ಕನ್ನಡ ನಾಡಿಗೆ ಕೆಂಪೇಗೌಡರ ಕೊಡುಗೆ ಅಜಾರಾಮರ

ಬಸವನಬಾಗೇವಾಡಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಯಿತು. ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ,  ಮನ್ನಾನ ಶಾಬಾದಿ, ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಆನಂದ ಒನರೊಟ್ಟಿ , ಮತ್ತಿತರರಿದ್ದರು.
ಬಸವನಬಾಗೇವಾಡಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಮಾಡಲಾಯಿತು. ಶಂಕರಗೌಡ ಬಿರಾದಾರ, ಸುರೇಶಗೌಡ ಪಾಟೀಲ, ಮನ್ನಾನ ಶಾಬಾದಿ, ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಆನಂದ ಒನರೊಟ್ಟಿ , ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿಕೆ
  • ಜಯಂತಿ ಆಚರಣೆ
ಬಸವನಬಾಗೇವಾಡಿ: ನಾಡಪ್ರಭು ಕೆಂಪೇಗೌಡರು 16ನೇ ಶತಮಾನದ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಪಾಳೇಗಾರರು ಹಾಗೂ ಆಧುನಿಕ ಬೆಂಗಳೂರು ನಗರದ ಸಂಸ್ಥಾಪಕರಾಗಿದ್ದರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಶನಿವಾರ ಪಟ್ಟಣದ ತಾಲೂಕು ಆಡಳಿತದ ವತಿಯಿಂದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
ದೂರದೃಷ್ಟಿಯ ಆಡಳಿತಗಾರರಾಗಿದ್ದ ಅವರು, ಜನಪರ ಕಾರ್ಯ, ಕೃಷಿ ಅಭಿವೃದ್ಧಿ ಹಾಗೂ ಬೆಂಗಳೂರು ನಗರ ನಿರ್ಮಾಣಕ್ಕೆ ಅಪಾರ ಕೊಡುಗೆ ನೀಡಿ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಅಂದಿನ ಕಾಲದಲ್ಲಿಯೇ ಪರಿಸರ ಸಂರಕ್ಷಣೆ, ಕೆರೆಗಳ ನಿರ್ಮಾಣ ರಸ್ತೆ ಹಾಗೂ ಸುಸಜ್ಜಿತ ಮಾರುಕಟ್ಟೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಇಂದಿನ ಆಡಳಿತ ವ್ಯವಸ್ಥೆಗೂ ಮಾದರಿಯಾಗಿದೆ.
ಅವರ ಆದರ್ಶಗಳು ಹಾಗೂ ಜನಪರ ಚಿಂತನೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕೆಂಪೇಗೌಡರು ಮಹಿಳಾ ಸಬಲೀಕರಣ ಮೊರಸು ಒಕ್ಕಲಿಗ ಜನಾಂಗದಲ್ಲಿದ್ದ ಅನಿಷ್ಟ ಪದ್ಧತಿಯಾದ ’ಬಂದಿ ದೇವರು’ (ಮಹಿಳೆಯರ ಎಡಗೈ ಕಿರುಬೆರಳನ್ನು ಕತ್ತರಿಸುವ ಪದ್ಧತಿ) ಅನ್ನು ರದ್ದುಗೊಳಿಸಿದರು ಎಂದು ಹೇಳಿದರು.
ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಮನ್ನಾನ ಶಾಬಾದಿ, ಜಟ್ಟಿಂಗರಾಯ ಮಾಲಗಾರ, ಪ್ರಶಾಂತ ಮುಂಜಾನೆ, ಆನಂದ ಒನರೊಟ್ಟಿ , ಭೂ ಮಾಪನ ಇಲಾಖೆ ಇಶಾಕ ಕಲಾದಾಗಿ, ಬಸವರಾಜ ದಾನಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net