ಕೀಲು, ಮೂಳೆ ತಪಾಸಣೆ ಶಿಬಿರ

ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮೃತ್ತಿಕಾ ಬೃಂದಾವನದಲ್ಲಿ ಕಾಮಾಕ್ಷಿ ಆಸ್ಪತ್ರೆಯ ತಜ್ಞ ವೈದ್ಯರು ಕೀಲು ಮೂಳೆಗಳ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿದರು.
ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮೃತ್ತಿಕಾ ಬೃಂದಾವನದಲ್ಲಿ ಕಾಮಾಕ್ಷಿ ಆಸ್ಪತ್ರೆಯ ತಜ್ಞ ವೈದ್ಯರು ಕೀಲು ಮೂಳೆಗಳ ಸಮಸ್ಯೆಗಳ ಬಗ್ಗೆ ತಪಾಸಣೆ ನಡೆಸಿದರು.
Published on
ಗುಂಡ್ಲುಪೇಟೆ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿ ಮೃತ್ತಿಕಾ ಬೃಂದಾವನದಲ್ಲಿ ಗುರುವಾರ ಕಾಮಾಕ್ಷಿ ಆಸ್ಪತ್ರೆಯ ತಜ್ಞ ವೈದ್ಯರಿಂದ ಕೀಲು ಮೂಳೆಗಳ ತಪಾಸಣೆ ಉಚಿತ ಶಿಬಿರ ನಡೆಯಿತು.
ಡಾ.ವಿಕ್ರಂ, ಡಾ.ಸಿಂಧು, ಡಾ.ಚೈತ್ರಾ, ಡಾ.ಪ್ರೀತಂ ಹಾಗೂ ಡಾ.ಕರೇನ್ ಅಬ್ರಹಾಂ ಅವರು ಸುಮಾರು 350ಕ್ಕೂ ಹೆಚ್ಚಿನ ರೋಗಿಗಳನ್ನು ತಪಾಸಣೆಗೊಳಪಡಿಸಿ ಸಣ್ಣಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸಿ ಚಿಕಿತ್ಸೆ ನೀಡಿದರು. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದ 25 ರೋಗಿಗಳನ್ನು ಆಸ್ಪತ್ರೆಗೆ ಬರುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಮೃತ್ತಿಕಾ ಬೃಂದಾವನ ಟ್ರಸ್ಟ್‌ನ ರಾಜೇಶ್ವರಿ ಚಂದ್ರಶೇಖರ್ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net