ಬೈಟ್ಸ್‌ನಲ್ಲಿಯೇ ಕಳೆದೋಗುತ್ತಿದೆ ಪತ್ರಿಕೋದ್ಯಮ: ಕೆ.ವಿ. ಪ್ರಭಾಕರ್ ಕಳವಳ

ಮಾಧ್ಯಮ ಹಬ್ಬ-2026 ಕಾರ್ಯಾಗಾರ
ಮಾಧ್ಯಮ ಹಬ್ಬ-2026 ಕಾರ್ಯಾಗಾರ
Published on

ಪ್ರಮುಖ ಮುಖ್ಯಾಂಶಗಳು

  • ವಾರ್ತಾ ಇಲಾಖೆ, ಬೆಂಗಳೂರು ವಿವಿ, ಬೆಂಗಳೂರು ನಗರ ವಿವಿ ಆಯೋಜಿಸಿದ್ದ ಎರಡು ದಿನಗಳ ಮಾಧ್ಯಮ ಹಬ್ಬ-2026 ಕಾರ್ಯಾಗಾರ
  • ಸಾಮಾಜಿಕ ಜಾಗೃತಿಯು ತಾವು ನೋಡುವ ನೋಟ, ಗ್ರಹಿಕೆಯಿಂದ ರೂಪುಗೊಳ್ಳಲಿದೆ
  • ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು. ಪತ್ರಕರ್ತರಾಗುವವರಿಗೆ ಓದಿನ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು
ಬೆಂಗಳೂರು: ಜನಸಾಮಾನ್ಯರ ದನಿಯಾಗಿ, ಮಾನವೀಯ ಮೌಲ್ಯಗಳನ್ನು ಕಾಪಾಡಬೇಕಿರುವ ಮಾಧ್ಯಮ ಇಂದು ರಾಜಕೀಯ, ಸಿನಿಮಾ ಮತ್ತು ಅಪರಾಧ ಸುದ್ದಿಗಳನ್ನೇ ವಿಜೃಂಭಿಸುತ್ತಿದ್ದು, ಸ್ಟೇಟ್‌ಮೆಂಟ್ ಜರ್ನಲಿಸಂನಲ್ಲಿಯೇ ಕಳೆದು ಹೋಗುತ್ತಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಕಳವಳ ವ್ಯಕ್ತಪಡಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಮಾಧ್ಯಮ ಹಬ್ಬ-2026 ಕಾರ್ಯಾಗಾರಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚೆಗೆ ಕೊಪ್ಪಳದಲ್ಲಿ ಸರ್ಕಾರದಿಂದ ನಡೆದ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಯಾರಿಗೆ ಹಕ್ಕುಪತ್ರ ಸಿಕ್ಕಿತು, ಅರ್ಹರಿಗೆ ಸಿಕ್ಕಿದೆಯಾ ಇಲ್ಲವೇ? ಎಷ್ಟು ಮಂದಿಗೆ ಇದರಿಂದ ಅನುಕೂಲವಾಯಿತು ಎಂಬ ವಿಚಾರವಾಗಿ ಸುದ್ದಿಯಾಗಬೇಕಿತ್ತು. ಆದರೆ, ಸಮಾವೇಶದಲ್ಲಿ ಸಿಎಂ-ಡಿಸಿಎಂ ಕೈಕುಲುಕಿಲ್ಲ ಎಂಬುದು ದೊಡ್ಡಮಟ್ಟದಲ್ಲಿ ಸುದ್ದಿಯಾಯಿತು. ಸಮಾವೇಶ ನಡೆಸಿರುವುದು ಸಿಎಂ-ಡಿಸಿಎಂ ಕೈಕುಲುಕುವುದಕ್ಕಾಗಿಯೇ?, ಇಂತಹ ಸೂಕ್ಷ್ಮತೆಯನ್ನು ಸುದ್ದಿಮನೆ ಹಾಗೂ ವರದಿಗಾರರು ಚಿಂತನೆ ನಡೆಸಬೇಕಿದೆ ಎಂದು ಮಾರ್ಮಿಕವಾಗಿ ನುಡಿದರು.
