ಜಂಕ್​ಪುಡ್​ ಸಂಸತಿಯಿಂದ ದೂರವಿಡಿ child protection

ಶಿರಾ ತಾಲೂಕು ಹನುಮಂತನಗರ ಯುವ ಚಾವಡಿchild protection -ನವ್ಯದಿಶ ಹಾಗೂ ಕೆ.ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್​ಜಿ ಪವಿತ್ರಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌತಮ್​, ನವೀನ್​, ಕಾಲೇಜಿನ ಸಂಯೋಜಕ ಉಪನ್ಯಾಸಕ ಮನೋಜ್​, ಮೇಘಾ ರಾಮದಾಸ್​ ಇದ್ದರು.
ಶಿರಾ ತಾಲೂಕು ಹನುಮಂತನಗರ ಯುವ ಚಾವಡಿchild protection -ನವ್ಯದಿಶ ಹಾಗೂ ಕೆ.ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್​ಜಿ ಪವಿತ್ರಾ ಅವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌತಮ್​, ನವೀನ್​, ಕಾಲೇಜಿನ ಸಂಯೋಜಕ ಉಪನ್ಯಾಸಕ ಮನೋಜ್​, ಮೇಘಾ ರಾಮದಾಸ್​ ಇದ್ದರು.
Published on
ಶಿರಾ :ಹದಿಹರೆ ಎಂಬುದು ಪರಿವರ್ತನಾತ್ಮಕ ಹಂತ, ಬಾಲ್ಯದಿಂದ ಯೌವನಕ್ಕೆ ಕಾಲಿಡುವ ಸಮಯದಲ್ಲಿ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಹಲವು ಬದಲಾವಣೆ ಸಂಭವಿಸುತ್ತವೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್​ಜಿ ಪವಿತ್ರಾ ತಿಳಿಸಿದರು. child protection
ತಾಲೂಕಿನ ಕಳ್ಳಬೆಳ್ಳ ಹೊಬಳಿಯ ಹನುಮಂತನಗರ ಯುವ ಚಾವಡಿ -ನವ್ಯದಿಶ ಹಾಗೂ ಕೆ.ಮಲ್ಲಣ್ಣ ಸ್ಮಾರಕ ಪದವಿ ಪೂರ್ವ ಕಾಲೇಜಿಲ್ಲಿ ಆಯೋಜಿಸಿದ್ದ ಸರ್ಟಿಫಿಕೇಟ್​ ಕೋರ್ಸ್​ ಆನ್​ಲೈಫ್​ ಸ್ಕಿಲ್ಸ್​ ಆ್ಯಂಡ್​ ಚೈಲ್ಡ್​ ಪ್ರೊಟೆಕ್ಷನ್​ ಕಾರ್ಯಕ್ರಮದಲ್ಲಿ ಮಾತನಾಡಿ, ಜಂಕ್​ಫುಡ್​ ಸಂಸತಿಯಿಂದ ದೂರವಿಟ್ಟು, ಜೀವಸತ್ವ, ಪ್ರೋಟಿನ್​ ಮತ್ತು ಐರನ್​ನಿಂದ ಕೂಡಿರುವ ಹಾಗೂ ಮನೆಯಲ್ಲಿ ತಯಾರಿಸಿದ ಸಾಂಪ್ರದಾಯಿಕ ಆಹಾರ, ಸೊಪ್ಪು- ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸಬೇಕು ಎಂದರು.
ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ಹದಿಹರೆಯದವರಲ್ಲಿ ಖಿನ್ನತೆ, ಆತಂಕ ಮತ್ತು ಒತ್ತಡ ಹೆಚ್ಚಾಗುತ್ತಿದೆ. ದೇಹದಷ್ಟೇ ಮನಸ್ಸಿನ ಆರೋಗ್ಯವು ಮುಖ್ಯ. ದಿನದಿಂದ ದಿನಕ್ಕೆ ಪೋಕ್ಸೋ ಪ್ರಕರಣ ಹೆಚ್ಚಾಗುತ್ತಿದ್ದು, ದುರಭ್ಯಾಸಗಳಿಂದ ದೂರವಿದ್ದು, ಸೈಬರ್​ ಭದ್ರತೆ, ಮತ್ತು ವೈಯಕ್ತಿಕ ರಕ್ಷಣೆಯಿಂದ ಜಾಗೃತರಾಗಿರುವುದು ಉತ್ತಮ ಪ್ರಜೆಯನ್ನಾಗಿ ಬಿಂಬಿಸುತ್ತದೆ ಎಂದು ತಿಳಿಸಿದರು.
ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ಜೆ.ಎಸ್​.ಜನಾರ್ದನ್​ ಮಾತನಾಡಿ, ಕಾಲೇಜುಗಳು ವಿದ್ಯಾರ್ಥಿಗಳಿಗೆ ಸುರಕ್ಷತೆ, ಆತ್ಮವಿಶ್ವಾಸ, ಜೀವನ ಕೌಶಲ ಮತ್ತು ಭಾವನಾತ್ಮಕ ಬೆಂಬಲ ನೀಡುವ ಸ್ಥಳವಾಗಬೇಕು. ಮಕ್ಕಳಿಗೆ ನಿಯಮಿತ ಆರೋಗ್ಯ, ಸುರಕ್ಷತೆ, ಕಾನೂನು ಅರಿವು ಮತ್ತು ಕೌಶಲಯುತ ಕಾರ್ಯಕ್ರಮ ನಡೆಸಬೇಕೆಂದು ಇಲಾಖೆ ಶಿಫಾರಸು ಮಾಡಿದೆ. ಈ ಕಾರ್ಯಕ್ರಮ ಯುವಕರ ಬದುಕಿಗೆ ದಿಕ್ಕು ತೋರಿಸುವ ದಾರಿದೀಪ ಎಂದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಗೌತಮ್​, ನವೀನ್​, ಕಾಲೇಜಿನ ಸಂಯೋಜಕ ಉಪನ್ಯಾಸಕ ಮನೋಜ್​, ಮೇಘಾ ರಾಮದಾಸ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net