ಇತಿಹಾಸದ ಉಳಿವಿಗೆ ಕಲ್ಯಾಣದ ಕೊಡುಗೆ ಅಪಾರ

 ಸೇಡಂನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ರಾಯಚೂರು ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಬಸವರಾಜ ಪಾಟೀಲ್​ ಸೇಡಂ, ಪ್ರೊ.ಎಸ್​.ಕೆ.ಕೊಪ್ಪ ಇತರರಿದ್ದರು.
ಸೇಡಂನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ರಾಯಚೂರು ವಿವಿ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು. ಶ್ರೀ ಸದಾಶಿವ ಸ್ವಾಮೀಜಿ, ಬಸವರಾಜ ಪಾಟೀಲ್​ ಸೇಡಂ, ಪ್ರೊ.ಎಸ್​.ಕೆ.ಕೊಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಯಚೂರು ವಿವಿ ಕುಲಪತಿ ಪ್ರೊ.ಕೆಳಗಿನಮನಿ ಬಣ್ಣನೆ
  • ಸೇಡಂನಲ್ಲಿ ರಾಜ್ಯಮಟ್ಟದ ವಿಚಾರ ಸಂಕಿರಣ
ಸೇಡಂ: ಭಾರತದ ದೇಶದ ಇತಿಹಾಸ ಉಳಿವಿಗೆ, ಅದರಲ್ಲೂ ವಿಶೇಷವಾಗಿ ಪ್ರಾಚಿನ ಕಾಲದ ಕುರುಹುಗಳನ್ನು ಕಾಪಾಡುವಲ್ಲಿ ಕಲ್ಯಾಣ ಕರ್ನಾಟಕದ ಕೊಡುಗೆ ಅಪಾರವಾಗಿದೆ ಎಂದು ರಾಯಚೂರಿನ ಶ್ರೀ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.
ನೃಪತುಂಗ ಪದವಿ ಕಾಲೇಜಿನ ಗ್ರಂಥಾಲಯ ಸಭಾಂಗಣದಲ್ಲಿ ಮೈಸೂರಿನ ಶಾಸಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ನೃಪತುಂಗ ಅಧ್ಯಯನ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ "ಶ್ರೀವಿಜಯ ಕವಿರಾಜಮಾರ್ಗ ಹಾಗೂ ರಾಷ್ಟ್ರಕೂಟರ ಶಾಸನಗಳು' ವಿಷಯ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿ, ಕವಿಗಳು, ಸಾಹಿತಿಗಳು, ವಿದ್ವಾಂಸರು ಸೇರಿ ಅನೇಕರಿಗೆ ರಾಜಾಶ್ರಯ ನೀಡಿದ್ದು ರಾಷ್ಟ್ರಕೂಟರು ಎಂದರು.
ಕವಿರಾಜ ಮಾರ್ಗದ ಮೂಲ ರಚನಾಕಾರರು ಯಾರು ಎನ್ನುವ ಅನೇಕ ಅಧ್ಯಯನದ ನಂತರ ಅದು ರಚನೆ ಮಾಡಿದ್ದು ಶ್ರೀ ವಿಜಯ ಎನ್ನುವುದು ತಿಳಿದುಬಂದಿದೆ. ಕವಿರಾಜಮಾರ್ಗವನ್ನು ಕೇವಲ ಇತಿಹಾಸದ ಭಾಗವಾಗಿ ನೋಡುವುದಲ್ಲ ಅದರೊಳಗೆ ಅನೇಕ ರೀತಿಯ ವಿಚಾರ ಅಡಕವಾಗಿದ್ದರಿಂದ ಅದನ್ನು ಬಹುಮುಖವಾಗಿ ನೋಡಬೇಕಿದೆ. ಸಾಮಾನ್ಯ ಜನರ ಬದುಕಿನಲ್ಲಿ ಕನ್ನಡದ ಅಸ್ಮಿತೆ, ಸ್ವಂತಿಕೆ ಗುರುತಿಸುವ ಗ್ರಂಥವಾಗಿದೆ ಎಂದು ಬಣ್ಣಿಸಿದರು.
ದಾರವಾಡದ ವಿಶ್ರಾಂತ ಪ್ರಾಧ್ಯಾಪಕ ಪೊ.ಎಸ್​.ಕೆ.ಕೊಪ್ಪ ಅವರು ರಾಷ್ಟ್ರಕೂಟರ ಇತಿಹಾಸ, ಬೆಂಗಳೂರಿನ ವಿಶ್ರಾಂತ ಪ್ರಾಧ್ಯಾಪಕ ಡಾ.ಪಿ.ವಿ.ಕೃಷ್ಣಮೂರ್ತಿ ರಾಷ್ಟ್ರಕೂಟರ ಶಾಸನಗಳ ಕುರಿತು ಉಪನ್ಯಾಸ ನೀಡಿದರು.
ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಮೈಸೂರಿನ ವಿಶ್ರಾಂತ ಪ್ರಾಧ್ಯಾಪಕ ಪೊ.ಎಂ.ಎಸ್​.ಕೃಷ್ಣಮೂರ್ತಿ, ಮಾಜಿ ಸಂಸದ ಡಾ.ಬಸವರಾಜ ಪಾಟೀಲ್​ ಸೇಡಂ, ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪೊ.ಎನ್​.ಎಂ.ತಳವಾರ ಇದ್ದರು. ಅಂಜನಾದೇವಿ, ಲಕ್ಷ$್ಮಣ ಭೋವಿ ಪ್ರಾರ್ಥಿಸಿದರು. ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಜಗದೀಶ ಕಡಬಗಾಂವ್​ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಜಗನ್ನಾಥ ತರನಳ್ಳಿ ನಿರೂಪಣೆ ಮಾಡಿದರು. ಕಾರ್ಯದರ್ಶಿ ಅವಿನಾಶ ಬೋರಂಚಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net