ಹಾಗೆಯೇ ಸತ್ಯ ಮತ್ತು ಸುಳ್ಳಿನ ಸುದ್ದಿಗಳನ್ನು ಸುದ್ದಿಮನೆಯಲ್ಲಿ ್ಯಾಕ್ಟ್ ಆೃಂಡ್ ಚೆಕ್ ಆಗಬೇಕಿದೆ. ಸುದ್ದಿಗಳನ್ನು ಪ್ರ್ೂ ರೀಡ್ ಮಾಡಿದಾಗ ಸಾಮಾಜಿಕ ನ್ಯಾಯ ಒದಗಿಸಲು ಮತ್ತು ಪರಿಣಾಮಕಾರಿ ಪತ್ರಕರ್ತನಾಗಲು ಸಾಧ್ಯವಾಗಲಿದೆ. ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರ ಹೊಣೆಗಾರಿಕೆಯಾಗಿದೆ. ಸಾಮಾಜಿಕ ಜಾಗೃತಿಯು ತಾವು ನೋಡುವ ನೋಟ, ಗ್ರಹಿಕೆಯಿಂದ ರೂಪುಗೊಳ್ಳಲಿದೆ ಎಂದು ಹೇಳಿದರು.
ವೇದಿಕೆ ಮೇಲಿರುವ ದಿನೇಶ್ ಅಮೀನ್‌ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ. ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್‌ಕೆ, ಡಿವಿಜಿ, ಟಿಎಸ್‌ಆರ್ ಸೇರಿ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆ ರೂಪಿಸಿ ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ. ಅಂತಹ ಸೂಚಿಗಳು ಇಂದಿನ ದಿನಗಳಿಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ದಿನೇಶ್ ಅಮೀನ್‌ಮಟ್ಟು ಅವರು ಮಾತನಾಡಿ, ಬರೆಯುವುದಕ್ಕಿಂತ ಹೆಚ್ಚಾಗಿ ಓದಬೇಕು. ಪತ್ರಕರ್ತರಾಗುವವರಿಗೆ ಓದಿನ ಹಸಿವು ಮತ್ತು ಸಾಮಾಜಿಕ ಜವಾಬ್ದಾರಿ ಇರಬೇಕು. ಸಾಮಾಜಿಕ ಜವಾಬ್ದಾರಿ ಇಲ್ಲದ ಯಾವುದೇ ವೃತ್ತಿಯು ಸಾಮಾಜಿಕ ಪಾಪವಾಗಿರುತ್ತದೆ. ಪಾತಕ, ಮೂಢನಂಬಿಕೆಗಳನ್ನು ವಿಜೃಂಭಿಸುವವರು ಉತ್ತಮ ಪತ್ರಕರ್ತ ಇರಲಿ, ಜವಾಬ್ದಾರಿಯುತ ನಾಗರಿಕ ಕೂಡ ಆಗಿರಲು ಸಾಧ್ಯವಿಲ್ಲ. ಅಜ್ಞಾನ, ಅಸೂಕ್ಷ್ಮ ಆಗಿರುವವರು ಪತ್ರಕರ್ತ ಎನ್ನಿಸಲು ಸಾಧ್ಯವೇ ಇಲ್ಲ ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಬೆಂ.ನಗರ ವಿವಿ ಕುಲಪತಿ ಪ್ರೊ. ಬಿ. ರಮೇಶ್, ಕುಲಸಚಿವ ನವೀನ್ ಜೋಸ್ೆ, ವಾರ್ತಾ ಇಲಾಖೆ ಉಪನಿರ್ದೇಶಕಿ ಪಲ್ಲವಿ ಹೊನ್ನಾಪುರ, ಬೆಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಡಾ. ವಾಹಿನಿ ಮತ್ತು ಡಾ. ಶೈಲಶ್ರೀ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
"

ಮಾಧ್ಯಮಗಳ ಉದ್ದೇಶಗಳನ್ನು ಅರ್ಥಮಾಡಿಕೊಳ್ಳಲು ಕೇವಲ ಲೇಖಲ, ಸುದ್ದಿಗಳಿಂದ ಸಾಧ್ಯವಿಲ್ಲ. ಸಾಮಾಜಿಕ ಮೌಲ್ಯಗಳನ್ನು ಗ್ರಹಿಸಬೇಕಿದೆ. ವೃತ್ತಿಪರತೆಯನ್ನು ಕಾಪಾಡಿಕೊಂಡಾಗ ವರದಿಯಿಂದಾದ ಪರಿವರ್ತನೆ ತಿಳಿಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net