ದೇಶದ ಉನ್ನತಿಗೆ ಪೌರಪ್ರಜ್ಞೆ ಅವಶ್ಯ: ಪ್ರೊ. ಎಸ್​. ವಿ. ಸಂಕನೂರ

  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಶಾಸಕ ಪ್ರೊ. ಎಸ್​. ವಿ. ಸಂಕನೂರ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದಗೌಡ ಪಾಟೀಲ, ರಾಜು ಹೆಬ್ಬಳ್ಳಿ, ಎಂ.ಎಚ್​.ಸವದತ್ತಿ, ಡಾ. ರಾಜಶೇಖರ ಬಳ್ಳಾರಿ ಇತರರು ಇದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜರುಗಿದ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಶಾಸಕ ಪ್ರೊ. ಎಸ್​. ವಿ. ಸಂಕನೂರ ಅವರನ್ನು ಸನ್ಮಾನಿಸಲಾಯಿತು. ವಿವೇಕಾನಂದಗೌಡ ಪಾಟೀಲ, ರಾಜು ಹೆಬ್ಬಳ್ಳಿ, ಎಂ.ಎಚ್​.ಸವದತ್ತಿ, ಡಾ. ರಾಜಶೇಖರ ಬಳ್ಳಾರಿ ಇತರರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಗದಗ
ದೇಶ ಎಂದರೆ ಅಲ್ಲಿಯ ಜನಗಳು. ಸ್ವಚ್ಛತೆ, ಸೌಂದರ್ಯ ಪ್ರಜ್ಞೆ, ಶಿಸ್ತು, ಕಾನೂನು ಪಾಲನೆಯಂತ ವಿಷಯಗಳಲ್ಲಿ ಜಾಗೃತರಾಗಿ ಸ್ವಯಂ ಪ್ರೇರಿಣೆಯಿಂದ ಕಾಯೋರ್ನ್ಮುಖರಾದಾಗ ದೇಶದ ಏಳ್ಗೆ ಸಾಧ್ಯ ಎಂದು ವಿಧಾನ ಪರಿಷತ್ತಿನ ಶಾಸಕ ಪ್ರೊ. ಎಸ್​.ವಿ. ಸಂಕನೂರ ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ತೋಂಟದ ಸಿದ್ಧಲಿಂಗಶ್ರೀಗಳ ಕನ್ನಡ ಭವನದಲ್ಲಿ ಇತ್ತೀಚೆಗೆ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿ, ಅಮೆರಿಕದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಹಂತದ ಶಿಣ ಸಂರ್ಪೂಣ ಉಚಿತವಾಗಿದೆ. ಗುಣಮಟ್ಟದ ಶಿಣವನ್ನು ಎಲ್ಲ ಮಕ್ಕಳಿಗೆ ನೀಡಲಾಗುತ್ತಿದೆ. ಸ್ವಯಂಸೇವಾ ಮನೋಭಾವನೆಯನ್ನು ಅಮೆರಿಕ ನಾಗರಿಕರು ಹೊಂದಿದ್ದು, ಸರ್ವ ರೀತಿಯಿಂದಲೂ ಸ್ವಾವಲಂಬಿಗಳಾಗಿದ್ದಾರೆ. ನಾನು ಅಮೆರಿಕ ಪ್ರವಾಸದಲ್ಲಿ ಇದ್ದಾಗ ಸಾರಿಗೆ, ಶಿಣ, ಆರೋಗ್ಯ ೇತ್ರಗಳ ವಿಷಯಗಳಲ್ಲಿ ಸ್ವಲ್ಪ ಮಟ್ಟಿನ ಅಧ್ಯಯನವನ್ನು ಮಾಡಲು ಸಹಾಯವಾಯಿತು. ನಮ್ಮಲ್ಲೂ ಕೂಡಾ ಮೂಲಶಿಣದ ಹಂತದಲ್ಲಿಯೇ ಈ ಎಲ್ಲ ಅಂಶಗಳನ್ನು ಕಲಿಸಿಕೊಡುವ ವ್ಯವಸ್ಥೆ ಆಗಬೇಕು ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ರಾಜು ಹೆಬ್ಬಳ್ಳಿ ಅವರು ಮಾತನಾಡಿ, ದೇಶ ಸರ್ವಾಂಗ ಸುಂದರವಾಗಿ ಬೆಳವಣಿಗೆ ಹೊಂದುವ ಹಿನ್ನೆಲೆಯಲ್ಲಿ ಪತ್ರಕರ್ತರು ಮತ್ತು ಪತ್ರಿಕೆಗಳ ಕಾರ್ಯ ಮಹತ್ವದ್ದಾಗಿದೆ. ಜನ ಮತ್ತು ಸರ್ಕಾರದ ಮಧ್ಯೆ ಕೊಂಡಿಯಾಗಿ ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಗದಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ, ಸಂಸತಿಯ ವಿಚಾರಗಳನ್ನು ಪಸರಿಸುವ ಕಾರ್ಯವನ್ನು ಮಾಡಿ ನಾಡಿನ ಗಮನ ಸೆಳೆದಿದೆ ಎಂದು ತಿಳಿಸಿದರು.
