ತ್ರಿವಿಧ ದಾಸೋಹಕ್ಕೆ ಜಯದೇವ ಸ್ವಾಮೀಜಿ ಪ್ರೇರಣೆ

Jayadeva Swamiji's inspiration for the three types of slavery
Jayadeva Swamiji's inspiration for the three types of slavery
Published on
ತಿಪಟೂರು: ಸಿದ್ಧಗಂಗಾ ಮಠದಲ್ಲಿನ ತ್ರಿವಿಧ ದಾಸೋಹಕ್ಕೆ ಪ್ರೇರಣೆಯೇ ಶ್ರೀ ಜಯದೇವ ಸ್ವಾಮೀಜಿ. ಕೆಲ ಸ್ವಾಮೀಜಿಗಳಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸಿ ಇದೆ. ಆದರೆ ಜಯದೇವ ಸ್ವಾಮೀಜಿ ಅವರದ್ದು ಒರಿಜಿನಲ್ ಇಂಟಲಿಜೆನ್ಸಿ ಎಂದು ಹಿರೇಮಠದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಪಿಜಿಎಂ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶ್ರೀ ಜಯದೇವ ಮುರುರಾಜೇಂದ್ರ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವದಲ್ಲಿ ವಾತನಾಡಿದ ಅವರು, ತ್ರಿವಿಧ ದಾಸೋಹಿಗಳು ಎಂದಾಕ್ಷಣ ಸಿದ್ಧಗಂಗಾ ಮಠದ ಡಾ.ಶಿವಕುವಾರ ಸ್ವಾಮೀಜಿ ನೆನಪಾಗುವುದು ಸಹಜ. ಆದರೆ, ಕರುನಾಡಿನಲ್ಲಿ ಮೊಟ್ಟಮೊದಲು ತ್ರಿವಿಧ ದಾಸೋಹಕ್ಕೆ ಚಾಲನೆ ನೀಡಿದ್ದು ಜಯದೇವರು. 1930ರಲ್ಲಿ ಶ್ರೀ ಜಯದೇವರ ಪಟ್ಟಾಭಿಷೇಕವಾದ ವರ್ಷದ ನಂತರ ನಾಲ್ವಡಿ ಕೃಷ್ಣರಾಜೆಂದ್ರರ ಪಟ್ಟಾಭಿಷೇಕ ನಡೆಯಿತು. ಈ ಮೂಲಕ ರಾಜವಾರ್ಗ ಮತ್ತು ಋಷಿ ವಾರ್ಗ ಸ್ಥಾಪನೆ ಆಗಿ, ನಾಲ್ವಡಿ ಕೃಷ್ಣರೇಜೇಂದ್ರರು ರಾಜ ಋಷಿಗಳಾದರೆ, ಜಯದೇವರು ಋಷಿರಾಜರೆನಿಸಿಕೊಂಡರು ಎಂದರು.
ಪೂರ್ವಜರ ನಿರ್ಧಾರದಿಂದ ವಿಪ್ರಯ ಮತ್ತು ವೀರಶೈವ ಮಠಗಳು ಇಂದಿಗೂ ಅಸ್ತಿತ್ವ ಉಳಿಸಿಕೊಂಡಿವೆ. ವೀರಶೈವ ಮಠಗಳಲ್ಲಿ ಸಕಲರಿಗೂ ಆಶ್ರಯ, ಅನ್ನ, ಮತ್ತು ಜ್ಞಾನ ನೀಡುವ ತ್ರಿವಿಧ ದಾಸೋಹ ಪದ್ದತಿ ಇದೆ ಎಂದರು.
ನೊಣವಿನಕೆರೆ ಕಾಡಸಿದ್ದೇಶ್ವರ ವಠದ ಕಿರಿಯ ಶ್ರೀ ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ವಾತನಾಡಿ, ಧಾರ್ಮಿಕ ಶಿಕ್ಷಣ ನೀತಿ ಕೇವಲ ವೀರಶೈವ ಸವಾಜದಲ್ಲಿ ವಾತ್ರ ಅಸ್ತಿತ್ವದಲ್ಲಿದೆ. ಸವಾಜಕ್ಕೆ, ಸಂಸಾರಕ್ಕೆ ಮತ್ತು ಸವಾಧಾನಕ್ಕೆಂದು ಗಳಿಕೆಯನ್ನು ಮೀಸಲಿಟ್ಟ ಏಕೈಕ ಸವಾಜವೆಂದರೆ ಅದು ವೀರಶೈವ ಸವಾಜ ಎಂದರು.
ಶಾಸಕ ಕೆ.ಷಡಕ್ಷರಿ ವಾತನಾಡಿ, ತಾಲೂಕಿನಲ್ಲಿ 80 ಸಾವಿರ ವೀರಶೈವ ಮತದಾರರಿದ್ದಾರೆ. ಆದರೆ, ಸಭೆಗೆ ಬಂದಿರುವುದು 800 ಮಂದಿಗೂ ಕಡಿಮೆ. ಎಲ್ಲ ಸಮುದಾಯಗಳಲ್ಲೂ ಆಸಕ್ತರ ಸಂಖ್ಯೆ ಕಡಿಮೆ ಆಗುತ್ತಿರುವುದು ಕಳವಳಕಾರಿ, ಇದು ಹೀಗೇ ಮುಂದುವರಿದರೆ ಮುಂದಿನ ಪೀಳಿಗೆಗೆ ತಿಳಿಸಲು ಏನೂ ಇರಲ್ಲ. ಸವಾಜದ ಏಳಿಗೆ ಮತ್ತು ಅಭಿವೃದ್ಧಿಯ ಚಿಂತನೆ ಮಠಾಧೀಶರಿಗೆ ಇದೆ. ಆದರೆ, ಆಸಕ್ತರ ಕೊರತೆ ಕಾಡುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net