ಕರ್ನಾಟಕ ಮೀಡಿಯಾ ಲೀಗ್ ಟ್ರೋಫಿ ಅನಾವರಣ: ಹೈಪರ್ ಸ್ಪೋರ್ಟ್ಸ್‌ನಿಂದ ಟೂರ್ನಿ ಆಯೋಜನೆ

ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್ ಪಂದ್ಯಾವಳಿಯ ಟ್ರೋಫಿ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ .
ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್ ಪಂದ್ಯಾವಳಿಯ ಟ್ರೋಫಿ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ .
Published on
ಬೆಂಗಳೂರು: ಹೈಪರ್ ಸ್ಪೋರ್ಟ್ಸ್‌ ಆ್ಯಂಡ್ ವೆಲ್ಫೇರ್ ಟ್ರಸ್ಟ್‌ ವತಿಯಿಂದ ಮುಂದಿನ ತಿಂಗಳು ಆಯೋಜಿಸಲಾಗುತ್ತಿರುವ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್ ಪಂದ್ಯಾವಳಿಯ ಟ್ರೋಫಿ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಶುಕ್ರವಾರ ನಡೆಯಿತು. ಗರ್ಭಕಂಠದ ಕ್ಯಾನ್ಸರ್ ಜಾಗೃತಿ ಮೂಡಿಸುವ ಹಾಗೂ ಅದನ್ನು ತಡೆಗಟ್ಟುವುದರ ಬಗ್ಗೆ ಸಮಾಜಮುಖಿ ಸಂದೇಶ ಸಾರುವ ನಿಟ್ಟಿನಲ್ಲಿ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್ ಆಯೋಜನೆ ಮಾಡಲಾಗುತ್ತಿದೆ.
ಪಂದ್ಯಾವಳಿ 15 ದಿನಗಳ ಕಾಲ ನಡೆಯಲಿದ್ದು, ಹಗಲು-ರಾತ್ರಿ ಪಂದ್ಯಗಳೂ ಇರಲಿವೆ ಹಾಗೂ ವಿಶ್ವದರ್ಜೆಯ ಕ್ರಿಕೆಟ್ ನೋಡಲು ಸಿಗಲಿದೆ. ಟೂರ್ನಿ ಮಧ್ಯದಲ್ಲಿಪ್ರಶಸ್ತಿ ಮೊತ್ತ ಏರಿಕೆಯಾಗುವ ಸಾಧ್ಯತೆಯಿದ್ದು, ಅದೊಂದೇ ಟೂರ್ನಿಯಲ್ಲಾಗುವ ಪ್ರಮುಖ ಬದಲಾವಣೆ ಆಗಿರುತ್ತದೆ. ವಿಲ್ಸನ್ ಹಾಗೂ ವಿಕ್ಕಿ ಚೆಂಡಿನ ಮಧ್ಯಯೆ 85 ಗ್ರಾಂನ ತಮ್ಮದೇ ಬ್ರ್ಯಾಂಡ್‌ನ ಚೆಂಡಿನಲ್ಲಿ ಆಡಲಾಗುತ್ತದೆ ಎಂದು ಹೈಪರ್ ಸ್ಪೋರ್ಟ್ಸ್‌ ಆ್ಯಂಡ್ ವೆಲ್ಫೇರ್ ಟ್ರಸ್ಟ್‌ ಮುಖ್ಯಸ್ಥ ಹಾಗೂ ಟೂರ್ನಿ ಆಯೋಜಕರಾದ ಕಿರಣ್ ಶೆಟ್ಟಿ ಘೋಷಿಸಿದ್ದಾರೆ.
ಪಂದ್ಯಾವಳಿಯಲ್ಲಿ 24 ತಂಡಗಳು ಇರಲಿದ್ದು, ಪ್ರತಿ ಗುಂಪಿನಲ್ಲಿ 6 ತಂಡಗಳಂತೆ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ವರ್ಣರಂಜಿತ ಕಾರ್ಯಕ್ರಮದಲ್ಲಿ ಕರ್ನಾಟಕ ಮೀಡಿಯಾ ಚಾಂಪಿಯನ್ಸ್‌ ಲೀಗ್ ಪಂದ್ಯಾವಳಿಯ ಟ್ರೋಫಿ, ಲೋಗೋ ಅನಾವರಣ ಮಾಡಲಾಗಿದೆ. ಇದಲ್ಲದೆ ಉಗ್ರ ತಾಂಡವ ಸಿನಿಮಾ ಟ್ರೈಲರ್ ಬಿಡುಗಡೆಗೊಳಿಸಲಾಯಿತು.
