_1779199240652.webp?w=480&auto=format%2Ccompress&fit=max)
_1779199240652.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಜಯನಗರ4ನೇಬ್ಲಾಕ್‌ನಲ್ಲಿರುವ ಶ್ರೀವಿನಾಯಕಸ್ವಾಮಿ ದೇವಾಲಯದಲ್ಲಿ 49ನೇವರ್ಷದ ಪ್ರತಿಷ್ಠಾಪನಾ ವಾರ್ಷಿಕೋತ್ಸವದಅಂಗವಾಗಿ ವಿವಿಧ ಧಾರ್ಮಿಕ ಮತ್ತುಸಾಂಸ್ಕೃತಿಕ ಕಾರ್ಯಕ್ರಮಗಳನ್ನುಹಮ್ಮಿಕೊಳ್ಳಲಾಗಿದೆ.
ಈಗಾಗಲೇಆರಂಭವಾಗಿರುವ ವಾರ್ಷಿಕೋತ್ಸವಕಾರ್ಯಕ್ರಮವು ಶುಕ್ರವಾರದವರೆಗೆನಡೆಯಲಿದ್ದು,ಮೂಲ ದೇವರ ಮೂರ್ತಿಅಷ್ಟಬಂಧ ಪ್ರತಿಷ್ಠಾಪನೆ,ನಾಗದೇವತೆಗಳಿಗೆಅಭಿಷೇಕ ಪೂಜೆ,49 ಸಂವತ್ಸರಗಳಪ್ರತಿಷ್ಠಾ ಕಳಸ ಸ್ಥಾಪನೆ,ಏಕಾದಶ ರುದ್ರಹೋಮಏರ್ಪಡಿಸಲಾಗಿದೆ.
ಗುರುವಾರವಿಶ್ವಶಾಂತಿಗಾಗಿ ಸಂಕಲ್ಪ ಮಾಡಿವಿನಾಯಕ ಸ್ವಾಮಿಗೆ ಶಾಂತಿಪೂಜೆಹಾಗೂ ಹೋಮ ನಡೆಸಲಾಗುವುದು.ಶುಕ್ರವಾರ (ಮೇ22)ವಿಶೇಷವಾಗಿ1008 ಲೀ.ಹಾಲು,108 ಲೀ ಮೊಸರು,108 ಕೆ.ಜಿ.ತುಪ್ಪಮತ್ತು ಜೇನುತುಪ್ಪ ಹಾಗೂ 108ಬಗೆಯ ಹಣ್ಣಿನರಸಗಳಿಂದ ದೇವರಿಗೆ ಅಭಿಷೇಕ ಪೂಜೆನೆರವೇರಲಿದೆ.ಮಧ್ಯಾಹ್ನ 12ಕ್ಕೆಮಹಾಮಂಗಳಾರತಿಯೊಂದಿಗೆ ಪೂಜೆಸಂಪನ್ನಗೊಳ್ಳಲಿದ್ದು,10 ಸಾವಿರ ಭಕ್ತಾದಿಗಳಿಗೆಅನ್ನಸಂತರ್ಪಣೆ ಏರ್ಪಡಿಸಲಾಗಿದೆಎಂದು ದೇವಾಲಯ ಪ್ರಧಾನ ಅರ್ಚಕರಾದಶ್ರೀಚನ್ನವೀರ ದೇವರು ತಿಳಿಸಿದ್ದಾರೆ.