ಜಯತೀರ್ಥರು ದೇಶ ಕಂಡ ಮಹಾನ್ ಯತಿ

ಜಯತೀರ್ಥರ ಆರಾಧನೆ ನಿಮಿತ್ತ ವಿವಿಧ ಹೂ ಹಾಗೂ ರಜತ ಕವಚದಿಂದ ಅಲಂಕೃತಗೊAಡ ಕೆಂಭಾವಿ ಉತ್ತರಾದಿ ಮಠದ ಶ್ರೀ ಸತ್ಯನಾರಾಯಣ, ಶ್ರೀ ಸುಮಧ್ವ ಮಾರುತಿ ಹಾಗೂ ಯತಿ ಚತುಷ್ಟಯ ವೃಂದಾವನ.
ಜಯತೀರ್ಥರ ಆರಾಧನೆ ನಿಮಿತ್ತ ವಿವಿಧ ಹೂ ಹಾಗೂ ರಜತ ಕವಚದಿಂದ ಅಲಂಕೃತಗೊAಡ ಕೆಂಭಾವಿ ಉತ್ತರಾದಿ ಮಠದ ಶ್ರೀ ಸತ್ಯನಾರಾಯಣ, ಶ್ರೀ ಸುಮಧ್ವ ಮಾರುತಿ ಹಾಗೂ ಯತಿ ಚತುಷ್ಟಯ ವೃಂದಾವನ.
Published on

ಪ್ರಮುಖ ಮುಖ್ಯಾಂಶಗಳು

  • ಸಂಸ್ಕೃತ ವಿದ್ವಾಂಸ ಪ್ರಭಂಜನಾಚಾರ್ಯ ಹೇಳಿಕೆ
  • ಆರಾಧನಾ ಮಹೋತ್ಸವದಲ್ಲಿ ವಿಶೇಷ ಉಪನ್ಯಾಸ
ಕೆಂಭಾವಿ:

ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆಗಳನ್ನು ಬರೆದು ಜನಸಾಮಾನ್ಯರಿಗೂ ಗ್ರಂಥಗಳ ಅರಿವು ಮೂಡಿಸಿದ ಮಹಾನ್ ಯತಿಗಳು ಮಳಖೇಡದ ಉತ್ತರಾದಿ ಮಠದ ಶ್ರೀ ಜಯತೀರ್ಥರು ಎಂದು ಸಂಸ್ಕೃತ ವಿದ್ವಾಂಸ ಪಂ.ಪ್ರಭAಜನಾಚಾರ್ಯ ಇಂದರಗಿ ಹೇಳಿದರು.

ಪಟ್ಟಣದ ಉತ್ತರಾದಿ ಮಠದ ಯತಿಚತುಷ್ಟಯರ ವೃಂದಾವನ ಸನ್ನಿಧಾನದಲ್ಲಿ ಮೂರು ದಿನಗಳವರೆಗೆ ನಡೆದ ಜಯತೀರ್ಥರ ಆರಾಧನೆ ನಿಮಿತ್ತ ಉಪನ್ಯಾಸ ನೀಡಿದ ಅವರು, ಮನಸ್ಸಿನ ಚಂಚಲತೆ ಹೋಗಲಾಡಿಸಿ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಲು ತತ್ವಜ್ಞಾನಕ್ಕೆ ಮೊರೆ ಹೋಗಿ ಭಗವಂತನಲ್ಲಿ ಅನನ್ಯ ಭಕ್ತಿ ಮಾಡುವುದೆ ಉತ್ತಮ ಮಾರ್ಗ ಎಂದ ಅವರು, ಮಳಖೇಡದ ಶ್ರೀ ಜಯತೀರ್ಥರು ದೇಶ ಕಂಡ ಮಹಾನ್ ಯತಿ ಶ್ರೇಷ್ಠರು ಎಂದು ಹೇಳಿದರು. ಜಯತೀರ್ಥರು ರಚಿಸಿದ ಶ್ರೀಸುಧಾ ಗ್ರಂಥ ಅತ್ಯಂತ ಶ್ರೇಷ್ಠ ಗ್ರಂಥವಾಗಿದೆ ಎಂದರು.
ಮೂರು ದಿನಗಳ ಕಾಲ ನಡೆದ ವೈಭವದ ಆರಾಧನಾ ಮಹೋತ್ಸವದಲ್ಲಿ ಪ್ರಭೋದೋತ್ಸವ, ವಿಷ್ಣು ಸಹಸ್ರನಾಮ, ವಾಯುಸ್ತುತಿ, ಅಷ್ಟೋತ್ತರ, ಪಂಚಾಮೃತ, ಶ್ರೀ ಸತ್ಯನಾರಾಯಣ, ಶ್ರೀ ಸುಮಧ್ವ ಮಾರುತಿ ಹಾಗೂ ಯತಿಚತುಷ್ಠಯರ ವೃಂದಾವನಕ್ಕೆ ವಿಶೇಷ ಹೂ ಮತ್ತು ರಜತ ಕವಚ ಅಲಂಕಾರ, ಭಜನೆ, ರಥೋತ್ಸವ, ಪಲ್ಲಕ್ಕಿ ಮೆರವಣಿಗೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಇದೇ ವೇಳೆ ರಘೂತ್ತಮ ಭಜನಾ ಮಂಡಳಿ ಹಾಗೂ ಪ್ರಮೋದಿನ ಮಹಿಳಾ ಭಜನಾ ಮಂಡಳಿ ಸದಸ್ಯರಿಂದ ಭಜನೆ ನೆರವೇರಿತು. ಹಣಮಂತರಾವ ಕುಲಕರ್ಣಿ, ಸಂಜೀವರಾವ ಕುಲಕರ್ಣಿ, ಮಧ್ವರಾವ ನಾಡಿಗೇರ ಅವರಿಂದ ಅನ್ನ ಸಂತರ್ಪಣೆ ನಡೆಯಿತು. ಜಯಸತ್ಯಪ್ರಮೋದ ಸೇವಾ ಸಂಘದ ಕಾರ್ಯಕರ್ತರು, ಪ್ರಮೋದಿನಿ ಮಹಿಳಾ ಭಜನಾ ಮಂಡಳಿ ಸದಸ್ಯರು ಹಾಗೂ ಶ್ರೀ ಸತ್ಯಪ್ರಮೋದ ಯುವ ಸೇನಾ ಪದಾಽಕಾರಿಗಳು ಸೇರಿ ಸುತ್ತಲಿನ ಅನೇಕ ಭಕ್ತರು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net