ಹೈಪರ್ ಸ್ಪೋರ್ಟ್ಸ್ & ವೆಲ್ಫೇರ್ ಟ್ರಸ್ಟ್ ಕರ್ನಾಟಕದಾದ್ಯಂತ ಸಮುದಾಯ ಅಭಿವೃದ್ಧಿ, ಕ್ರೀಡಾ ಸಬಲೀಕರಣ ಮತ್ತು ಸಾರ್ವಜನಿಕ ಕಲ್ಯಾಣ ಉಪಕ್ರಮಗಳಿಗೆ ಮೀಸಲಾಗಿರುವ ನೋಂದಾಯಿತ ಸಂಸ್ಥೆಯಾಗಿದೆ. ಈ ಟ್ರಸ್ಟ್ ಕ್ರೀಡೆಗಳ ಮೂಲಕ ಸಾಮಾಜಿಕ ಕಾರಣಗಳನ್ನು ಬೆಂಬಲಿಸುವುದರ ಜೊತೆಗೆ ಆರೋಗ್ಯ ಜಾಗೃತಿ ಮತ್ತು ತಡೆಗಟ್ಟುವ ಆರೈಕೆಯನ್ನು ಉತ್ತೇಜಿಸುತ್ತದೆ, ಮಾಧ್ಯಮ, ಯುವಕರು ಮತ್ತು ಸಮುದಾಯಗಳು ಅರ್ಥಪೂರ್ಣ ಪರಿಣಾಮಕ್ಕಾಗಿ ಒಂದಾಗುವ ವೇದಿಕೆಗಳನ್ನು ಸೃಷ್ಟಿಸುತ್ತದೆ. ಕರ್ನಾಟಕದಾದ್ಯಂತ ಪ್ರಭಾವಶಾಲಿ ಸಾಮಾಜಿಕ ಸಂದೇಶಗಳನ್ನು ಹರಡಲು ಕ್ರೀಡೆಯನ್ನು ಪ್ರಬಲ ಸೇತುವೆಯಾಗಿ ಬಳಸಿಕೊಂಡು, ಕರ್ನಾಟಕದ ಇಡೀ ಮಾಧ್ಯಮ ಸಮುದಾಯವನ್ನು ಒಂದೇ ವೇದಿಕೆಯಡಿಯಲ್ಲಿ ತರುವ ಪ್ರಮುಖ ಉಪಕ್ರಮವಾಗಿ ಕೆಎಂಸಿಎಲ್ ನಿಂತಿದೆ.
ಕೆಎಂಸಿಎಲ್ ಏಕೆ ವಿಶೇಷ: ಮಾಧ್ಯಮಗಳು ಒಂದು ಕಾರಣಕ್ಕಾಗಿ ಆಡುತ್ತಿವೆ. ಮಾಧ್ಯಮಗಳ ರಾಯಭಾರಿಗಳಾಗಿ ವರದಿಗಾರರು, ಸಂಪಾದಕರು, ಛಾಯಾಗ್ರಾಹಕರು, ನಿರೂಪಕರು ಮತ್ತು ಸೃಷ್ಟಿಕರ್ತರು ಸಾಮಾಜಿಕ ಬದಲಾವಣೆಯ ರಾಯಭಾರಿಗಳಾಗಿ ಒಂದಾಗುತ್ತಾರೆ, ಸಂದೇಶಗಳು ತಮ್ಮ ಸಾಮೂಹಿಕ ಪ್ರಭಾವ ಮತ್ತು ತಲುಪುವಿಕೆಯ ಮೂಲಕ ಪ್ರತಿಯೊಂದು ಮನೆಗೂ ತಲುಪುವುದನ್ನು ಖಚಿತಪಡಿಸಿಕೊಳ್ಳುತ್ತಾರೆ.ಮುದ್ರಣ, ಡಿಜಿಟಲ್, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮ ತಂಡಗಳು ಅಭೂತಪೂರ್ವ ಸಹಯೋಗದಲ್ಲಿ ಒಟ್ಟಾಗಿ ನಿಂತಿವೆ, ಅಲ್ಲಿ ಪೈಪೋಟಿಗಳು ಮಾಯವಾಗುತ್ತವೆ ಮತ್ತು ಉದ್ದೇಶವು ಈ ನವೀನ ಉಪಕ್ರಮದ ಕೇಂದ್ರಬಿಂದುವಾಗುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net