ಯುವಜನತೆಯ ಕೌಶಲ ಅಭಿವೃದ್ಧಿಗೆ ಪೂರಕವಾಗಿ, ಕಂಪನಿಯು ನಾಲ್ಕು ವಾರಗಳ ಉಚಿತ ಆನ್‌ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮವಾದ 'ಜಿಯೋ ಎಐ ಕ್ಲಾಸ್‌ರೂಮ್' ಅನ್ನು ಪರಿಚಯಿಸಿದೆ. ಈ ಕಾರ್ಯಕ್ರಮವು ವಿಡಿಯೋ ಉಪನ್ಯಾಸಗಳು, ಪಿಡಿಎಫ್ ಅಧ್ಯಯನ ಸಾಮಗ್ರಿಗಳು, ರೆಫರೆನ್ಸ್ ವಿಡಿಯೊಗಳು ಮತ್ತು ಪ್ರತಿ ಮಾಡ್ಯೂಲ್‌ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್‌ಮೆಂಟ್‌ಗಳನ್ನು ಒಳಗೊಂಡಿರುವ ನಾಲ್ಕು ಹಂತದ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ.