ಟೂರ್ನಿಯಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಗೆಲುವು ದಾಖಲಿಸಿ 16 ಅಂಕ ಕಲೆಹಾಕಿರುವ ಕರ್ನಾಟಕ ತಂಡ ನಾಕೌಟ್ ಸನಿಹದಲ್ಲಿದೆ. ಮಧ್ಯಪ್ರದೇಶ (+0.935) ರನ್ ರೇಟ್ ಆಧಾರದಲ್ಲಿ ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದು, +0.616 ರನ್‌ರೇಟ್‌ನೊಂದಿಗೆ ಮಯಾಂಕ್ ಪಡೆ ನಂತರದ ಸ್ಥಾನದಲ್ಲಿದೆ. ಕರ್ನಾಟಕ ತಂಡಕ್ಕೆ ಇನ್ನು 3 ಪಂದ್ಯಗಳು ಬಾಕಿಯಿದ್ದು, ಇನ್ನೊಂದು ಗೆಲುವು ನಾಕೌಟ್ ಸ್ಥಾನ ಬಹುತೇಕ ಖಾತ್ರಿಪಡಿಸಲಿದೆ.