ಅಧ್ಯತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯ ವಿವೇಕಾನಂದಗೌಡ ಪಾಟೀಲ ಮಾತನಾಡಿ, ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಪ್ರವಾಸ ಕಥನಗಳು ಗಮನ ಸೆಳೆದಿವೆ. ವಿದೇಶದ ವಿಭಿನ್ನ ವಿಚಾರಗಳನ್ನು ಬರೆಹದ ಮೂಲಕ ಓದುಗನಲ್ಲಿ ವಿಶಿಷ್ಠ ಅನುಭೂತಿಯನ್ನು ಉಂಟು ಮಾಡುವಲ್ಲಿ ಪ್ರವಾಸ ಸಾಹಿತ್ಯ ಯಶಸ್ವಿಯಾಗಿವೆ. ಆಚಾರ, ವಿಚಾರ, ಆಹಾರ, ವಿಹಾರ, ಸಂಸತಿ, ಪರಂಪರೆಯನ್ನು ಅರಿಯಲು ಸಹಾಯ ಮಾಡುತ್ತವೆ ಎಂದು ತಿಳಿಸಿದರು.
ಡಿಡಿಪಿಐ ಕಚೇರಿಯ ತಾಂತ್ರಿಕ ಸಹಾಯಕ ಎಂ. ಎಚ್​. ಸವದತ್ತಿ, ಅನಿಲ ತೆಂಬದಮನಿ, ವಿ. ಡಿ. ಕಣವಿ, ಶರಣು ದೊಡ್ಡೂರ, ಸಂಗಪ್ಪ ವ್ಯಾಪಾರಿ, ಬನೇಶ ಕುಲಕಣಿರ್, ರಾಮಣ್ಣ ವಗ್ಗಿ, ಅರುಣಕುಮಾರ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಎಸ್​.ವಿ. ಸಂಕನೂರು ಅವರನ್ನು ಸನ್ಮಾನಿಸಲಾಯಿತು.
ಚಂದ್ರಶೇಖರ ವಸ್ತ್ರದ ಕೆ.ಎಚ್​.ಬೇಲೂರ, ರತ್ನಕ್ಕ ಪಾಟೀಲ, ಡಾ. ಜಿ.ಬಿ. ಪಾಟೀಲ, ಡಾ. ಧನೇಶ ದೇಸಾಯಿ, ಎಸ್​.ಯು.ಸಜ್ಜನಶೆಟ್ಟರ, ಬಿ. ಜಿ.ಗಿರಿತಮ್ಮಣ್ಣವರ, ಜಿ. ಎ. ಪಾಟೀಲ, ಬಸವರಾಜ ತೋಟಗೇರಿ, ವಿ. ಎಸ್​. ದಲಾಲಿ, ಬಿ. ಬಿ. ಹೊಳಗುಂದಿ, ರಾಜಶೇಖರ ಕರಡಿ, ಅಶೋಕ ಸತ್ಯರಡ್ಡಿ, ಶಕುಂತಲಾ ಗಿಡ್ನಂದಿ, ಜಯನಗೌಡ ಪಾಟೀಲ, ಅಮರೇಶ ರಾಂಪೂರ, ರತ್ನಾ ಪುರಂತರ, ಶಶಿಕಾಂತ ಕೊರ್ಲಹಳ್ಳಿ, ಸಿ. ಕೆ. ಎಚ್​. ಕಡಣಿ ಶಾಸ್ತ್ರೀ, ಎಸ್​. ಆರ್​. ಚನ್ನಪಗೌಡರ, ರವಿ ದೇವರಡ್ಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net