ಜ.25ಕ್ಕೆ ಕಲಾಶೃಂಗ ಪ್ರಶಸ್ತಿ ಪ್ರದಾನ; ಶ್ರೀರಾಮ ಕಲಾ ವೇದಿಕೆಯ ನಾದ ನಮನ

 ಪ್ರಸಿದ್ದ ತಬಲಾ ವಾದಕ ಪಂಡಿತ್ ಸ್ವಪನ್ ಚೌಧರಿ
ಪ್ರಸಿದ್ದ ತಬಲಾ ವಾದಕ ಪಂಡಿತ್ ಸ್ವಪನ್ ಚೌಧರಿ
Published on

ಪ್ರಮುಖ ಮುಖ್ಯಾಂಶಗಳು

  • ಜ.25ಕ್ಕೆ ಕಲಾಶೃಂಗ ಪ್ರಶಸ್ತಿ ಪ್ರದಾನ, ಸ್ವಪನ್ ಚೌಧರಿಗೆ ಗೌರವ
  • ಪಂ. ಶೇಷಗಿರಿ ಹಾನಗಲ್ ಅವರ ಜನ್ಮ ಶತಮಾನೋತ್ಸವ
  • ಶ್ರೀರಾಮ ಕಲಾ ವೇದಿಕೆಯ ನಾದ ನಮನ ಕಾರ್ಯಕ್ರಮ

ಬೆಂಗಳೂರು:ಶ್ರೀ ರಾಮ ಕಲಾವೇದಿಕೆಯು ಗುರು ಪಂ.ಶೇಷಗಿರಿ ಹಾನಗಲ್ಅವರ ಜನ್ಮ ಶತಮಾನೋತ್ಸವದ ಪ್ರಯುಕ್ತಜ.25ರಂದುನಾದ ನಮನ ಕಾರ್ಯಕ್ರಮ ಆಯೋಜಿಸಿದೆ.

ಕೆ.ಆರ್.ರಸ್ತೆಯಲ್ಲಿರುವ ಗಾಯನ ಸಮಾಜದಲ್ಲಿ ರಾಮಚಂದ್ರಯಾವಗಲ್ ಸ್ಮರಣಾರ್ಥ ಏರ್ಪಡಿಸಿರುವವಾರ್ಷಿಕ ಸಂಗೀತ ಹಬ್ಬದ ಈಕಾರ್ಯಕ್ರಮದಲ್ಲಿ ಪ್ರತಿಷ್ಠಿತಕಲಾಶೃಂಗ ಪ್ರಶಸ್ತಿ ಪ್ರದಾನನಡೆಯಲಿದೆ.

2026ನೇಸಾಲಿನ ಪ್ರತಿಷ್ಠಿತ ಕಲಾಶೃಂಗಪ್ರಶಸ್ತಿಯನ್ನು ಪ್ರಸಿದ್ದ ತಬಲಾವಾದಕ ಪಂಡಿತ್ ಸ್ವಪನ್ ಚೌಧರಿಅವರಿಗೆ ನೀಡಿ ಗೌರಿವಿಸಲಾಗುತ್ತದೆ.ಕಾರ್ಯಕ್ರಮದಲ್ಲಿಅಂತಾರಾಷ್ಟ್ರೀಯ ಖ್ಯಾತಿಯ ಪಂ.ಪ್ರವೀಣ್ ಗೋಡ್ಖಿಂಡಿಮತ್ತು ವಿದ್ವಾನ್ ಕುಮಾರೇಶ್ ಅವರಕೊಳಲು ಮತ್ತು ಪಿಟೀಲು ಜುಗಲ್ಬಂಧಿ,ವಿದುಷಿ ಅನುರಾಧಕುಬೇರ ಹಾಗೂ ವಿರಾಜ್ ಜೋಶಿ ಗಾಯನ,ಜಗದೀಶ ಕುರ್ತಕೋಟಿಯವರತಾಳವಾದ್ಯ ಪ್ರದರ್ಶನ ನಡೆಯಲಿದೆ.

ಸಂಗೀತದಧ್ವನಿಯನ್ನು ನಾದಬ್ರಹ್ಮ ಎಂದುಕರೆಯಲಾಗುತ್ತದೆ.ಸಂಗೀತವು ಕೇವಲಮನರಂಜನೆಗಾಗಿ ಮಾತ್ರವಲ್ಲದೆಸ್ವಯಂ ಉನ್ನತಿಯ ಸಾಧನವೆಂದುನಂಬಲಾಗಿದೆ.ನಮ್ಮ ದೇಶದ ಅನೇಕಮಹಾನ್ ಚೇತನಗಳು ಸಂಗೀತವನ್ನುತಪಸ್ಸಿನಂತೆ ಆಚರಿಸಿದ್ದಾರೆಅಂತಹವರನ್ನು ನೆನಪಿಸಿಕೊಳ್ಳುವಸುಸಮಯವೇ ನಾದ ನಮನ.

ಪಂಡಿತ್ ರವೀಂದ್ರಯಾವಗಲ್ ಅವರ ತಂದೆ ರಾಮಚಂದ್ರಯಾವಗಲ್ ಅಂತಹ ಸಂಗೀತ ತಪಸ್ವಿಯಾಗಿದ್ದರು.ತಂದೆಯವರಿಂದಪ್ರೇರಿತರಾಗಿ ಆರಂಭಿಸಿದ ಸಂಗೀತಸೇವೆಯನ್ನು ಮುಂದುವರೆಸುವಕ್ಕಾಗಿಯೇಹುಟ್ಟುಹಾಕಿದ ಶ್ರೀರಾಮ ಕಲಾವೇದಿಕೆ ಸಂಗೀತ ಕ್ಷೇತ್ರದಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನುನಡೆಸುತ್ತಿದೆ.

ಸಂಗೀತವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ,ಕಲಾವಿದರಿಗೆಸಹಾಯ, ಸಾಧಕರರಿಗೆಕಲಾಶೃಂಗ ಪ್ರಶಸ್ತಿ ಮತ್ತಿತರಚಟುವಟಿಕೆಗಳನ್ನು ನಡೆಸುತ್ತಿರುವಶ್ರೀರಾಮ ಕಲಾ ವೇದಿಕೆಯ ಉದ್ಘಾಟನೆಯನ್ನುಸಂಗೀತ ದಿಗ್ಗಜರಾದ ಡಾ.ಗಂಗೂಬಾಯಿಹಾನಗಲ್,ಪಂಡಿತ್ಹರಿಪ್ರಸಾದ್ ಚೌರಾಸಿಯಾ ಅವರುಮಾಡಿದ್ದು ಗಮನಾರ್ಹ.

ಕೇವಲಸಂಗೀತ ಕ್ಷೇತ್ರ ಮಾತ್ರವಲ್ಲದೆ,ಸಾಮಾಜಿಕಬದ್ಧತೆಯನ್ನು ಪ್ರದರ್ಶಿಸುವಲ್ಲಿಯೂವೇದಿಕೆ ಮುಂಚೂಣಿಯಲ್ಲಿದೆ.ಬೀಚ್ ಸ್ವಚ್ಛತಾಅಭಿಯಾನ, ಸರ್ಕಾರಿಶಾಲೆಯಲ್ಲಿ ಶೌಚಾಲಯ ನಿರ್ಮಾಣ,ಕಾರ್ಯಗಳುಮಾದರಿಯಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net