ಹುಮನಾಬಾದ್: ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ)ದ ತಾಲೂಕು ಘಟಕ ನೂತನವಾಗಿ ಅಸ್ತಿತ್ವಕ್ಕೆ ತರಲಾಗಿದ್ದು, ಅಧ್ಯಕ್ಷರಾಗಿ ವೀರೇಶ ರಡ್ಡಿ ಬೋತಗೀಕರ ಅವರನ್ನು ಆಯ್ಕೆ ಮಾಡಲಾಗಿದೆ. ಪಟ್ಟಣದ ಭವಾನಿ ಮಂದಿರದಲ್ಲಿ ಶುಕ್ರವಾರ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸನ್ಮಾನ ಸಮಾರಂಭದಲ್ಲಿ ಕಾರ್ಯಾಧ್ಯಕ್ಷರಾಗಿ ಪವನ ಗೊಂಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ ರಾಜೇಶ್ವರ್ ಅವರನ್ನು ಆಯ್ಕೆ ಮಾಡಿ ಸನ್ಮಾನಿಸಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಪೀಟರ್ ಚಿಟಗುಪ್ಪ, ಸಂಘಟನೆ ಬಲಿಷ್ಠಗೊಳಿಸುವ ಜತೆಗೆ ಸ್ಥಳಿಯ ಸಮಸ್ಯೆಗಳಿಗೂ ಹೋರಾಟ ನಡೆಸಿ ಜನರ ಸಮಸ್ಯೆ ಸ್ಪಂದಿಸು ನಿಟ್ಟಿನಲ್ಲಿ ಪದಾಧಿಕಾರಿಗಳು ಕಾರ್ಯನಿರ್ವಹಿಸುವಂತೆ ಕರೆ ನೀಡಿದರು. ಸಂಘದಲ್ಲಿರುವವರು ಸಂಘದ ನಿಯಮ ಪಾಲಿಸಬೇಕು. ಉಲಂಘಿಸುವವರಿಗೆ ಗೇಟ್ ಪಾಸ್ ನೀಡಲಾಗುವುದು ಎಂದು ಹೇಳಿದರು. ನ್ಯಾಯವಾದಿ ಮಲ್ಲಿಕಾರ್ಜುನ ಪ್ರಭಾ, ಬಜರಂಗ್ ತಿವಾರಿ, ಅನಿಲ ದೊಡ್ಡಿ, ಮನೋಜ ಸೀತಾಳೆ, ಅರುಣ ಕಲ್ಲೂರ್ ಇತರರಿದ್ದರು.