ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಿ:ಜೊಲ್ಲೆ

ನಾಯಕತ್ವ ಗುಣ ಬೆಳೆಸಿಕೊಳ್ಳಿ :ಶಶಿಕಲಾ ಜೊಲ್ಲೆ ಕರೆ
ನಾಯಕತ್ವ ಗುಣ ಬೆಳೆಸಿಕೊಳ್ಳಿ :ಶಶಿಕಲಾ ಜೊಲ್ಲೆ ಕರೆ
Published on

ಪ್ರಮುಖ ಮುಖ್ಯಾಂಶಗಳು

  • ನಾಯಕತ್ವ ಗುಣ ಬೆಳೆಸಿಕೊಳ್ಳುವಂತೆ ಶಶಿಕಲಾ ಜೊಲ್ಲೆ ಕರೆ
  • ಯಕ್ಸಂಬಾ ಶಿವಶಂಕರ ಜೊಲ್ಲೆ ಶಾಲಾ ವಿದ್ಯಾರ್ಥಿಗಳ ಪ್ರದಗ್ರಹಣ
  • ಶಾಸಕಿ ಶಶಿಕಲಾ ಜೊಲ್ಲೆ,ಶಿವಪ್ರಸಾದ ಜೊಲ್ಲೆ ಭಾಗಿ
ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು
|ಶಾಸಕಿ ಶಶಿಕಲಾ ಜೊಲ್ಲೆ ಸಲಹೆ | ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ:
ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯದ ಸದ್ಬಳಕೆ , ಕಠಿಣ ಪರಿಶ್ರಮ ಹಾಗೂ ನಾಯಕತ್ವ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಜೊಲ್ಲೆ ಸಂಸ್ಥೆ ಸಹ ಸಂಸ್ಥಾಪಕರು ಹಾಗೂ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅಭಿಪ್ರಾಯಪಟ್ಟರು.
ತಾಲೂಕಿನ ಯಕ್ಸಂಬಾ ಪಟ್ಟಣದ ಜೊಲ್ಲೆ ಗ್ರೂಪ್‌ನ ಶಿವಶಂಕರ ಜೊಲ್ಲೆ ಆಂಗ್ಲ ಮಾದ್ಯಮ ಪಬ್ಲಿಕ್ ಶಾಲೆ,(ಸಿಬಿಎಸ್‌ಇ)ಯಲ್ಲಿ ಮಂಗಳವಾರ ನಡೆದ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಸಮಯ ವ್ಯರ್ಥ ಮಾಡದೇ ನಿರಂತರ ಅಧ್ಯಯನ ಮಾಡುವ ಮೂಲಕ ಗುರಿ ಸಾಧನೆಗೆ ಮುಂದಾಗಬೇಕು.
ಜೊಲ್ಲೆ ಗ್ರೂಪ್‌ನ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ ವಿದ್ಯಾರ್ಥಿಗಳ ನಾಯಕತ್ವ ಗುಣ.ಉತ್ತಮ ಸಂವಹನ ಕೌಶಲ ಬೆಳಸಿಕೊಳ್ಳಬೇಕು, ನಾಯಕರಾದವರು ಇನ್ನೂಳಿದವರಿಗೆ ಮಾದರಿಯಾಗಬೇಕು ಎಂದರು.
ಇದೇ ವೇಳೆ ಆಶಾ ಜ್ಯೋತಿ ವಿಶೇಷ ಮಕ್ಕಳ ವಸತಿಯುತ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ಅವರು ಎಐ ಮತ್ತು ರೋಬೋಟಿಕ್ ಲ್ಯಾಬ್ ಉದ್ಘಾಟಿಸಿದರು.
ವಂಶ ಪಟೇಲ ಸ್ಕೂಲ್ ಹೆಡ್‌ಬಾಯ್, ಸ್ಕೂಲ್ ಹೆಡ್ ಗರ್ಲ್ ಪ್ರಗತಿ ಹೊಸಪೇಠ, ಸ್ಕೂಲ್ ಶೈಕ್ಷಣಿಕ ಹೆಡ್‌ಬಾಯ್ ಶೀನಿವಾಸ ಗುಂಡಕಲ್ಲೆ, ಸ್ಕೂಲ್ ಶೈಕ್ಷಣಿಕ ಹೆಡ್ ಗರ್ಲ್ ಆಗಿ ಸರಸ್ವತಿ ಪಾಟೀಲ ಅವರು ನೇಮಕಗೊಂಡರು. ಇವರೊಂದಿಗೆ 16 ವಿದ್ಯಾರ್ಥಿಗಳ ಶಾಲಾ ಜವಾಬ್ದಾರಿ ಹಂಚಿಕೊಆಡರು.ಹಾಗೂ ಒಟ್ಟು ೨೦ ವಿದ್ಯಾರ್ಥಿಗಳ ಜೊತೆ ಶಾಲಾ ಸಂಸತ್ತನ್ನು ರಚಿಸಲಾಯಿತು.
ಪ್ರಾಚಾರ್ಯ ನಂದಾ ಚುನಮರಿ ಅವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ಪ್ರಿಯಾ ಜೊಲ್ಲೆ, ಡಾ.ಮಹಾದೇವ ಪಾಟೀಲ, ಡಾ.ಎ.ಪಿ.ಅಕ್ಕೋಳೆ, ಡಾ.ಆರ್.ಐ. ಕುರಬೇಟ, ಸಿ.ಪಿ ಬನ್ನಟ್ಟಿ, ಊರ್ಮಿಳಾ ಚೌಗಲೆ, ಸಂದೀಪ ಮಗದುಮ್ಮ, ಶಿವಾನಂದ ಪ್ರಭಾತ,ಉತ್ಕರ್ಷ ಸಮಾಜೆ, ರೂಪಾ ದುಂಡಗಿ,ಗಾಯತ್ರಿ ಕಲ್ಲೋಳಿ,ನಕುಶಾ ರಾಜಮಾನೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net