ಡಿ.ವೈ.ಎಸ್.ಪಿ. ವಿ.ಲಕ್ಷö್ಮಯ್ಯ, ವೃತ್ತನಿರೀಕ್ಷಕ ಪಿ.ಎಂ.ನವೀನ್, ಪಿ.ಎಸ್.ಐ. ಮಹೇಶ್‌ಮಾಳಿ ನೇತೃತ್ವದಲ್ಲಿ ಗೂಂಡಾ ಕಾಯಿದೆಯಡಿಯಲ್ಲಿ ಕ್ರಮ ಕೈಗೊಳ್ಳಲು ಕೋಲಾರ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಜ.೧೩ ರಂದು ಗೂಂಡಾ ಕಾಯಿದೆಯಡಿಯಲ್ಲಿ ಬಂಧನಕ್ಕೆ ಆದೇಶವನ್ನು ಹೊರಡಿಸಿದ್ದರು. ಬುಧವಾರ ಟಿಪಿಕ್ ಎಂಬುವವನನ್ನು ಕೆ.ಜಿ.ಎಫ್. ಪೋಲಿಸರು ಬಂಧಿಸಿ ಶಿವಮೊಗ್ಗ ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದಾರೆ. ಬಂಧನದ ನೇತೃತ್ವವನ್ನು ಪಿ.ಎಸ್.ಐ. ಮಹೇಶ್‌ಮಾಳಿ, ಎ.ಎಸ್.ಐ. ಚಲಪತಿ, ಸಿಬ್ಬಂದಿಗಳಾದ ರಾಮಮೂರ್ತಿ, ರಾಜಾರೆಡ್ಡಿ, ಮುರಳಿ, ರಘು, ಎಂ.ರಾಮ, ಬಸವರಾಜ ಕಾಂಬಳೆ ರವರನ್ನು ಎಸ್.ಪಿ.ಶಿವಾಂಶು ರಜಪೂತ್ ಪ್ರಶಂಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net