_1775135156019.webp?w=480&auto=format%2Ccompress&fit=max)
_1775135156019.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಕನ್ನಡರಂಗಭೂಮಿಯನ್ನು ಪ್ರೋತ್ಸಾಹಿಸುವಉದ್ದೇಶದಿಂದ ಗವಿಪುರಂನಲ್ಲಿರುವಉದಯಭಾನು ಕಲಾಸಂಘದಲ್ಲಿ ಪ್ರತಿವರ್ಷಆಯೋಜಿಸುವ ಕನ್ನಡ ನಾಟಕೋತ್ಸವವನ್ನುಏ.6 ರಿಂದ12ರವರೆಗೆಒಂದು ವಾರ ಹಮ್ಮಿಕೊಳ್ಳಲಾಗಿದೆ.
ಏ.6ರಂದು ನಾಟಕೋತ್ಸವವನ್ನುನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ಉದ್ಘಾಟಿಸಲಿದ್ದು,ಮಕ್ಕಳಕೂಟದಅಧ್ಯಕ್ಷ ಡಾ.ಮೋಹನ್ಆಳ್ವಾ ಆಶಯ ನುಡಿ ನುಡಿಯಲಿದ್ದಾರೆ.ಪ್ರತಿದಿನ ಸಂಜೆ6.30ಕ್ಕೆನಾಟಕ ಪ್ರದರ್ಶನ ನಡೆಯಲಿದೆ.
ಏ.6ಕ್ಕೆಮಾಲೂರಿನ ರಂಗವಿಜಯ ತಂಡದ ‘ಪ್ರೇಮಮಯಿಹಿಡಿಂಬೆ’ ಏ.7ಕ್ಕೆದೃಶ್ಯ ತಂಡದ ‘ತಾಜಮಹಲಿನ ಟೆಂಡರ್’,ಏ.8ಕ್ಕೆನಾಟ್ಯ ಸರಸ್ವತಿ ಶಾಂತಲಾ ತಂಡದ‘ವಿಕಟ ವಿಲಾಸ’,ಏ.9ಕ್ಕೆರಂಗಪರಂಪರೆ ತಂಡದ ‘ದ್ರುವಸ್ವಾಮಿನಿ’ನಾಟಕ ಪ್ರದರ್ಶನ ನಡೆಯಲಿದೆ.ಏ.10ರಂದು ಹಿರಿಯನಾಟಕಕಾರ ಲೋಕನಾಥ ದೀಕ್ಷಿತ್ರಚಿಸಿ, ಹಿರಿಯರಂಗಕರ್ಮಿ ಸಂಪತ್ ಕುಮಾರ್ನಿರ್ದೇಶಿಸಿರುವ ಹಾಸ್ಯ ಪ್ರದಾನ‘ಭಾಗವತರ ನಾಟಕ ಮಂಡಳಿ’ ನಾಟಕವನ್ನುರಂಗಸಂಸ್ಕೃತಿ ತಂಡದ ಕಲಾವಿದರುಅಭಿನಯಿಸಲಿದ್ದು,ಏ.11ಕ್ಕೆ‘ಜಲಗಾರ’ ಏ.12ಕ್ಕೆದೃಶ್ಯರಂಗ ಕಲಾಸಂಘದ ‘ಹಗ್ಗದಕೊನೆ’ನಾಟಕ ಪ್ರದರ್ಶನಗೊಳ್ಳಲಿದೆ ಎಂದುಉದಯಭಾನು ಕಲಾಸಂಘದ ಸುಗುಣ ಎಸ್.ಚಂದ್ರತಿಳಿಸಿದ್ದಾರೆ.
ಏ.12ರಂದುಸಂಜೆ ನಾಟಕೋತ್ಸವದ ಸಮಾರೋಪ ಸಮಾರಂಭನಡೆಯಲಿದ್ದು,ಹಿರಿಯ ರಂಗಕರ್ಮಿಡಾ.ಬಿ.ವಿ.ರಾಜಾರಾಮ್ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.ಮಾಜಿ ಪಾಲಿಕೆಸದಸ್ಯ ಟಿ.ತಿಮ್ಮೇಗೌಡಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.