ಸದನ ನಡೆಯುವಾಗ 144 ಸೆಕ್ಷನ್ ಜಾರಿ ಇರುತ್ತೆ. ಫ್ರೀಡಂ ಪಾರ್ಕ್ನಲ್ಲಿ ಏನು ಬೇಕಾದರೂ ಮಾಡಿಕೊಳ್ಳಲಿ. ಇಲ್ಲಿ ಬಂದ್ರೆ 144 ಸೆಕ್ಷನ್ ಇರುತ್ತೆ ಎಂಬುದು ಅವರಿಗೆ ನೆನಪಿರಲಿ. ಒಂದು ವಾರದಿಂದ ಒಂದು ಕಾಗದ ಆದ್ರೂ ಕೊಟ್ಟಿದ್ದಾರಾ? ಸುಮ್ಮನೆ ಹಿಟ್ ಅಂಡ್ ರನ್ ಬೇಡ. ಪ್ರಾಸಿಕ್ಯೂಶನ್ಗೆ ಕೇಳಿದ್ದಾರಂತೆ, ಯಾವ ಆಧಾರದ ಮೇಲೆ ರಾಜೀನಾಮೆ ಕೊಡಿಸೋದು? ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ, ಜನ ಹಿಂದೆನೂ ಪಾಠ ಕಲಿಸಿದ್ದಾರೆ, ಮುಂದೆನೂ ಪಾಠ ಕಲಿಸುತ್ತಾರೆ ಎಂದು ಹೇಳಿದರು.