ಬನಾರಸ್ ಹಿಂದೂ ವಿವಿಗೆ 75 ಎಕರೆ ಭೂದಾನ ಮಾಡಿದ ಕಾಶೀ ಪೀಠ

ಮಹಾರಾಜರ ಜನ್ಮ ಶತಮಾನೋತ್ಸವದಲ್ಲಿ ಸ್ಮರಣೆ
Jagadguru Dr. Chandrashekhara Shivacharya Bhagavatpada inaugurated the birth centenary celebrations of the Maharaja of Kashi, Dr. Vibhuti Narain Singh, held at Banaras Hindu University. Vice-Chancellor Dr. Ajit Kumar Chaturvedi, Vijaya Navada, and the princesses were present.
ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಶಿ ಮಹಾರಾಜ ನರೇಶ ಡಾ.ವಿಭೂತಿನಾರಾಯಣಸಿಂಗ್ ಅವರ ಜನ್ಮ ಶತಮಾನೋತ್ಸವವನ್ನು ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು. ಕುಲಪತಿ ಡಾ.ಅಜಿತ್‌ಕುಮಾರ್ ಚತುರ್ವೇದಿ, ವಿಜಯ ನಾವಾಡ, ರಾಜಪುತ್ರಿಯರು ಉಪಸ್ಥಿತರಿದ್ದರು.
Published on: 

ವಾರಾಣಸಿ : ವಿಶ್ವ ಪ್ರಸಿದ್ಧ ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಗೆ ಅಂದಿನ ಕಾಶಿ ಪೀಠದ ಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು 75 ಎಕರೆ ಭೂಮಿ ದಾನ ಮಾಡಿ ವಿದ್ಯಾವಿಕಾಸಕ್ಕೆ ಶ್ರಮಿಸಿದ್ದಾರೆ ಎಂದು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾಶಿ ಮಹಾರಾಜ ನರೇಶ ಡಾ.ವಿಭೂತಿನಾರಾಯಣ ಸಿಂಗ್ ಜನ್ಮ ಶತಮಾನೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಕ್ರಿ.ಶ. 574 ರಲ್ಲಿ ತಮ್ಮ ಪೂರ್ವಜರ ಸದ್ಗತಿಗಾಗಿ ವಾರಾಣಸಿ ನಗರದ ಕರ್ದಮೇಶ್ವರ ಮಹದೇವ ಮಂದಿರದಿಂದ ಗಂಗಾ ನದಿಯ ದಂಡೆಯವರೆಗಿನ ವಿಶಾಲವಾದ 300 ಎಕರೆ ಭೂಮಿಯನ್ನು ಕಾಶಿ ಜ್ಞಾನಪೀಠದ 51 ನೆಯ ಪೀಠಾಚಾರ್ಯರಾಗಿದ್ದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಜಂಗಮರಿಗೆ ದಾನಮಾಡಿದ್ದರು. 1916 ರಲ್ಲಿ ಮದನ ಮೋಹನ ಮಾಲವೀಯ ಅವರು ಕಾಶಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪನೆಗೆ ನೆರವು ನೀಡುವಂತೆ ಕಾಶಿ ಪೀಠಕ್ಕೆ ಮನವಿ ಮಾಡಿದಾಗ ಆಗಿನ ಪೀಠಾಚಾರ್ಯರಾಗಿದ್ದ ಶ್ರೀಜಗದ್ಗುರು ಶಿವಲಿಂಗ ಶಿವಾಚಾರ್ಯ ಭಗವತ್ಪಾದರು 75 ಎಕರೆ ಭೂಮಿಯನ್ನು ದಾನ ಮಾಡಿದ್ದು, ಈ ವಿಚಾರ ಹಿಂದೂ ವಿಶ್ವದ್ಯಾಲಯದ ಇತಿಹಾಸ ಪುಸ್ತಕದಲ್ಲಿ ಉಲ್ಲೇಖಿತಗೊಂಡಿದ್ದನ್ನು ವಿವರಿಸಿದರು.

ಕಾಶಿಯ ಮಹಾರಾಜ ಡಾ.ವಿಭೂತಿನಾರಾಯಣಸಿಂಹ ಅವರನ್ನು ಕಾಶಿಯ ಜನತೆ ’ನಡೆದಾಡುವ ವಿಶ್ವನಾಥ’ನೆಂದೇ ಭಾವಿಸುತ್ತಿದ್ದರು. ರಾಜರು ರಸ್ತೆಯಲ್ಲಿ ಹೋಗುವಾಗ ಇಕ್ಕೆಲಗಳಲ್ಲಿ ನಿಂತ ಕಾಶಿವಾಸಿಗಳು ‘ಹರಹರ ಮಹಾದೇವ’ ಎಂಬ ಜಯಘೋಷವನ್ನು ಮಾಡುತ್ತಿದ್ದರು. ಪ್ರಸ್ತುತ ಅವರ ಜನ್ಮ ಶತಮಾನೋತ್ಸವ ಆಚರಿಸುತ್ತಿರುವುದಕ್ಕೆ ಜಗದ್ಗುರುಗಳು ಸಂತಸ ವ್ಯಕ್ತಪಡಿಸಿದರು.

Kashi Jagadguru Dr. Chandrashekhara Shivacharya Bhagavatpada released the work 'Sachala Vishwanatha'. The Vice-Chancellor of Banaras Hindu University and members of the royal family were present.
ಸಚಲ ವಿಶ್ವನಾಥ ಕೃತಿಯನ್ನು ಕಾಶೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಬಿಡುಗಡೆ ಮಾಡಿದರು. ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಕುಲಪತಿಗಳು, ರಾಜವಂಶಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಚಲ ವಿಶ್ವನಾಥ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಹಿಂದೂ ವಿಶ್ವವಿದ್ಯಾಲಯದ ಕುಲಪತಿ ಡಾ.ಅಜಿತ್‌ಕುಮಾರ್ ಚತುರ್ವೇದಿ, ರಾಜಪುತ್ರಿಯರಾದ ಹರಪ್ರಿಯಾ, ವಿಷ್ಣುಪ್ರಿಯಾ ಮತ್ತು ಕೃಷ್ಣಪ್ರಿಯಾ, ಮನೋಜ್‌ಕುಮಾರ್ ಗುಪ್ತ ಮತ್ತಿತರರು ಪಾಲ್ಗೊಂಡಿದ್ದರು.