ನಗರದ ಪತ್ರಿಕಾ ಭವನದಲ್ಲಿ ವಿಜಯವಾಣಿ ಸಹಯೋಗದಡಿ ಬನಶಂಕರಿ ಮಹಿಳಾ ಸಮಾಜ ಶುಕ್ರವಾರ ಏರ್ಪಡಿಸಿದ್ದ ಅಪರೂಪದ ಕಾರ್ಯಕ್ರಮದಲ್ಲಿ ಜಿಲ್ಲೆಯ 200ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ತಲಾ ಐದು ನೋಟ್ಬುಕ್, ಸ್ಕೂಲ್ಬ್ಯಾಗ್, ನೀರಿನ ಸ್ಟೀಲ್ ಬಾಟಲಿ ಜತೆ ಹಾಜರಿದ್ದ ಜೇವರ್ಗಿ ಕಾಲನಿ ಸರ್ಕಾರಿ ಪ್ರೌಢ ಶಾಲೆ, ಸರ್ಕಾರಿ ಪದವಿಪೂರ್ವ ಕಾಲೇಜು, ಯಡ್ರಾಮಿಯ ಸರ್ಕಾರಿ ಕನ್ಯಾ ಮತ್ತು ಬಾಲಕರ ಪ್ರೌಢ ಶಾಲೆ, ಸೇಡಂ ಸರ್ಕಾರಿ ಪ್ರೌಢಶಾಲೆ, ಚಿಂಚೋಳಿ ಸರ್ಕಾರಿ ಕನ್ಯಾ ಪ್ರೌಢ ಶಾಲೆ, ಉದನೂರದ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆ ಮಕ್ಕಳಿಗೆ ಅಧ್ಯಯನ ಸಾಮಗ್ರಿ ವಿತರಿಸಲಾಯಿತು.