ಪಕ್ಷನಿಷ್ಠೆ ಇರುವವರನ್ನು ಜೆಡಿಎಸ್ ಎಂದಿಗೂ ಕೈಬಿಡಲ್ಲ

ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು. ಮೀಸೆ ಮಹದೇವೇಗೌಡ, ಬಲ್ಲೇನಹಳ್ಳಿ ರಾಮಚಂದ್ರ, ಎಚ್.ಕೆ.ಅಶೋಕ್, ಮಂಜುನಾಥ, ದಿಲೀಪ್‌ಕುಮಾರ್, ಹೇಮಂತ್‌ಕುಮಾರ್, ಗಿರೀಶ್, ತೋಟ್ಟಪ್ಪಶೆಟ್ಟಿ ಇತರರಿದ್ದರು.
ಕೆ.ಆರ್.ಪೇಟೆ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಪಕ್ಷಕ್ಕೆ ಆಯ್ಕೆಯಾದ ನೂತನ ಅಧ್ಯಕ್ಷ ಮಲ್ಲೇನಹಳ್ಳಿ ಮೋಹನ್ ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಶಾಸಕ ಎಚ್.ಟಿ.ಮಂಜು ಅಭಿನಂದಿಸಿದರು. ಮೀಸೆ ಮಹದೇವೇಗೌಡ, ಬಲ್ಲೇನಹಳ್ಳಿ ರಾಮಚಂದ್ರ, ಎಚ್.ಕೆ.ಅಶೋಕ್, ಮಂಜುನಾಥ, ದಿಲೀಪ್‌ಕುಮಾರ್, ಹೇಮಂತ್‌ಕುಮಾರ್, ಗಿರೀಶ್, ತೋಟ್ಟಪ್ಪಶೆಟ್ಟಿ ಇತರರಿದ್ದರು.
Published on
ಕೆ.ಆರ್.ಪೇಟೆ: ಜೆಡಿಎಸ್ ಪಕ್ಷವು ಪ್ರಾಮಾಣಿಕರು ಹಾಗೂ ಪಕ್ಷನಿಷ್ಠೆ ಇರುವ ವ್ಯಕ್ತಿಗಳನ್ನು ಎಂದಿಗೂ ಕೈಬಿಡುವುದಿಲ್ಲ. ಅವರನ್ನು ಗುರುತಿಸಿ ಅವರಿಗೆ ಜವಾಬ್ದಾರಿಯ ಹುದ್ದೆಗಳನ್ನು ನೀಡುತ್ತದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ನೂತನ ಅಧ್ಯಕ್ಷರು ಮತ್ತು ಜಿಲ್ಲಾ ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದ ನೂತನ ತಾಲೂಕು ಅಧ್ಯಕ್ಷರಾಗಿ ಟಿಎಪಿಸಿಎಂಎಸ್ ನಿರ್ದೇಶಕ ಮಲ್ಲೇನಹಳ್ಳಿ ಮೋಹನ್ ಅವರನ್ನು ನೇಮಿಸಲಾಗಿದೆ. ಮೋಹನ್ ಅವರು ಕಳೆದ 25 ವರ್ಷಗಳಿಂದಲೂ ಜೆಡಿಎಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತನಾಗಿ, ತಾಲೂಕು ಪಂಚಾಯಿತಿ ಸದಸ್ಯರಾಗಿ, ಹೀಗೆ ವಿವಿಧ ಹಂತದ ಹುದ್ದೆಗಳನ್ನು ನಿಭಾಯಿಸುವ ಮೂಲಕ ಪಕ್ಷ ವಹಿಸಿದ ಎಲ್ಲ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡಿರುತ್ತಾರೆ. ಹೀಗಾಗಿ ಅವರಿಗೆ ತಾಲೂಕು ಜೆಡಿಎಸ್ ಅಧ್ಯಕ್ಷ ಹುದ್ದೆ ಒಲಿದು ಬಂದಿದೆ. ಹೀಗೆ ಜಿಲ್ಲಾ ಮಟ್ಟಕ್ಕೂ ಅನೇಕ ಪ್ರಾಮಾಣಿಕ ಕಾರ್ಯಕರ್ತರನ್ನು ಪಕ್ಷವು ಗುರುತಿಸಿ ನೇಮಕ ಮಾಡಲಾಗಿದೆ. ಪಕ್ಷದಲ್ಲಿ ಇನ್ನೂ ಹಲವಾರು ಹುದ್ದೆಗಳಿದ್ದು ಮುಂದಿನ ದಿನಗಳಲ್ಲಿ ಅವುಗಳನ್ನು ಪಕ್ಷದ ಕಾರ್ಯಕರ್ತರಿಗೆ ನೀಡಲಾಗುವುದು ಎಂದು ತಿಳಿಸಿದರು.
ಸಮನ್ವಯತೆಯಿಂದ ಕೆಲಸ ಮಾಡುತ್ತಿಲ್ಲ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು 3-4 ಕೈಗಾರಿಕೆಗಳನ್ನು ಮಂಡ್ಯ ಜಿಲ್ಲೆಗೆ ತರಲು ಹೆಚ್ಚಿನ ಆಸಕ್ತಿ ವಹಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಭೂಮಿ ಮಂಜೂರಾತಿ ಮಾಡದೆ ಸಬೂಬು ಹೇಳುತ್ತಿದೆ. ಬರಿ ಮಾತಿನಲ್ಲಿ ಜಮೀನು ನೀಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ನಿಯಮಾನುಸಾರ ಅನುಸರಿಸಬೇಕಾದ ಪ್ರಕ್ರಿಯೆಗಳನ್ನು ಅನುಸರಿಸಿ ಅಗತ್ಯ ಭೂಮಿ ನೀಡಲು ವಿಫಲವಾಗಿದೆ ಜಿಲ್ಲೆಗೆ ಕಾರ್ಖಾನೆಗಳು ಬಂದುಬಿಟ್ಟರೆ ಕುಮಾರಸ್ವಾಮಿ ಅವರಿಗೆ ಹೆಸರು ಬರುತ್ತೆ ಎಂಬ ಒಂದೇ ಕಾರಣಕ್ಕಾಗಿ ಜಮೀನು ನೀಡದೆ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಹಾಗೂ ಜಿಲ್ಲೆಯ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹುಲ್ಲೇಗೌಡ, ಜೆಡಿಎಸ್ ಕಾನೂನು ಘಟಕದ ಕುರುಬಳ್ಳಿನಾಗೇಶ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಮೀಸೆ ಮಹಾದೇವೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಬಲ್ಲೇನಹಳ್ಳಿ ರಾಮಚಂದ್ರ, ನಾಗರಾಜೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಚ್.ಕೆ.ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕರಾದ ಮಂಜುನಾಥ, ದಿಲೀಪ್‌ಕುಮಾರ. ಪುರಸಭೆ ಮಾಜಿ ಸದಸ್ಯರಾದ ಹೇಮಂತ್‌ಕುಮಾರ್, ಗಿರೀಶ್, ಮುಖಂಡರಾದ ತೋಟಪ್ಪಶೆಟ್ಟಿ, ವಕೀಲ ಧನಂಜಯಕುಮಾರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸುಜೇಂದ್ರಕುಮಾರ್, ಕೊರಟಿಕೆರೆ ದಿನೇಶ್, ಬೇಲದಕೆರೆ ನಂಜಪ್ಪ ಸೇರಿದಂತೆ ನೂರಾರು ಜೆಡಿಎಸ್ ಕಾರ್ಯಕರ್ತರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net