ಶ್ರೀಮತಿ ಕೆ.ಟಿ. ಬನಶಂಕರಮ್ಮ ಪ್ರಶಸ್ತಿಗೆ (ಶಿಕ್ಷಕಿ-ಲೇಖಕಿ) ದಾವಣಗೆರೆಯ ಬಿ.ಟಿ.ಗೀತಾ ಮಂಜು, ಶ್ರೀಮತಿ ಶ್ರೀಲೇಖಾ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ಆರ್. ಭೂಮಿಕಾ ಅವರ ‘ಜೊರಾಮಿ’ ಕೃತಿ, ಶ್ರೀಮತಿ ಭಾಗ್ಯ ನಂಜಪ್ಪ ಪ್ರಶಸ್ತಿಗೆ (ವಿಜ್ಞಾನ ಸಾಹಿತ್ಯ) ಸುಕನ್ಯಾ ಸೂನಗಹಳ್ಳಿ ಅವರ ‘ಕಬ್ಬಿನ ಸಿಹಿ ವರ್ಧಿಸಿದ ಅಮ್ಮ-ಡಾ. ಜಾನಕಿ ಅಮ್ಮಾಳ್’ ಕೃತಿ, ಶ್ರೀಮತಿ ಜಿ.ವಿ. ನಿರ್ಮಲ ಪ್ರಶಸ್ತಿಗೆ (ಅನುವಾದ ಸಾಹಿತ್ಯ) ವೀಣಾ ಮುರುಳೀಧರ್ ಅವರ ‘ಚನ್ನೆಮಣೆಯ ಜಗತ್ತು’ ಕೃತಿ ಆಯ್ಕೆಯಾಗಿದೆ. ಶ್ರೀಮತಿ ಉಷಾ ಪಿ. ರೈ ಪ್ರಶಸ್ತಿಗೆ (ಕಾವ್ಯ) ಪ್ರಜ್ಞಾ ಮತ್ತಿಹಳ್ಳಿ ಅವರ ‘ಬೆಳದಿಂಗಳ ಸೋನೆಮಳೆ’, ಶ್ರೀಮತಿ ನಾಗರತ್ನ ಚಂದ್ರಶೇಖರ್ ಪ್ರಶಸ್ತಿಗೆ (ಲಲಿತ ಪ್ರಬಂಧ) ಸುಚಿತ್ರಾ ಹೆಗಡೆ ಅವರ ‘ಮಿಂಚುಹುಳದ ದಾರಿ’, ಡಾ.ಬಿ.ಸಿ. ಶೈಲಾ ನಾಗರಾಜ್ ಕಾವ್ಯ ಪ್ರಶಸ್ತಿಗೆ ಮಮತಾ ಅರಸೀಕೆರೆ ಅವರ ‘ಗಾಯಗಳಿಗೆ ವಿದಾಯ ಹೇಳಬೇಕು’, ಶ್ರೀಮತಿ ಸಂಕಮ್ಮ ಸಂಕಣ್ಣನವರ್ ಕಾವ್ಯ ಪ್ರಶಸ್ತಿಗೆ ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕೃತಿ ಭಾಜನವಾಗಿದೆ.