ಯುಎಇಯಲ್ಲಿ 49 ಕೋಟಿ ಗೆದ್ದ ಕರ್ನಾಟಕದ ವ್ಯಕ್ತಿ; ಗೆಳೆಯನ ಜೊತೆ ಲಾಟರಿ ಹಣ ಹಂಚಿಕೊಳ್ಳಲು ನಿರ್ಧಾರ! Lottery

ಲಾಟರಿ ವಿಜೇತ ವ್ಯಕ್ತಿ ಶಾಂತನು ಶೆಟ್ಟಿಗಾರ್
ಲಾಟರಿ ವಿಜೇತ ವ್ಯಕ್ತಿ ಶಾಂತನು ಶೆಟ್ಟಿಗಾರ್
Published on

ಪ್ರಮುಖ ಮುಖ್ಯಾಂಶಗಳು

  • ಯುಎಇಯಲ್ಲಿ ನಡೆದ ಜನಪ್ರಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಲಾಟರಿ ಗೆದ್ದ ಕರ್ನಾಟಕದ ವ್ಯಕ್ತಿ
  • ಬರೊಬ್ಬರಿ 49 ಕೋಟಿ ಗೆದ್ದಿರುವ ಶಾಂತನು ಶೆಟ್ಟಿಗಾರ
  • ಗೆದ್ದ ಮೊತ್ತದಲ್ಲಿ ಅರ್ಧ ಹಣವನ್ನು ಸ್ನೇಹಿತನಿಗೆ ನೀಡುವುದಾಗಿ ಘೋಷಣೆ
ಯುಎಇ: ಯುಎಇಯಲ್ಲಿ ನಡೆದ ಜನಪ್ರಿಯ ಬಿಗ್ ಟಿಕೆಟ್ ಲಕ್ಕಿ ಡ್ರಾದಲ್ಲಿ ಕರ್ನಾಟಕದ ಯುವಕನೊಬ್ಬ ಲಾಟರಿ (Lottery) ಗೆದ್ದಿದ್ದು, ಭಾರಿ ಮೊತ್ತದ ಹಣವನ್ನು ಗಳಿಸಿದ್ದಾನೆ ಎಂದು ವರದಿಯಾಗಿದೆ.
ಉಡುಪಿ ಜಿಲ್ಲೆಯ ಕಟಪಾಡಿ ಮಟ್ಟುವಿನ ನಿವಾಸಿ ಶಾಂತನು ಶೆಟ್ಟಿಗಾರ್, ಅಬುಧಾಬಿಯಲ್ಲಿ ನಡೆದ ಲಕ್ಕಿ ಡ್ರಾದಲ್ಲಿ ಸುಮಾರು 20 ಮಿಲಿಯನ್ ದಿರ್ಹಮ್‌ (ಸುಮಾರು 49 ಕೋಟಿ ರೂಪಾಯಿ) ಗಳನ್ನು ಗೆದ್ದಿದ್ದಾನೆ. ಇವರ ಜತೆಗೆ ಇತರೆ ಐದು ವಿಜೇತರು ತಲಾ 1 ಮಿಲಿಯನ್​ ದಿರ್ಹಮ್‌ ಮತ್ತು ಒಂದು ಐಷಾರಾಮಿ ಕಾರುಗಳನ್ನು ಪಡೆದಿದ್ದಾರೆ ಎಂದು ಹೇಳಲಾಗಿದೆ.
ಪ್ರಸ್ತುತ ಒಮಾನ್‌ನಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಶಾಂತನು ಶೆಟ್ಟಿಗಾರ್​ 283 ನೇ ಸರಣಿಯ ಟಿಕೆಟ್​ ಸಂಖ್ಯೆ 305810 ಹೊಂದಿರುವ ಲಾಟರಿ ಟಿಕೆಟ್​ನ್ನು ಖರೀದಿಸಿದ್ದನು. ತಮಗೆ ಬಂದ ಒಂದು ಅನಿರೀಕ್ಷಿತ ಫೋನ್ ಕರೆ ಜೀವನವನ್ನು ಬದಲಿಸುವ ಸುದ್ದಿಯನ್ನು ತಂದಿತು ಎಂದು ಶಾಂತನು ಹೇಳಿದ್ದಾರೆ.

ಗೆಳೆಯನಿಗೆ ಅರ್ಧ ಮೊತ್ತ ನೀಡುತ್ತೇನೆ

ಸಂಘಟಕರೊಂದಿಗೆ ಮಾತನಾಡಿದ ಶಾಂತನು, ಈ ಗೆಲುವಿನಿಂದ ನನಗೆ ತುಂಬಾ ಸಂತೋಷವಾಗಿದೆ, ಈ ಹಣವನ್ನು ಏನು ಮಾಡಬೇಕೆಂದು ಇಲ್ಲಿವರೆಗೆ ನಿರ್ಧರಿಸಿಲ್ಲ ಎಂದು ಹೇಳಿದ ಶಾಂತನು, ವಿಜೇತ ಟಿಕೆಟ್​ನ್ನು ಸ್ನೇಹಿತನೊಂದಿಗೆ ಜಂಟಿಯಾಗಿ ಖರೀದಿಸಿದ್ದ ಹಿನ್ನಲೆ ಗೆದ್ದ ಮೊತ್ತವನ್ನು ಸಹ ಅವನೊಂದಿಗೆ ಅರ್ಧ ಹಂಚಿಕೊಳ್ಳುವುದಾಗಿ ಶಾಂತನು ತಿಳಿಸಿದ್ದಾರೆ.

ನಾನೇ ಅದೃಷ್ಟವಂತ

ನನ್ನ ಈ ಗೆಲುವಿಗೆ ನನ್ನ ಮಗಳೇ ನೇರ ಕಾರಣ ಅವಳು ಎತ್ತಿದ ಟಿಕೆಟ್​ ನನಗೆ ಕೋಟ್ಯಾಧೀಶನನ್ನಾಗಿ ಮಾಡಿದೆ, ನಾನು ಈ ಲಕ್ಕಿ ಡ್ರಾನಲ್ಲಿ 5 ವರ್ಷಗಳಿಂದ ಭಾಗವಹಿಸುತ್ತಿದೆ. ಈ ಲಕ್ಕಿ ಡ್ರಾನಲ್ಲಿ 10-15 ವರ್ಷಗಳ ವರೆಗೆ ಭಾಗವಹಿಸಿದರೂ ಸಹ ಒಂದು ದಿರ್ಹಮ್​ನನ್ನು ಪಡೆಯದವರನ್ನು ನಾನು ನೋಡಿದ್ದೇನೆ. ಆದರೆ ನಾನು ಕೆಲವೇ ಕೆಲವು ವರ್ಷಗಳಲ್ಲಿ ಕೋಟ್ಯಾಧೀಶನಾಗಿದ್ದೇನೆ ಎಂದು ಶಾಂತನು ಹೇಳಿದ್ದಾರೆ. ಈ ಅನಿರೀಕ್ಷಿತ ಘಟನೆಯು ನನ್ನನ್ನು ರಾತ್ರೋರಾತ್ರಿ ಶ್ರೀಮಂತನಾಗಿಸಿದೆ. ನನ್ನ ಅದೃಷ್ಟದಿಂದ ದೊರೆತ ಈ ಹಣವನ್ನು ನನ್ನ ಉದ್ದಿಮೆಯಲ್ಲಿ ತೊಡಗಿಸುವಾಗಿ ಶಾಂತನು ಶೆಟ್ಟಿಗಾರ ಹೇಳಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net