ಸಂಪತ್ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್‌ನೋಟ್ ಸಹ ಪತ್ತೆಯಾಗಿದೆ. ಸಂಪತ್ ಅವರು ಸುಮಾರು 60 ಲಕ್ಷ ರೂಪಾಯಿ ಹಣ ಬಡ್ಡಿ ರೂಪದಲ್ಲಿ ಪಡೆದು ಬೇರೆಯವರಿಗೆ ಕೊಟ್ಟಿದ್ದ ಎಂಬುದು ಉಲ್ಲೇಖವಿದೆ. ಧರ್ಮಗೌಡ ಎನ್ನುವರಿಂದ 3.5 ಬಡ್ಡಿಯಂತೆ ಹಣ ಪಡೆದಿದ್ದ ಸಂಪತ್ ಅವರು ಮಂಜುನಾಥ್ ಪವಾರ್, ಕೃಷ್ಣಾಸಾ ಪವಾರ್, ಛಾಯಾ ಕುಲಕರ್ಣಿ, ಜಯರಾಮ್ ಎನ್ನುವರಿಗೆ ಹಣ ಕೊಟ್ಟಿದ್ದ. ಇವರು ಹಣ ಪಡೆದು ವಾಪಾಸ್ ಕೊಡಲಿಲ್ಲ. ಹೀಗಾಗಿ ಬಡ್ಡಿ ಹಣ ಮರಳಿ ಕೊಡುವಂತೆ ಧರ್ಮಗೌಡನ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಮೊಬೈಲ್ ಆಡಿಯೋ, ಮನೆ ಸಿ.ಸಿ ಕ್ಯಾಮೆರಾ ಪರಿಶೀಲನೆ ಮಾಡುವಂತೆ ಡೆತ್ನೋಟ್ನಲ್ಲಿ ಉಲ್ಲೇಖವಾಗಿದೆ.