ಯಾದಗಿರಿ : ಒಳಮೀಸಲಾತಿ ಜಾರಿಗಾಗಿ ನ್ಯಾಯಾಮೂರ್ತಿ ನಾಗಮೋಹನ್ ದಾಸ್ ಅವರು ನೀಡಿರುವ ವರದಿ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ರಾಜ್ಯ ಬಲಗೈ ಸಮುದಾಹ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಆಗ್ರಹಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಶ, ಅಸ್ಪರ್ಶ ಎರಡು ಗಂಪುಗಳ ನಡುವೆ ಉದ್ಯೋಗ ಮತ್ತು ಶೈಣಿಕ ಮೀಸಲಾತಿ ಜಾರಿ ಮಾಡಬೇಕೆಂದು ಆಗ್ರಹಿಸಿ ಮಾ.25ರಂದು ಸಮಿತಿಯಿಂದ ಬೆಂಗಳೂರಿನ ಫ್ರೀಡ್ಂ ಪಾಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪದಾಧಿಕಾರಿಗಳಾದ ವೀರಭದ್ರಪ್ಪ ಯಡ್ಡಳ್ಳಿ,ನೀಲಕಂಠ ಬಡಿಗೇರ, ಶ್ರೀಶೈಲ್ ಹೊಸಮನಿ, ಮರೆಪ್ಪ ಚಟ್ಟರಕರ್ ಜಂಟಿಯಾಗಿ ಹೇಳಿದರು.
ವರದಿಯಲ್ಲಿ ಎ.ಬಿ. ಮತ್ತು ಸಿ ಎಂದು ವಿಂಗಡಿಸಲಾಗಿದ್ದು, ನೇಮಕಾತಿಗಳಲ್ಲಿ ಎ ಗುಂಪಿನಲ್ಲಿ ಬರುವ ಜಾತಿಗಳಿಗೆ ಎಲ್ಲ ಪ್ರಾತಿನಿದ್ಯ ದೊರಕಿದ್ದು, ಬಿ ಗುಂಪಿನಲ್ಲಿರುವ ಬಲಗೈ ಸಮುದಾಯಕ್ಕೆ ಭಾರಿ ಅನ್ಯಾಯವಾಗುತ್ತದೆ ಎಂದು ವಿವರಿಸಿದರು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದರೆ ಸಂಪುಟದಲ್ಲಿ ಮೂರು ಜನ ಬಲಗೈ ಸಮುದಾಯದ ಸಚಿವರು ಏಳು ಜನ ಐಎಎಸ್ ಅಧಿಕಾರಿಗಳು ಯಾಕೆ ಮೌನವಹಿಸಿದ್ದರು ಎಂಬ ಪತ್ರಕರ್ತರ ಪ್ರಶ್ನೆಗೆ ತಬ್ಬಿಬ್ಬಾಗಿ ಉತ್ತರಿಸಿದ ಅವರು, ನಮ್ಮವರಿಂದಲೂ ನಮಗೆ ಈಗ ಅನ್ಯಾಯವಾಗುತ್ತಿದೆ. ಅದನ್ನು ಸಹ ನಾವು ಖಂಡಿಸುತ್ತೇವೆ ಎಂದು ಹೇಳಿದರು.
ನಾವು ಯಾವುದೇ ಜಾತಿ ಮತ್ತು ಮೀಸಲಾತಿ ವಿರುದ್ಧ ಹೋರಾಟ ಮಾಡುತ್ತಿಲ್ಲ, ದಲಿತ ಸಮುದಾಯದ 101 ಜಾತಿಗಳಿಗೂ ಸಮಾನ ಮೀಸಲಾತಿ ಸಿಗಲಿ ಎಂಬುದೇ ನಮ್ಮ ಆಶಯ. ಆದರೆ ನ್ಯಾಯಾಮೂರ್ತಿಗಳು ನೀಡಿದ ವರದಿಯಿಂದ ಹೀಗೆ ನಮಗೆ ಅನ್ಯಾಯವಾಗುತ್ತದೆ ಎಂಬ ಕಲ್ಪನೆ ಆರಂಭದಲ್ಲಿ ಇರಲಿಲ್ಲ. ಧಾರವಾಡ ಕೃಷಿ ವಿವಿಯಲ್ಲಿ ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸಿದಾಗ ಇದರ ಅಸಲಿ ಸತ್ಯ ಹೊರ ಬಂದಿದೆ ಎಂದರು.
ಅಂದಿನ ಹೋರಾಟವು ಮೈಸೂರಿನ ಾನ ಪ್ರಕಾಶ ಸ್ವಾಮಿಗಳ ನೇತೃತ್ವದಲ್ಲಿ, ಸಮಿತಿ ಅಧ್ಯಕ್ಷ ಸಿದ್ದಯ್ಯ, ಚಂದ್ರಶೇಖರ ಅವರ ಸಮ್ಮುಖದಲ್ಲಿ ನಡೆಯಲಿದೆ. ಜಿಲ್ಲೆಯಿಂದ ಸುಮಾರು ಐದು ಸಾವಿರ ಜನರು ಆ ಹೋರಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.