ಕೆಸೆಟ್ ಅಧಿಸೂಚನೆ ಪ್ರಕಟ: ವಿವಾಹಿತ ಮಹಿಳಾ ಅಭ್ಯರ್ಥಿಗಳಿಗೆ ಪತಿ ಆದಾಯ ಪ್ರಮಾಣಪತ್ರ ಕಡ್ಡಾಯ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಳೆದ ವರ್ಷ ಒಂದು ಸಾವಿರ ರೂ. ಪರೀಕ್ಷಾ ಶುಲ್ಕ ವಿಧಿಸಿತ್ತು. ಈ ಬಾರಿ ಅದನ್ನು 750 ರೂ.ಗಳಿಗೆ ಇಳಿಸಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ತೃತೀಯ ಲಿಂಗಿಗಳಿಗೆ ಕಳೆದ ವರ್ಷ 700 ರೂ.ಗಳಿತ್ತು. ಈ ಬಾರಿ 500 ರೂ. ನಿಗದಿ ಮಾಡಿದೆ.
  • ಅಕ್ಟೋಬರ್ 11ರಂದು ಪರೀಕ್ಷೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆ.5 ಮತ್ತು ಶುಲ್ಕ ಪಾವತಿಸಲು ಸೆ.6 ಕೊನೆಯ ದಿನ
  • ಆದಾಯ ಪ್ರಮಾಣಪತ್ರದ ವಿಚಾರದಲ್ಲಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ಗೊಂದಲಗಳನ್ನು ಮರುಕಳಿಸದಂತೆ ಎಚ್ಚರ ವಹಿಸಿರುವ ಕೆಇಎ, ವಿವಾಹಿತ ಮಹಿಳಾ ಅಭ್ಯರ್ಥಿಯು ಪತಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಸ್ಪಷ್ಟನೆ
ಬೆಂಗಳೂರು:

ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಗೆ (ಕೆಸೆಟ್-2026) ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಅಧಿಸೂಚನೆ ಹೊರಡಿಸಿದೆ. ಆದಾಯ ಪ್ರಮಾಣಪತ್ರದ ವಿಚಾರದಲ್ಲಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿನ ಗೊಂದಲಗಳನ್ನು ಮರುಕಳಿಸದಂತೆ ಎಚ್ಚರ ವಹಿಸಿರುವ ಕೆಇಎ, ವಿವಾಹಿತ ಮಹಿಳಾ ಅಭ್ಯರ್ಥಿಯು ಪತಿಯ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಸಲ್ಲಿಸಬೇಕು ಎಂಬ ಸ್ಪಷ್ಟನೆ ನೀಡಿದೆ.

ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಳೆದ ವರ್ಷ ಒಂದು ಸಾವಿರ ರೂ. ಪರೀಕ್ಷಾ ಶುಲ್ಕ ವಿಧಿಸಿತ್ತು. ಈ ಬಾರಿ ಅದನ್ನು 750 ರೂ.ಗಳಿಗೆ ಇಳಿಸಿದೆ. ಪರಿಶಿಷ್ಟ ಜಾತಿ, ಪಂಗಡ ಮತ್ತು ತೃತೀಯ ಲಿಂಗಿಗಳಿಗೆ ಕಳೆದ ವರ್ಷ 700 ರೂ.ಗಳಿತ್ತು. ಈ ಬಾರಿ 500 ರೂ. ನಿಗದಿ ಮಾಡಿದೆ.
ಅಕ್ಟೋಬರ್ 11ರಂದು ಪರೀಕ್ಷೆ ನಡೆಸಲಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಸೆ.5 ಮತ್ತು ಶುಲ್ಕ ಪಾವತಿಸಲು ಸೆ.6 ಕೊನೆಯ ದಿನವಾಗಿದೆ.
ಕಳೆದ ಬಾರಿ 33 ವಿಷಯಗಳಿದ್ದವು. ಈ ಬಾರಿ ಪ್ರವಾಸೋದ್ಯಮ ಆಡಳಿತ ಮತ್ತು ನಿರ್ವಹಣೆ,
ಅಪರಾಧ ಅರ್ಥಶಾಸ, ಜಾನಪದ ಸಾಹಿತ್ಯ, ತತ್ವಶಾಸ ಸೇರಿ ನಾಲ್ಕು ವಿಷಯಗಳನ್ನು ಸೇರ್ಪಡೆ ಮಾಡಲಾಗಿದ್ದು, ಒಟ್ಟು 37 ವಿಷಯಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.
ಸ್ನಾತಕೋತ್ತರ ಪದವಿಯಲ್ಲಿ ಸಾಮಾನ್ಯ ವರ್ಗವು ಶೇ.55, ಒಬಿಸಿ, ಎಸ್ಸಿ/ಎಸ್ಟಿ ಹಾಗೂ ಪಿಎಚ್.ಡಿ ಪದವೀಧರರಿಗೆ ಶೇ.50 ಅಂಕಗಳನ್ನು ಅರ್ಹತಾ ಅಂಕವಾಗಿ ನಿಗದಿ ಮಾಡಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net