"ಕರ್ನಾಟಕ ಬಂದ್​' ಕಾವೇರಿರಲಿಲ್ಲ ಗಡಿ..! / ANEKAL

 ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ
ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ
Published on

ಆನೇಕಲ್​ :

ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ ಆದೇಶ ಖಂಡಿಸಿ ಹಾಗೂ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳ ಶೀಘ್ರಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್​ ನಾಗರಾಜ್​ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್​ಗೆ ಆನೇಕಲ್​ ತಾಲೂಕಿನ ಅತ್ತಿಬೆಲೆ ಗಡಿಯಲ್ಲಿ ಬೆಂಬಲ ವ್ಯಕ್ತವಾಯಿತು.

ಬಂದ್​ಗೆ ಬೆಂಬಲ ಸೂಚಿಸಿ ಕನ್ನಡ ಜಾಗೃತಿ ವೇದಿಕೆಅಧ್ಯಕ್ಷ ಮಂಜುನಾಥ್​ ದೇವು ಅವರ ನೇತೃತ್ವದಲ್ಲಿ ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಅತ್ತಿಬೆಲೆ ಟೋಲ್​ನಿಂದ ಗಡಿ ಗೋಪುರದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಕನ್ನಡಪರ ಹೋರಾಟಗಾರರು, ಗಡಿ ಗೋಪುರದ ಬಳಿ ರಸ್ತೆ ತಡೆ ನಡೆಸಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬೆಳಗ್ಗೆ 8ಕ್ಕೆ ರಸ್ತೆ ತಡೆ ಮಾಡಿದ ಪ್ರತಿಭಟನಾಕಾರರು, ಕರ್ನಾಟಕದ ನೀರಿನ ಹಕ್ಕಿನ ವಿಚಾರದಲ್ಲಿ ರಾಜ್ಯಹಾಗೂ ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು, ರಾಜ್ಯದ ರೈತರ ಹಿತಾಸಕ್ತಿಕಾಪಾಡಬೇಕು ಹಾಗೂ ಮೇಕೆದಾಟು ಯೋಜನೆಶೀಘ್ರ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಮೇಕೆದಾಟು ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಕರ್ನಾಟಕದ ಪಾಲಿನ ನೀರಿನ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳಿಗೆ ವೇಗ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ ದೇವ, ಈ ವರ್ಷ ಮುಂಗಾರು ಮಳೆ ಸಂಪೂರ್ಣಕೈಕೊಟ್ಟಿದೆ. ಕಾವೇರಿಕೊಳ್ಳದ ಎಲ್ಲ ಅಣೆಕಟ್ಟುಗಳು ಬರಿದಾಗಿವೆ. ಕೇರಳದಲ್ಲಿ ಮಳೆ ಆಗುತ್ತಿರುವುದರಿಂದ ಕೇವಲ ಕಬಿನಿಯಲ್ಲಿ ಮಾತ್ರ ನೀರು ಬರುತ್ತಿದೆ. ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ವ್ಯವಸಾಯಕ್ಕೆ ಹಾಗೂ ಕುಡಿಯಲು ನೀರು ಬೇಕಾಗಿದೆ. ಮಳೆ ಇಲ್ಲದೆ ಡ್ಯಾಮ್​ಗಳಲ್ಲಿ ನೀರು ಬರಿದಾಗಿದ್ದು, ರಾಜ್ಯ ಸರ್ಕಾರ ಯಾವ ರೀತಿ ಮುಂದಿನ ದಿನಗಳಲ್ಲಿ ನಿರ್ವಹಣೆ ಮಾಡುವುದೋ ಎಂಬಪ್ರಶ್ನೆ ಎದುರಾಗಿದೆ. ಅಂಥದ್ದರಲ್ಲಿ ಕರ್ನಾಟಕದ ವಿರುದ್ಧ ಕಾವೇರಿ ನ್ಯಾಯ ಮಂಡಳಿ ಪದೇಪದೇ ತಮಿಳುನಾಡಿಗೆ ನೀರು ಬಿಡುವಂತೆ ಹೇಳುತ್ತಿದೆ. ಇದು ಯಾವ ರೀತಿಯ ತೀರ್ಪು ಎನ್ನುವ ಪ್ರಶ್ನೆ ರಾಜ್ಯದ ಜನರನ್ನು ಕಾಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಮುಂದಾಗುತ್ತಿಲ್ಲ ಎಂಬುದೇ ನೋವಿನ ಸಂಗತಿ ಎಂದರು.

