ಸುಶೀಲ್ ಕಾಂಬ್ರೇಕರ್(2.90 ಲಕ್ಷ ರೂ.), ವಿಶ್ವಾಸ್ ಎಸ್.(2.60 ಲಕ್ಷ ರೂ.), ವಿನೋದ್ ನಾಯಕ್(2.20 ಲಕ್ಷ ರೂ.) ಕ್ರಮವಾಗಿ ಮಂಗಳೂರು ಇಂಡಿಯನ್ಸ್, ವಿಜಯಪುರ ಲಯನ್ಸ್ ಮತ್ತು ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡಗಳ ಪಾಲಾದರು. ಇವರಲ್ಲದೆ, ಮನೋಜ್ ಗೌಡ, ಅಭಿಷೇಕ್ ಎಸ್. ಮಹಮ್ಮದ್ ಆಫ್ರೀದ್ ಮತ್ತು ಆನಂದ್ 2 ಲಕ್ಷ ರೂ.ಗಳಿಗೆ ವಿವಿಧ ಫ್ರಾಂಚೈಸಿಗಳಿಗೆ ಬಿಕರಿಯಾಗುವ ಮೂಲಕ ಗಮನ ಸಳೆದರು.