

ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಹವಾಮಾನಬದಲಾವಣೆ, ನಗರೀಕರಣ,ಅಂತರ್ಜಲ ಕುಸಿತಮತ್ತಿತರ ಭವಿಷ್ಯದ ಸವಾಲುಗಳನ್ನುಸಮರ್ಥವಾಗಿ ಎದುರಿಸಲು ಕೃತಕಬುದ್ಧಿಮತ್ತೆ (ಎಐ)ಮತ್ತು ಡಿಜಿಟಲ್ತಂತ್ರಜ್ಞಾನಗಳು ಪ್ರಮುಖ ಪಾತ್ರವಹಿಸಲಿದ್ದು,ಆ ನಿಟ್ಟಿನಲ್ಲಿಎಐ ಆಧಾರಿತ ಜಲ ಆಡಳಿತದಲ್ಲಿಕರ್ನಾಟಕವು ಮುಂಚೂಣಿಯಲ್ಲಿದೆಎಂದು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ಹೇಳಿದರು.
ಬುಧವಾರಬೆಂಗಳೂರಿನಲ್ಲಿ ಬಿಡಬ್ಲೂೃಎಸ್‌ಎಸ್‌ಬಿವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ‘ರಾಷ್ಟ್ರೀಯ ಎಐಮತ್ತು ಡಿಜಿಟಲ್ ವಾಟರ್ ಶೃಂಗಸಭೆ2026’ ಕ್ಕೆಚಾಲನೆ ನೀಡಿ ಮಾತನಾಡಿದರು.
ಬೆಂಗಳೂರುಸೇರಿ ರಾಜ್ಯದ ಮಹಾನಗರಗಳಲ್ಲಿ ನೀರಿನ ಒತ್ತಡ ಹೆಚ್ಚಾಗುತ್ತಿದೆ.ದಕ್ಷ,ಪಾರದರ್ಶಕ ಮತ್ತುಜವಾಬ್ದಾರಿಯುತ ಸಾರ್ವಜನಿಕಸೇವೆಗಳನ್ನು ನೀಡಲು ತಂತ್ರಜ್ಞಾನಆಧಾರಿತ ಆಡಳಿತ ವ್ಯವಸ್ಥೆಗಳುಅತ್ಯಗತ್ಯವಾಗಿದ್ದು,ಆ ನಿಟ್ಟಿನಲ್ಲಿಎಐ ಬಳಕೆ ಅನಿವಾರ್ಯವಾಗಿದೆ ಎಂದುಶಾಲಿನಿ ರಜನೀಶ್ ಅಭಿಪ್ರಾಯಿಸಿದರು.
ಜಲಮಂಡಳಿಅಧ್ಯಕ್ಷ ಡಾ.ರಾಮ್ ಪ್ರಸಾತ್ಮನೋಹರ್ ಮಾತನಾಡಿ,ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವಮಹಾನಗರಗಳಲ್ಲಿ ಒಂದಾದ ಬೆಂಗಳೂರಿನನೀರಿನ ನಿರ್ವಹಣೆಗೆ ಎಐ ಮತ್ತುತಂತ್ರಜ್ಞಾನ ಆಧಾರಿತ ಆಡಳಿತದಅಗತ್ಯವಿದೆ.ಡಿಜಿಟಲ್ ರೂಪಾಂತರದಭಾಗವಾಗಿ ಜಲಮಂಡಳಿಯು ಈಗಾಗಲೇಏಷ್ಯಾದ ಅತಿದೊಡ್ಡ ನಗರ-ಮಟ್ಟದಸ್ಕಾಡಾ ವ್ಯವಸ್ಥೆ ಹಾಗೂ ಮತ್ತಿತರಅಡ್ವಾನ್ಸ್ ತಂತ್ರಜ್ಞಾನಗಳನ್ನುಅಳವಡಿಸಿಕೊಂಡಿದೆ.ಎಐ ಎಂದರೆ ಕೇವಲಡ್ಯಾಶ್‌ಬೋರ್ಡ್‌ಗಳಲ್ಲ.ಇದು ಮುನ್ಸೂಚಕಆಡಳಿತ,ಹೊಣೆಗಾರಿಕೆಯಾಗಿದೆ.ಇದರ ಸಮರ್ಪಕಬಳಕೆಯಿಂದ ವಾರ್ಷಿಕ ಕೋಟ್ಯಾಂತರರೂಪಾಯಿ ವಿದ್ಯುತ್ ಉಳಿತಾಯ,ಪೋಲಾಗುವ ನೀರಿನಉಳಿತಾಯ ಮತ್ತಿತರ ಮಹತ್ವದಪ್ರಯೋಜನಗಳಿವೆ ಎಂದರು.
ಕಾರ್ಯಕ್ರಮದಲ್ಲಿನೀರಿನ ಸದ್ಭಳಕೆ,ಸಂರಕ್ಷಣೆ,ಸೋರಿಕೆ ತಡೆಗಟ್ಟುವಿಕೆಇತ್ಯಾದಿ ಮಹತ್ವದ ಅಂಶಗಳ ಕುರಿತುನಡೆದ ವಿವಿಧ ಗೋಷ್ಠಿಗಳಲ್ಲಿಕ್ಷೇತ್ರಪರಿಣಿತರು ವಿಷಯ ಮಂಡಿಸಿದರು. ಸರ್ಕಾರದ ಅಪರಮುಖ್ಯ ಕಾರ್ಯದರ್ಶಿ ತುಷಾರ್ಗಿರಿನಾಥ್,ಎಫ್‌ಕೆಸಿಸಿಐಅಧ್ಯಕ್ಷೆ ಉಮಾರೆಡ್ಡಿ,ಎಲೆಟ್ಸ್ ಟೆಕ್ನೋಮೀಡಿಯಾ ಸಿಇಓ ರವಿಗುಪ್ತಾ,ಕೆಪಿಎಂಜಿಯನೀಲಾಚಲ್ ಮಿಶ್ರಾ ಮತ್ತಿತರರುಪಾಲ್ಗೊಂಡಿದ್ದರು.
ಕರ್ನಾಟಕವು ಬೆಳವಣಿಗೆಯ ಜೊತೆಗೆ ನೀರಿನ ಬೇಡಿಕೆ ಹೆಚ್ಚುತ್ತಿರುವ ಸಂದಿಗ್ಧ ಕಾಲದಲ್ಲಿದೆ. ಸುಸ್ಥಿರ ಮತ್ತು ಸಮಾನ ನಗರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಎಐ ಆಧಾರಿತ ಆಡಳಿತ ಮತ್ತು ಬುದ್ಧಿವಂತ ಜಲ ವ್ಯವಸ್ಥೆಗಳು ನಿರ್ಣಾಯಕವಾಗಿವೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಬೆಂಗಳೂರು ಜಲಮಂಡಳಿ ದೇಶಕ್ಕೆ ಮಾದರಿಯಾಗಿದೆ.