ಪ್ರತಿಭಟನಾಕಾರರ ಬಂಧನ :

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಪೊಲೀಸರು ಮಧ್ಯಪ್ರವೇಶಿಸಿ,ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಬಳಿಕ ಬಿಡುಗಡೆ ಮಾಡಲಾಯಿತು. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡರು.

ಮಿಶ್ರ ಪ್ರತಿಕ್ರಿಯೆ :

ಅತ್ತಿಬೆಲೆ ಗಡಿಯಲ್ಲಿ ಬಂದ್​ಗೆ ಬೆಂಬಲ ಸೂಚಿಸಿ ಅಂಗಡಿ&ಮುಗ್ಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಲಾಗಿತ್ತು. ಸಾರಿಗೆ ಸೇವೆಯಲ್ಲಿ ವ್ಯತ್ಯಾಸ ಕಂಡು ಬರಲಿಲ್ಲ. ಬಾರ್​ ಮಾಲೀಕರು ಅಂಗಡಿ ತೆರೆದು ವ್ಯಾಪಾರ ಮಾಡಲು ಮುಂದಾಗಿದ್ದು, ಪೊಲೀಸರೇ ಬಾರ್​ಗಳನ್ನು ಮುಚ್ಚಿಸಿದರು. ತಮಿಳುನಾಡು ರಾಜ್ಯ ಸಾರಿಗೆ ಬಸ್​ಗಳು ಸೇರಿದಂತೆ ಬೆಂಗಳೂರು ಹಾಗೂ ರಾಜ್ಯದ ವಿವಿಧ ಭಾಗಗಳಿಗೆ ತೆರಳುವ ವಾಹನಗಳು ಎಂದಿನಂತೆ ಸಂಚರಿಸಿದವು. ಅತ್ತಿಬೆಲೆ ಗಡಿಯಲ್ಲಿ ಬಂದ್​ ಸಂಪೂರ್ಣವಾಗಿ ಪರಿಣಾಮ ಬೀರದೆ, ಪ್ರತಿಭಟನೆ ಮತ್ತು ರಸ್ತೆ ತಡೆಗಷ್ಟೇ ಸೀಮಿತವಾಯಿತು.

ಗಡಿಯಲ್ಲಿಬಂದೋಬಸ್ತ್​ :

ಅತ್ತಿಬೆಲೆ ಗಡಿ ಸೇರಿದಂತೆ ಆನೇಕಲ್​ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್​ ಇಲಾಖೆ ಬಿಗಿ ಬಂದೋಬಸ್ತ್​ ಕೈಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿತ್ತು. ಸ್ಥಳದಲ್ಲಿ ಅಡಿಷನಲ್​ ಎಸ್ಪಿ ಲಕ್ಷಿ$್ಮನಾರಾಯಣ್​, ಡಿವೈಎಸ್ಪಿ ಮಲ್ಲೇಶ್​, ಅತ್ತಿಬೆಲೆ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ಮಂಜುನಾಥ್​, ಜಿಗಣಿ ಠಾಣೆ ಇನ್​ಸ್ಪೆಕ್ಟರ್​ ನವೀನ್​ಮೇಲ್ವಿಚಾರಣೆ ಮಾಡಿದರು. ಪ್ರತಿಭಟನೆಯಲ್ಲಿ ಆ. ನಾರಾಯಣಸ್ವಾಮಿ, ಮುಕ್ತಾರ್​ ಖಾನ್​, ಸರ್ಜಾಪುರ ಅಬ್ಜಲ್​, ಮಾದೇವಪ್ಪ,

ಆರ್​,ಮಧುಕುಮಾರ್​, ಜಾವೀದ್​, ನದೀಮ್​,ವಿಜಯಲಕ್ಷಿ$್ಮ, ಅಂಬುಜಮ್ಮ, ಮುಬಾರಕ್​, ಮುನ್ನಾವರ್​, ಮಾಯಸಂದ್ರ ಸುರೇಶ್​, ಶ್ರೀನಿವಾಸ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net