ನಾಡಿನ ಸ್ವಾಭಿಮಾನದ ಪ್ರತಿಕ ಕಸಾಪ

Kasapa, a symbol of the country's self-respect
Kasapa, a symbol of the country's self-respect
Published on
ಮಧುಗಿರಿ: ಕನ್ನಡಿಗರ ಏಕೈಕ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್​ ಕನ್ನಡ ನಾಡು, ಜನತೆಯ ಸ್ವಾಭಿಮಾನದ ಪ್ರತಿಕ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಕೃಷ್ಣಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಟಿ.ವಿ.ವಿ. ಪದವಿಪೂರ್ವ ಕಾಲೇಜು ಮತ್ತು ಸಾಹಿತ್ಯ ಮಂದಾರ ವೇದಿಕೆಯಿಂದ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಪರಿಷತ್​ ಸಂಸ್ಥಾಪನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮೊದಲು ಕರ್ನಾಟಕ ಸಾಹಿತ್ಯ ಪರಿಷತ್​ ಎಂಬ ಹೆಸರಿನಿಂದ ಪ್ರಾರಂಭವಾಗಿ ಮೈಸೂರು, ಹೈದರಾಬಾದ್​, ಕೊಡಗು, ಪ್ರಾಂತ್ಯ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಆ ನಂತರ ಎಚ್​.ವಿ.ನಂಜುಂಡಯ್ಯ ಅವರು 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್​ ಮತ್ತು ಸರ್​.ಎಂ.ವಿಶ್ವೇಶ್ವರಯ್ಯ ಅವರ ನೇತೃತ್ವದಲ್ಲಿ ಪ್ರಾರಂಭಗೊಂಡಿತು. ಇಂದು ಅದರ ಸಾಧನೆ ಕನ್ನಡ, ಕನ್ನಡಿಗ ಕರ್ನಾಟಕದ ಸಾಹಿತ್ಯ ಮತ್ತು ಸಾಂಸತಿಕ ಹಿತ ರಕ್ಷಣೆಯಾಗಿದ್ದು, ವಿವಿಧ ಪ್ರಸಿದ್ಧ ಸಾಹಿತಿಗಳು ಇದಕ್ಕೆ ನೀಡಿದ ಸಹಕಾರ ಸಲಹೆ ಇಲ್ಲಿವರೆಗಿನ ಸಾಧನೆಗೆ ಸಾಕ್ಷಿಯಾಗಿದೆ ಎಂದರು.
ಹಿರಿಯ ಸಾಹಿತಿ ಪ್ರೊ.ಮಲನ ಮೂರ್ತಿ ಮಾತನಾಡಿ, ಇಲ್ಲಿಯವರೆಗೆ ಸಾಹಿತ್ಯ ಪರಿಷತ್​ನ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಒಬ್ಬ ಮಹಿಳೆಯಾಗಲಿ ಅಥವಾ ದಲಿತರಾಗಲಿ ಸ್ಪರ್ಧಿಸದಿರುವುದು ಆಶ್ಚರ್ಯ. ಇದಕ್ಕೂ ಮೀಸಲಾತಿ ತರಬೇಕು. ಆಗ ಪರಿಷತ್​ಗೆ ಆಡಳಿತ ಅಧಿಕಾರಿಗಳನ್ನು ನೇಮಿಸುತ್ತಿರುವುದು ಸಂಶಯಾಸ್ಪದವಾಗಿದೆ. ಪ್ರಸ್ತುತ ಪರಿಷತ್​ನ ಚುನಾವಣೆಗಳು ರಾಜಕೀಯ ಚುನಾವಣೆಗಿಂತ ಕಡಿಮೆ ಇಲ್ಲ. ಇಲ್ಲಿ ಬಹುಸಂಖ್ಯಾತ ಅನಕ್ಷರಸ್ಥರು ವಿಚಾರವಂತರಾಗಿದ್ದರು. ಅವರು ಸದಸ್ಯತ್ವ ಪಡೆಯದಿರುವುದು ಪ್ರಜಾಪ್ರಭುತ್ವದ ಚಿಂತನೆಗೆ ವಿಮುಖವಾಗಿದೆ. ಗಡಿ ಭಾಗದಲ್ಲಿ ನಡೆಯುವ ಭಾಷಾ ಸಮಸ್ಯೆಗಳಿಗೆ ಪರಿಷತ್​ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು.
ಉಪನ್ಯಾಸಕ ಮಂಜುಪ್ರಸಾದ್​ ಮಾತನಾಡಿ, ಸಾಹಿತ್ಯ ಸಮ್ಮೇಳನಗಳ ಚಟುವಟಿಕೆಗಳು ನಗರಕ್ಕೆ ಸೀಮಿತವಾಗಿದೆಯೇ ವಿನ@ ಗ್ರಾಮೀಣ ಕನ್ನಡ ಮನಸುಗಳಿಗೆ ಇದುವರೆಗೂ ತಲುಪಿಲ್ಲ. ನಿಜವಾದ ಕನ್ನಡ ಪ್ರೇಮ, ಗೌರವ, ಮರೆತು. ದೇಶಿಯ ಕನ್ನಡ ಶಾಲೆಗಳು ಮುಚ್ಚುವ ಸ್ಥಿತಿ ನಿಮಾರ್ಣವಾಗುತ್ತದೆ. ಇಂದಿನ ಯುವಕರು ಸಾಹಿತ್ಯ ಪುಸ್ತಕಗಳು ಓದುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.
ಗ್ರಂಥಪಾಲಕ ವಿ.ಎಸ್​.ನಾಗಭೂಷಣ್​, ಪ್ರಾಂಶುಪಾಲ ಹನುಮಂತರಾಯಪ್ಪ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net