Karnataka By Election: ಎರಡೂ ಕ್ಷೇತ್ರಗಳಲ್ಲಿ 100ಕ್ಕೆ 100ರಷ್ಟು ಗೆಲ್ಲುತ್ತೇವೆ! ಸಿಎಂ ಸಿದ್ದರಾಮಯ್ಯ ವಿಶ್ವಾಸ

Karnataka By Election
Karnataka By Election
Published on
ದಾವಣಗೆರೆ: ಜಿಲ್ಲೆಯ ಉಪಚುನಾವಣಾ(Karnataka By Election) ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ದಾವಣಗೆರೆಯಲ್ಲಿ ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ರಾಜ್ಯದ ನಾಯಕರು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಬಗ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ಆದ್ಯತೆ, ಅಭಿವೃದ್ಧಿ ಮಂತ್ರ ಮತ್ತು ವಿರೋಧ ಪಕ್ಷದ ಟೀಕೆಗಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಖಡಕ್ ಉತ್ತರ ನೀಡಿದ್ದಾರೆ.
ಸಂಪ್ರದಾಯದ ಪಾಲನೆ: ಕಾಂಗ್ರೆಸ್ ಪಕ್ಷದಲ್ಲಿ ಮೃತರ ಕುಟುಂಬಸ್ಥರಿಗೆ ಟಿಕೆಟ್ ನೀಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಬಾಗಲಕೋಟೆ ಮತ್ತು ದಾವಣಗೆರೆಯಲ್ಲಿ ನಾವು ಅದೇ ನೀತಿಯನ್ನು ಪಾಲಿಸಿದ್ದೇವೆ. ಕಾಂಗ್ರೆಸ್ ಎಲ್ಲರನ್ನೂ ಒಳಗೊಳ್ಳುವ ಪಕ್ಷವಾಗಿದ್ದು, ಇಲ್ಲಿ ಜಾತಿ-ಧರ್ಮಕ್ಕೆ ಸ್ಥಾನವಿಲ್ಲ ಎಂದು ಸಿಎಂ ಹೇಳಿದರು.
ಬಿಜೆಪಿಗೆ ಟಾಂಗ್: ಈ ಚುನಾವಣೆ 2028ರ ಚುನಾವಣೆಗೆ ದಿಕ್ಸೂಚಿ" ಎಂಬ ಬಿಜೆಪಿಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಹಿಂದೆ ನಡೆದ ಮೂರು ಉಪಚುನಾವಣೆಗಳಲ್ಲಿ ಮಾಜಿ ಸಿಎಂಗಳು ಮತ್ತು ಕೇಂದ್ರ ಸಚಿವರ ಮಕ್ಕಳು ಸ್ಪರ್ಧಿಸಿದ್ದರೂ ಕಾಂಗ್ರೆಸ್ ಭರ್ಜರಿ ಜಯ ಸಾಧಿಸಿತ್ತು. ಅದು ದಿಕ್ಸೂಚಿ ಅಲ್ಲವೇ? ಈ ಎರಡೂ ಕ್ಷೇತ್ರಗಳಲ್ಲಿ ನಾವು 100ಕ್ಕೆ 100 ರಷ್ಟು ಗೆಲ್ಲುವುದು ಖಚಿತ," ಎಂದು ಭವಿಷ್ಯ ನುಡಿದರು.
ಪ್ರಚಾರದ ಅಬ್ಬರ: ಏಪ್ರಿಲ್ 1 ಮತ್ತು 2 ರಂದು ದಾವಣಗೆರೆಯಲ್ಲಿ ಬಿರುಸಿನ ಪ್ರಚಾರ ನಡೆಸುವುದಾಗಿ ಸಿಎಂ ಇದೇ ವೇಳೆ ಘೋಷಿಸಿದರು.

ವಿದೇಶ ಬಿಟ್ಟು ಜನಸೇವೆಗೆ ಬಂದ ಅಭ್ಯರ್ಥಿ: ಶಿವಕುಮಾರ್

ವಿದೇಶ ಬಿಟ್ಟು ಜನಸೇವೆಗೆ ಬಂದ ಅಭ್ಯರ್ಥಿ: "ನಮ್ಮ ಅಭ್ಯರ್ಥಿ ಸಮರ್ಥ್ ವಿದೇಶಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಬೇಕಿತ್ತು. ಆದರೆ, ಜನಸೇವೆಯ ಉದ್ದೇಶದಿಂದ ಅವರನ್ನು ಇಲ್ಲೇ ನಿಲ್ಲಿಸಿದ್ದೇವೆ. ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಯೇ ನಾವು ಅಭ್ಯರ್ಥಿಯನ್ನು ಘೋಷಣೆ ಮಾಡಿದ್ದೇವೆ," ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಅಲ್ಪಸಂಖ್ಯಾತರಿಗೆ ಭರವಸೆ: ಟಿಕೆಟ್ ವಂಚಿತ ಅಲ್ಪಸಂಖ್ಯಾತ ನಾಯಕರ ಕುರಿತು ಮಾತನಾಡಿದ ಅವರು,  ಅಲ್ಪಸಂಖ್ಯಾತರಿಗೆ ಮೂರು ಬಾರಿ ಎಂಎಲ್ಸಿ ಸ್ಥಾನ ನೀಡಿದ್ದೇವೆ. ಮುಂದೆಯೂ ಹಲವು ಅವಕಾಶಗಳಿದ್ದು, ಅಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು," ಎಂದರು.
ಬಂಡಾಯ ಶಮನ: ಶಾಮನೂರು ಪಟ್ಟಶಿಷ್ಯ ನಾಮಪತ್ರ ಸಲ್ಲಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ಟಿಕೆಟ್ ಕೇಳುವ ಹಕ್ಕಿದೆ, ಅವರ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net