ಯುವ ನೇತಾರರ ಭವಿಷ್ಯ ರೂಪಿಸುವ ಜೆಸಿಐ

ಏಳನೇ ಹೊಸಕೋಟೆಯಲ್ಲಿ ಆಯೋಜಿಸಿದ್ದ  ಸಮ್ಮೇಳನವನ್ನು ಭರತ್ ಎನ್.ಆಚಾರ್ಯ ಉದ್ಘಾಟಿಸಿದರು. ಯಶಸ್ವಿನಿ, ಪ್ರಜ್ವಲ್ ಎಸ್. ಎಚ್.ಆರ್.ಪ್ರಶಾಂತ್, ಜಯಪ್ರಕಾಶ್,ಜಗತ್, ಮಂಜುನಾಥ್, ಶ್ರುತಿ, ಫೆಲ್ಸಿ ಡೆನಿಸ್ ಇದ್ದರು.
ಏಳನೇ ಹೊಸಕೋಟೆಯಲ್ಲಿ ಆಯೋಜಿಸಿದ್ದ ಸಮ್ಮೇಳನವನ್ನು ಭರತ್ ಎನ್.ಆಚಾರ್ಯ ಉದ್ಘಾಟಿಸಿದರು. ಯಶಸ್ವಿನಿ, ಪ್ರಜ್ವಲ್ ಎಸ್. ಎಚ್.ಆರ್.ಪ್ರಶಾಂತ್, ಜಯಪ್ರಕಾಶ್,ಜಗತ್, ಮಂಜುನಾಥ್, ಶ್ರುತಿ, ಫೆಲ್ಸಿ ಡೆನಿಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ.ಭರತ್ ಎನ್.ಆಚಾರ್ಯ
  • ಜೆ.ಸಿ.ಐ ವಲಯ 14
ಸುಂಟಿಕೊಪ್ಪ: ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಯಾದ ಜೂನಿಯರ್ ಚೇಂಬರ್ ಆಫ್ ಇಂಟರ್ ನ್ಯಾಷನಲ್ (ಜೆಸಿಐ) ದೇಶದಲ್ಲಿ ಉತ್ತಮ ತರಬೇತಿ ನೀಡುವ ಮೂಲಕ ಯುವ ನೇತಾರರ ಭವಿಷ್ಯ ರೂಪಿಸುವ ದಿಸೆಯಲ್ಲಿ ವಿಶ್ವಮಟ್ಟದಲ್ಲಿ ಮೊದಲನೇ ಸ್ಥಾನದಲ್ಲಿದೆ ಎಂದು ಜೆಸಿಐ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಆರ್.ಪಿ.ಪಿ.ಭರತ್ ಎನ್.ಆಚಾರ್ಯ ಹೇಳಿದರು.
ಜೆ.ಸಿ.ಐ ವಲಯ 14ರ ವತಿಯಿಂದ ಹೋಬಳಿಯ ಏಳನೇ ಹೊಸಕೋಟೆ ಗ್ರಾಮದ ಸಬಾಸ್ಟಿನ್ ಸಮುದಾಯ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಭಾತಾ ಅಭಿವೃದ್ಧಿ ಸಮ್ಮೇಳನ ಸಂಭ್ರಮ-2026 ಉದ್ಘಾಟಿಸಿ ಮಾತನಾಡಿದರು. ಇಂತಹ ಯುವ ಸಮ್ಮೇಳನಗಳು ಯುವ ನಾಯಕರ ಅಭಿವೃದ್ಧಿ ಹಾಗೂ ಸಂಸ್ಥೆಯ ಬೆಳವಣಿಗೆಗೆ ಪೂರಕವಾದದ್ದು. ಜೆಸಿಐ ಇಂಡಿಯಾ ದೇಶದಾದ್ಯಂತ 28ಕ್ಕೂ ಹೆಚ್ಚು ವಲಯ ಹೊಂದಿದ್ದು, ಪ್ರತಿ ವಲಯ ಸದಸ್ಯರ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಹಾಗೂ ವ್ಯವಹಾರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಇಂತಹ ಸಮ್ಮೇಳನವನ್ನು ಪ್ರತಿವರ್ಷ ಆಯೋಜಿಸುತ್ತಿದೆ ಎಂದರು.
ಜೆಸಿಐ ವಲಯ 14ರ ವಲಯ ಅಧ್ಯಕ್ಷ ಪ್ರಜ್ವಲ್ ಎಸ್.ಜೈನ್ ಮಾತನಾಡಿ, ಜೆಸಿಐ ಸಂಸ್ಥೆ ಯುವ ಮನಸ್ಸುಗಳ ಕನಸ್ಸನ್ನು ನನಸು ಮಾಡುವುದರ ಜತೆಗೆ ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿ ತೊಡಗಿದೆ ಎಂದರು.
ಜೆಸಿಐ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷೆ ಯಶಸ್ವಿನಿ ಮಾತನಾಡಿ, ಯುವಜನಾಂಗವುಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಯುವಕರಲ್ಲಿ ಉತ್ತಮ ಜ್ಞಾನ,ಅಪ್ರತಿಮ ಜ್ಞಾಣ್ಮೆ, ಛಲ ಮತ್ತು ಗುರಿ ಇದ್ದರೆ ಏನಾನ್ನದಾರೂ ಸಾಧಿಸಬಹುದು ಎಂದರು.
ನಿರ್ದೇಶಕ ಎಚ್.ಆರ್.ಪ್ರಶಾಂತ್ ಮಾತನಾಡಿ, ಯುವಕರು ಭವಿಷ್ಯದ ಕನಸನ್ನು ನನಸು ಮಾಡಲು ಇಂತಹ ಸಮ್ಮೇಳನಗಳು ಸಹಕಾರಿಯಾಗಿವೆ ಎಂದರು.
ಜೆಸಿಐ ಸಂಸ್ಥೆಯ ವಲಯ ಉಪಾಧ್ಯಕ್ಷ ಜಗತ್, ಕಾರ್ಯದರ್ಶಿ ಶೃತಿ ರೋಹಿತ್, ಆತಿಥೇಯ ಸುಂಟಿಕೊಪ್ಪ ಜೆಸಿಐ ಸಂಸ್ಥೆಯ ಅಧ್ಯಕ್ಷ ಜಯಪ್ರಕಾಶ್, ಕಾರ್ಯದರ್ಶಿ ಎಚ್.ಮಂಜುನಾಥ್, ಕಾರ್ಯಕ್ರಮ ನಿರ್ದೇಶಕಿ ಫೆಲ್ಸಿ ಡೆನಿಸ್, ವಲಯ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಕಾಯರ್ ಮಾರ್ ದೇವಿಪ್ರಸಾದ್, ಮಧೋಸ್ ಪೂವಯ್ಯ ಇತರರಿದ್ದರು.
ಸೋಮವಾರಪೇಟೆ ಕ್ರಿಯೇಟಿವ್ ಅಕಾಡೆಮಿಯ ವಿದ್ಯಾರ್ಥಿನಿ ಸಾತ್ವಿಕ ಸತೀಶ್ ಪ್ರದರ್ಶಿಸಿದ ಭರತ ನಾಟ್ಯ ಗಮನ ಸೆಳೆಯಿತು. ಜೆಸಿಐ ಸಂಸ್ಥೆಯಲ್ಲಿ ವರ್ಷಪೂರ್ತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಘಟಕಗಳು, ಪದಾಧಿಕಾರಿಗಳು ಹಾಗೂ ಸಮಾಜದ ಯುವ ಸಾಧಕರನ್ನು ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net