ಇನ್ನು ನಿಖಿತಾಳ ಕೋಣೆಯಲ್ಲಿ ಒಂದು ಡೆತ್ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ ತಾನು ಎದುರಿಸಿದ ಸಂಕಷ್ಟವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ನನ್ನ ಮತ್ತು ರಾಜು ಸರ್ ನಡುವೆ ಯಾವುದೇ ಸಂಬಂಧವಿಲ್ಲ. ನನಗೆ ಅವರು ನನ್ನ ಪಾಲಕರ ಸಮಾನ. ವಿದ್ಯಾರ್ಥಿನಿಯಾಗಿ ಅವರ ಜತೆ ಒಳ್ಳೆಯ ಬಾಂದವ್ಯ ಹೊಂದಿದ್ದ ಕಾರಣಕ್ಕೆ ನನ್ನ ಸಹಪಾಠಿಗಳು ಇಲ್ಲಸಲ್ಲದ ಕತೆಗಳನ್ನು ಕಟ್ಟಿದರು. ಆ ಕಟ್ಟುಕತೆಯನ್ನು ನಂಬಿ ರಾಜು ಅವರ ಪತ್ನಿ ನಿಶಾ ಕೂಡ ನನ್ನ ಮೇಲೆ ಅನುಮಾನಪಟ್ಟರು. ಮದುವೆಯಾದ ವ್ಯಕ್ತಿಯ ಜತೆ ನನಗೆ ಸಂಬಂಧ ಕಲ್ಪಿಸಿದ್ದನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ರಾಜು ಸರ್ ಬಳಿ ತನ್ನ ಅಧ್ಯಯನಕ್ಕೆ ಬೇಕಾದ ಮಾರ್ಗದರ್ಶನ ಮಾತ್ರ ಪಡೆಯುತ್ತಿದ್ದೆ. ಇಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಅದನ್ನು ಸಾಬೀತು ಮಾಡಲೆಂದೇ ನಾನು ಇಂಥದ್ದೊಂದು ಕಠಿಣ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ಸಹಪಾಠಿಗಳಾದ ರಕ್ಷಾ, ಚಿನ್ಮಯಿ, ಅನುಷಾ, ಸಾಗರ್ ಹಾಗೂ ಗ್ರೀಷ್ಮಾ ಕಾರಣ. ಅಲ್ಲದೆ, ರಾಜು ಅವರ ಪತ್ನಿಯೂ ಕೂಡ ಕಾರಣ ಎಂದು ನಿಖಿತಾ ಉಲ್ಲೇಖಿಸಿದ್ದಾರೆ.