ನಂದಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತಚಿಕಿತ್ಸಾ ಶಿಬಿರದಲ್ಲಿ ಆರೋಗ್ಯಾಧಿಕಾರಿ ಡಾ.ವಿನಯ್, ನೇತ್ರ ತಪಾಸಣಾ ಅಧಿಕಾರಿ ನಾಗರಾಜ್, ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಪೂರ್ಣಿಮಾ, ಫಣೀಂದ್ರ, ವೆಂಕಟಾಚಲಯ್ಯ ಇದ್ದರು.
Published on:
Copied
Follow Us
ನಂದಗುಡಿ : ಜಗತ್ತಿನ ಸೃಷ್ಟಿಯನ್ನು ನೋಡಿ ಆನಂದಿಸಬೇಕಾದರೆ ಕಣ್ಣನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಕಾಲ&ಕಾಲಕ್ಕೆ ತಪಾಸಣೆ ಹಾಗೂ ಕಾಳಜಿ ಬಹು ಮುಖ್ಯ ಎಂದು ಆರೋಗ್ಯಾಧಿಕಾರಿ ಡಾ.ವಿನಯ್ ಹೇಳಿದರು.
ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಸಂಚಾರಿ ನೇತ್ರ ಟಕ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೆಂಗಳೂರು ಕೆ.ಸಿ.ಜನರಲ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣಾ ಮತ್ತು ಶಸ್ತಚಿಕಿತ್ಸಾ ಶಿಬಿರದಲ್ಲಿ ಮಾತನಾಡಿದರು.ಮಧುಮೇಹ ಮತ್ತು ವಯೋಸಹಜವಾಗಿ ಅನಾರೋಗ್ಯದ ಸಮಸ್ಯೆ ಇದ್ದವರು ಕಣ್ಣುಗಳ ಆರೈಕೆಗೆ ವಿಶೇಷ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ದೃಷ್ಟಿ ಕಳೆದುಕೊಳ್ಳುವ ಅಪಾಯ ಖಚಿತ. ನಿಯಮಿತ ತಪಾಸಣೆ ಚಿಕಿತ್ಸೆ ಮತ್ತು ಆರೈಕೆಯಿಂದ ದೋಷವನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದೆ ಎಂದರು.
ಕೆ.ಸಿ.ಜನರಲ್ ಆಸ್ಪತ್ರೆಯ ಡಾ.ಪೂರ್ಣಿಮಾ ಮಾತನಾಡಿ, ಕಣ್ಣು ಅತ್ಯಂತ ಅನಿವಾರ್ಯ ಅಂಗಗಳಲ್ಲಿ ಒಂದಾಗಿದ್ದು, ತೀರ ಸ್ಮೂವಾಗಿರುವುದರಿಂದ ವಿಶೇಷ ಕಾಳಜಿ ವಹಿಸಬೇಕು. ಕಣ್ಣಿನ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಚಿಕಿತ್ಸೆ ಪಡೆದರೆ ಹೆಚ್ಚಿನ ಹಾನಿಯನ್ನು ತಡೆಯಬಹುದು.
ಇತ್ತೀಚೆಗೆ ದೃಷ್ಟಿ ದೋಷದ ಸಮಸ್ಯೆ ಹೆಚ್ಚಿದ್ದು, ಜನರು ಜಾಗ್ರತೆ ವಹಿಸಬೇಕು. 40 ವರ್ಷ ದಾಟಿದ ಪ್ರತಿಯೊಬ್ಬರೂ ವರ್ಷಕ್ಕೆ ಕನಿಷ್ಠ ಎರಡು ಬಾರಿಯಾದರೂ ನೇತ್ರತಪಾಸಣೆಗೆ ಒಳಪಡಬೇಕು. ಮಿಂಟೋ ಕಣ್ಣಾಸ್ಪತ್ರೆಯಲ್ಲಿ ಸಾವಿರಾರು ಜನರಿಗೆ ಅತ್ಯಾಧುನಿಕ ತಂತ್ರಾನದೊಂದಿಗೆ ಉಚಿತವಾಗಿ ಕಣ್ಣಿನ ಪೊರೆ ಶಸಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದ್ದು, ಗ್ರಾಮೀಣ ಭಾಗದ ಜನರು ಇದರ ಸದುಪಯೋಗ ಪಡೆಯಬೇಕು ಎಂದರು.
45ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ತಪಾಸಣೆಗೆ ಒಳಪಟ್ಟು, 19 ಮಂದಿಯನ್ನು ಕಣ್ಣಿನ ಪೂರೆ ಶಸ್ತಚಿಕಿತ್ಸೆಗೆ ಕಳುಹಿಸಲಾಯಿತು.
ಶುಶ್ರೂಷಕಿಯರಾದ ಜ್ಯೋತಿ, ವೆಟ್ರಿ ಸೆಲ್ವಿ, ಸುಷ್ಮಾ, ಶ್ಯಾಮಲಾ, ಗೀತಾ, ಮಮತಾ, ಶ್ವೇತಾ, ರಂಜಿತಾ, ವೀಣಾ, ಮಹಾಲಕ್ಷಿ$್ಮ, ಪೂಜಾ, ಶಶಿ, ಮಧುಶ್ರೀ, ಚೈತ್ರಾ, ಸಿಬ್ಬಂದಿ ಇದ್ದರು.