ಕೆಪೆಕ್ 2025-26ರ ಆರ್ಥಿಕ ವರ್ಷ ಒಂದರಲ್ಲೇ 8,162 ಅರ್ಜಿಗಳನ್ನು ಸ್ವೀಕರಿಸಿ 2,346 ಅರ್ಜಿಗಳಿಗೆ ಸಾಲ ಮಂಜೂರು ಮಾಡಿದೆ. ಈ ಪೈಕಿ 1,764 ಅರ್ಜಿದಾರರಿಗೆ ಸಾಲವನ್ನು ವಿತರಿಸಲಾಗಿದೆ. 2,486 ಅರ್ಜಿಗಳು ಬ್ಯಾಂಕುಗಳಲ್ಲಿ ಪರಿಶೀಲನಾ ಹಂತದಲ್ಲಿದೆ. ಯೋಜನೆ ಪ್ರಾರಂಭವಾದ ಐದು ವರ್ಷಗಳಲ್ಲಿ ಇದು ಗರಿಷ್ಠ ಸಾಧನೆಯಾಗಿದೆ. ಸಾಲ ವಿತರಣೆಯಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲಿಯೇ ಮೊದಲ ಸ್ಥಾನ ಪಡೆದುಕೊಂಡಿದೆ ಎಂದು ಕೆಪೆಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್. ಶಿವಪ್ರಕಾಶ್ ತಿಳಿಸಿದ್ದಾರೆ.