ಕೇರಳ ಪ್ರವಾಸಿ ಸಣಾಪುರ ಕೆರೆಯಲ್ಲಿ ಶವವಾಗಿ ಪತ್ತೆ

ಜೋಸ್ ಸಿರಿಲ್ (34)
ಜೋಸ್ ಸಿರಿಲ್ (34)
Published on
ಗಂಗಾವತಿ: ಕೊಪ್ಪಳ ತಾಲೂಕಿನ ಬಸಾಪುರ ರೆಸಾರ್ಟ್‌ನಿಂದ ಕಾಣೆಯಾಗಿದ್ದ ಕೇರಳ ಮೂಲದ ಪ್ರವಾಸಿಗ ಸಣಾಪುರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಕೇರಳದ ಜೋಸ್ ಸಿರಿಲ್ (34) ಎಂದು ಗುರುತಿಸಲಾಗಿದೆ. ಪ್ರವಾಸಕ್ಕೆ ಬಂದಿದ್ದ ಜೋಸ್ ಸಿರಿಲ್ ಬಸಾಪುರದ ರೆಸಾರ್ಟ್‌ನಲ್ಲಿ ವಾಸ್ತವ್ಯವಿದ್ದರು.
ಬುಧವಾರ ರೆಸಾರ್ಟ್‌ನಿಂದ ತೆರಳಿದ್ದ ಜೋಸ್ ಸಿರಿಲ್ ಹಿಂದಿರುಗಿರಲಿಲ್ಲ. ವಿರುಪಾಪುರಗಡ್ಡಿ ಯಮನೂರಪ್ಪ ಎಂಬುವವರು ಜೋಸ್ ಸಿರಿಲ್ ನಾಪತ್ತೆಯಾಗಿರುವ ಬಗ್ಗೆ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net