ರಾಜ್ಯ ಬಜೆಟ್​: 5 ಗ್ಯಾರಂಟಿ ಯೋಜನೆಗೆ ಮೀಸಲಿಟ್ಟ ಹಣವೆಷ್ಟು ಗೊತ್ತಾ? ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ವಿವರ | Karnataka Budget 2026

ರಾಜ್ಯ ಬಜೆಟ್​ 2026
ರಾಜ್ಯ ಬಜೆಟ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಇಂದು 2026-27ನೇ ಸಾಲಿನ ರಾಜ್ಯ ಬಜೆಟ್​ ಮಂಡನೆ
  • ಸಿಎಂ ಸಿದ್ದರಾಮಯ್ಯ ಅವರ ದಾಖಲೆಯ 17ನೇ ಬಜೆಟ್​
  • ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳಿಗೆ ಮೀಸಲಿಟ್ಟ ಹಣವೆಷ್ಟು?
  • ಕಳೆದ ವರ್ಷಕ್ಕೂ 2026-27ನೇ ಸಾಲಿನ ವರ್ಷಕ್ಕೆ ಎಷ್ಟು ವ್ಯತ್ಯಾಸ? ಇಲ್ಲಿದೆ ನೋಡಿ
ಬೆಂಗಳೂರು: ಇಂದು (ಮಾ.06) ರಾಜ್ಯ ಸರ್ಕಾರದ 2026-27ನೇ ಸಾಲಿನ ಬಹುನಿರೀಕ್ಷಿತ ಆಯವ್ಯಯ (ಬಜೆಟ್) ಮಂಡನೆಯಾಗಿದ್ದು, ಈ ಬಾರಿಯ ಬಜೆಟ್‌ನ ಒಟ್ಟು ಗಾತ್ರ ಬರೋಬ್ಬರಿ 4,48,004 ಕೋಟಿ ರೂ. ಆಗಿದೆ. 2025-26ನೇ ಸಾಲಿನ ಪರಿಷ್ಕೃತ ಅಂದಾಜು 3,95,307 ಕೋಟಿ ರೂ.ಗಳಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್ ಗಾತ್ರದಲ್ಲಿ ಗಣನೀಯ ಏರಿಕೆಯಾಗಿರುವುದು ಗಮನಾರ್ಹ.
ಸಿಎಂ ಸಿದ್ದರಾಮಯ್ಯ ಮಂಡಿಸಿರುವ 17ನೇ ದಾಖಲೆಯ ಬಜೆಟ್​ ಇದಾಗಿದ್ದು, ಅಭಿವೃದ್ಧಿ ವೆಚ್ಚದಲ್ಲಿ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಹಾಗೂ ಇಂಧನ ಇಲಾಖೆಗಳಿಗೆ ಅತಿ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಕೆಲವು ಕ್ಷೇತ್ರಗಳಿಗೆ ಬಜೆಟ್​ನಲ್ಲಿ ಸಿಂಹಪಾಲು ನೀಡಿರುವ ರಾಜ್ಯ ಸರ್ಕಾರ, ತಮ್ಮ ಐದು ಗ್ಯಾರಂಟಿ ಯೋಜನೆಗಳಿಗೂ ಬಜೆಟ್​ ಹಣದಲ್ಲಿ ಪಾಲು ನೀಡಿದೆ. ಹಾಗಿದ್ದರೆ, ಯಾವುದಕ್ಕೆ ಎಷ್ಟೆಷ್ಟು ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂಬುದರ ವಿವರ ಹೀಗಿದೆ ಗಮನಿಸಿ.

5 ಗ್ಯಾರಂಟಿ ಯೋಜನೆಗಳು

ಗೃಹ ಲಕ್ಷ್ಮಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಶಕ್ತಿ ಮತ್ತು ಯುವನಿಧಿ ಯೋಜನೆಗಳಿಗೆ ಬಜೆಟ್​ನ ಹಣದಲ್ಲಿ ಒಟ್ಟು 51,286 ಕೋಟಿ ರೂ.ಗಳನ್ನು ಸರ್ಕಾರ ಮೀಸಲಿಟ್ಟಿದೆ. ಇದರಲ್ಲಿ ಗೃಹಲಕ್ಷ್ಮಿಗೆ 28,608, ಗೃಹಜ್ಯೋತಿಗೆ 10,578, ಅನ್ನಭಾಗ್ಯ 6,200, ಶಕ್ತಿ ಯೋಜನೆಗೆ 5,300 ಮತ್ತು ಯುವನಿಧಿಗೆ 600 ಕೋಟಿ ರೂ. ಹಣವನ್ನು ಎತ್ತಿಡಲಾಗಿದೆ. ಇದರಲ್ಲಿ ಗಮನಿಸಬೇಕಾದ ವಿಷಯ ಎಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿಯ ಬಜೆಟ್​ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 252 ಕೋಟಿ ರೂ. ಹೆಚ್ಚುವರಿ ಹಣವನ್ನು ಮೀಸಲಿಡಲಾಗಿದೆ.

ಹೀಗಿದೆ ನೋಡಿ ವ್ಯತ್ಯಾಸ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net